Festivals
ಶ್ರಾವಣ ಮಾಸದಲ್ಲಿ ಶಿವನಿಗೆ ಈ 5 ವಸ್ತುಗಳನ್ನು ಅರ್ಪಿಸಿ ಅಭಿವೃದ್ದಿ ಹೊಂದಿ.
ಶ್ರಾವಣ ಮಾಸದಲ್ಲಿ ಶಿವನಿಗೆ ಕೆಲವು ವಿಶೇಷ ವಸ್ತುಗಳನ್ನು ಅರ್ಪಿಸಿದರೆ, ನಿಮ್ಮ ಪ್ರತಿಯೊಂದು ಆಸೆಯೂ ಈಡೇರುತ್ತದೆ. ಇದರೊಂದಿಗೆ, ಆರ್ಥಿಕ ಲಾಭದ ಸಾಧ್ಯತೆಗಳನ್ನು ಸಹ ಮಾಡಬಹುದು.
ಶ್ರಾವಣದಲ್ಲಿ ಶಿವನಿಗೆ ಪಂಚಾಮೃತವನ್ನು ವಿಶೇಷವಾಗಿ ಅರ್ಪಿಸಲಾಗುತ್ತದೆ ಪಂಚಾಮೃತದಲ್ಲಿ ಹಾಲು ,ಮೊಸರು, ತುಪ್ಪ,ಜೇನುತುಪ್ಪ ಮತ್ತು ಸಕ್ಕರೆಯನ್ನು ಬೆರೆಸಲಾಗುತ್ತದೆ.
ಶ್ರಾವಣದಲ್ಲಿ ಶಿವನಿಗೆ ಹಸುವಿನ ಹಾಲಿನೊಂದಿಗೆ ಭಾಂಗ್ ಅನ್ನು ಅರ್ಪಿಸಿ. ಹಾಲು ಮತ್ತು ಭಾಂಗ್ ಎರಡೂ ಶಿವನಿಗೆ ವಿಶೇಷವಾಗಿ ಪ್ರಿಯವಾಗಿವೆ. ಇದರಿಂದ ಪ್ರಸನ್ನನಾದ ಶಿವನು ಭಕ್ತನ ಪ್ರತಿಯೊಂದು ಆಸೆಯನ್ನು ಈಡೇರಿಸುತ್ತಾನೆ.
ಶ್ರಾವಣದಲ್ಲಿ ಶಿವನಿಗೆ ಹಾಲನ್ನು ಅರ್ಪಿಸುವ ಸಂಪ್ರದಾಯವಿದೆ. ಹಾಲಿನೊಂದಿಗೆ ಡ್ರೈ ಫ್ರೂಟ್ಸ್ ಸೇರಿಸಿ ಶಿವನಿಗೆ ಅರ್ಪಿಸಬೇಕು. ಇದರಿಂದ ಹಣ ಮತ್ತು ಲಾಭವು ಉಂಟಾಗುತ್ತದೆ. ಹಾಗೆಯೇ ಇತರ ಆಸೆಗಳು ಈಡೇರುತ್ತದೆ.
ಹಲ್ವಾವನ್ನು ಶಿವನಿಗೆ ಅರ್ಪಿಸಬಹುದು ಆದರೆ ಅದನ್ನು ಮನೆಯಲ್ಲಿಯೇ ಮಾಡಬೇಕು. ಮಹಾದೇವನಿಗೆ ಹಲ್ವಾ ನೈವೇದ್ಯದಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ.
ಹಸುವಿನ ಹಾಲಿನಿಂದ ಮಾಡಿದ ಖೀರ್ ಅನ್ನು ಶ್ರವಣದಲ್ಲಿ ಶಿವನಿಗೆ ಅರ್ಪಿಸಬಹುದು. ಅಕ್ಕಿ ,ಸಕ್ಕರೆ ಮತ್ತು ಹಾಲು, ಈ ಮೂರು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ ಇದು ಧನಲಾಭಾಗುವಂತೆ ಮಾಡುತ್ತದೆ.