Festivals

ಶ್ರಾವಣ ಮಾಸ 2023

ನಂದಿಯ ಕಿವಿಯಲ್ಲಿ ಇಷ್ಟಾರ್ಥ ಏಕೆ ಹೇಳುತ್ತಾರೆ? ಅದು ಶಿವನಿಗೆ ಹೇಗೆ ತಲುಪುತ್ತೆ?

Image credits: Getty

ನಂದಿಗೆ ಸಂಬಂಧಿಸಿದ ನಂಬಿಕೆ ಏನು?

ಶಿವನ ದೇವಾಲಯದ ಹೊರಗೆ ಖಂಡಿತವಾಗಿಯೂ ನಂದಿಯ ವಿಗ್ರಹವಿರುತ್ತದೆ. ನಂದಿಯ ಕಿವಿಯಲ್ಲಿ ಇಷ್ಟಾರ್ಥಗಳನ್ನು ಹೇಳುವ ಸಂಪ್ರದಾಯ ಬಹಳ ಪ್ರಾಚೀನವಾದುದು. ಈ ಸಂಪ್ರದಾಯದ ಹಿಂದೆ ಒಂದು ವಿಶೇಷ ಕಾರಣ ಅಡಗಿದೆ. 

Image credits: Getty

ನಂದಿಯು ಶಿವನ ವಾಹನ

ಶಿವಪುರಾಣದಲ್ಲಿ ನಂದಿಯನ್ನು ಶಿವನ ಅವತಾರವೆಂದು ಬಣ್ಣಿಸಲಾಗಿದೆ. ಪ್ರತಿ ಶಿವನ ದೇವಾಲಯದ ಹೊರಗೆ ನಂದಿಯ ಪ್ರತಿಮೆ ಅಗತ್ಯ. ನಂದಿ ಇಲ್ದೇ ಶಿವ ದೇವಾಲಯವನ್ನು ಅಪೂರ್ಣವೆಂದು ಪರಿಗಣಿಸಲಾಗಿದೆ.
 

Image credits: Getty

ನಂದಿಯ ಕಿವಿಯಲ್ಲಿ ಇಷ್ಟಾರ್ಥ ಹೇಳಬೇಕು

ಶಿವನ ದೇವಸ್ಥಾನಕ್ಕೆ ಬಂದಾಗಲೆಲ್ಲಾ ನಂದಿಯ ಕಿವಿಯಲ್ಲಿ ತನ್ನ ಇಚ್ಛೆಯನ್ನು ಹೇಳಬೇಕು. ಹೀಗೆ ಮಾಡುವುದರಿಂದ ಅವರ ಇಷ್ಟಾರ್ಥಗಳು ಬಹುಬೇಗ ಈಡೇರುತ್ತವೆ ಎಂಬ ನಂಬಿಕೆ ಇದೆ.

Image credits: Getty

ಈ ಸಂಪ್ರದಾಯಕ್ಕೆ ಕಾರಣ ಏನು?

ಮಹಾದೇವನು ತಪಸ್ವಿ ಮತ್ತು ಅವನು ಯಾವಾಗಲೂ ಸಮಾಧಿಯಲ್ಲಿ ಇರುತ್ತಾನೆ ಇಂತಹ ಪರಿಸ್ಥಿತಿಯಲ್ಲಿ ನಮ್ಮ ಮಾತು ನೇರವಾಗಿ ಅವರಿಗೆ ತಲುಪುವುದಿಲ್ಲ. ಶಿವನ ಸಮಾಧಿಯಿಂದ ಎದ್ದ ನಂತರ ನಂದಿಯೇ ಇಷ್ಟಾರ್ಥಗಳನ್ನು ತಿಳಿಸುತ್ತಾರೆ.

Image credits: Getty

ನಂದಿಯು ಶಿವನ ಗಣಾಧ್ಯಕ್ಷ

ನಂದಿಯು ಶಿವನ ಗಣಾಧ್ಯಕ್ಷ ಮತ್ತು ಶಿವನ ಅವತಾರವೂ ಹೌದು. ಮಹಾದೇವನು ತನ್ನ ಕಿವಿಯಲ್ಲಿ ಹೇಳಿದ ಇಷ್ಟಾರ್ಥಗಳನ್ನು ತ್ವರಿತವಾಗಿ ಆಲಿಸುತ್ತಾನೆ ಮತ್ತು ಭಕ್ತರ ಸಮಸ್ಯೆಗಳನ್ನು ನಿವಾರಿಸುತ್ತಾನೆ.

Image credits: Getty
Find Next One