Festivals
ಯಾವುದೇ ಮಂಗಳ ಅಥವಾ ಧಾರ್ಮಿಕ ಕಾರ್ಯ ತೆಂಗಿನಕಾಯಿ ಇಲ್ಲದೆ ಪೂರ್ಣಗೊಳ್ಳಲ್ಲ. ಇದನ್ನು ದೇವರು ಎಂದು ಪರಿಗಣಿಸಲಾಗುತ್ತೆ. ಹಾಗಾಗಿ ಪೂಜೆಗಳಲ್ಲಿ ತೆಂಗಿನಕಾಯಿ ಬಳಕೆ ಮುಖ್ಯವಾಗಿದೆ.
ಭಗವಾನ್ ವಿಷ್ಣು ಮೊದಲ ಬಾರಿ ಭೂಮಿಗೆ ಬಂದಾಗ ಸ್ವರ್ಗದಿಂದ ಮೂರು ವಸ್ತುಗಳನ್ನು ತನ್ನೊಂದಿಗೆ ತಂದಿದ್ದರು. ಮೊದಲನೆಯದು ಲಕ್ಷ್ಮೀ ದೇವಿ, ಎರಡನೆಯದು ಕಾಮಧೇನು ಹಸು, ಮೂರನೆಯದು ಕಲ್ಪವೃಕ್ಷ.
ಬಿಳಿಯಾದ ತೆಂಗಿನ ಕಾಯಿ ಪರಿಶುದ್ಧ ಮನಸ್ಸಿನ ಸಂಕೇತವೆಂದೇ ನಂಬಲಾಗುತ್ತದೆ.
ತೆಂಗಿನಕಾಯಿಯನ್ನು ಶ್ರೀಫಲ ಎನ್ನಲಾಗುತ್ತೆ. ಇದನ್ನು ಭಗವಾನ್ ವಿಷ್ಣು ಮತ್ತು ಲಕ್ಷ್ಮೀ ದೇವಿಯ ಪ್ರತೀಕ ಎನ್ನಲಾಗುತ್ತದೆ. ಅಲ್ಲದೇ ಇದರಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ಕೂಡ ವಾಸವಾಗಿದ್ದಾರೆ ಎನ್ನಲಾಗುತ್ತದೆ.
ನಾವು ಹಿಂದಿನಿಂದ ನೋಡುತ್ತಾ ಬಂದಿದ್ದೇವೆ, ಪೂಜೆಗಳಲ್ಲಿ ಮಹಿಳೆಯರು ತೆಂಗಿನಕಾಯಿ ಒಡೆಯುವುದೇ ಇಲ್ಲ. ಇದಕ್ಕೆ ಕಾರಣ ಏನು? ಅನ್ನೋದನ್ನು ತಿಳಿಯೋಣ…
ತೆಂಗಿನಕಾಯಿ ಒಂದು ಬೀಜಫಲವಾಗಿದೆ. ಇದನ್ನು ಮಹಿಳೆಯರ ಫಲವತ್ತತೆ ಸಂಬಂಧಿಸಿದ್ದು ಎನ್ನಲಾಗುತ್ತೆ. ಮಹಿಳೆಯರು ಬೀಜರೂಪದಲ್ಲಿ ಮಗುವಿಗೆ ಜನ್ಮ ನೀಡುತ್ತಾರೆ. ಹಾಗಾಗಿ ಅವರು ತೆಂಗಿನಕಾಯಿ ಒಡೆಯಬಾರದು ಎನ್ನಲಾಗುತ್ತೆ.
ಶಾಸ್ತ್ರದ ಅನುಸಾರವಾಗಿ ಮಹಿಳೆಯರು ತೆಂಗಿನಕಾಯಿ ಒಡೆಯುವುದು ಅಶುಭ ಎನ್ನಲಾಗುವುದು. ದೇವರ ಪೂಜೆಯ ಬಳಿಕ ಕೇವಲ ಮಹಿಳೆಯರು ಮಾತ್ರ ತೆಂಗಿನಕಾಯಿ ಒಡೆಯುತ್ತಾರೆ.
ಇದರಲ್ಲಿ ಕ್ಯಾಲರಿ ಹೆಚ್ಚಿದ್ದು, ಇದರ ನೀರು ದೇಹವನ್ನು ಹೈಡೇಟ್ ಆಗಿರಿಸುತ್ತೆ. ತೆಂಗಿನ ಮರದ ಬೇರು, ಎಲೆ, ಕಾಯಿ ಎಲ್ಲವೂ ಉಪಯೋಗಕ್ಕೆ ಬರುವಂತದ್ದಾಗಿದೆ.