ಹಬ್ಬಕ್ಕೆಂದು ತಂದ ಮಣ್ಣಿನ ಹಣತೆಗಳಿಗೆ ತಕ್ಷಣವೇ ಎಣ್ಣೆ ಹಾಕಿ ಹಚ್ಚಬೇಡಿ! ಯಾಕೆ ಗೊತ್ತಾ?
ನೇರವಾಗಿ ಎಣ್ಣೆ ಹಾಕಿದರೆ, ಒಣಗಿದ ಮಣ್ಣು ಅರ್ಧಕ್ಕಿಂತ ಹೆಚ್ಚು ಎಣ್ಣೆಯನ್ನು ತಾನೇ ಕುಡಿದುಬಿಡುತ್ತದೆ. ಇದರಿಂದ ದೀಪ ಬೇಗ ನಂದಿಹೋಗುತ್ತದೆ.
ಹಣತೆಗಳನ್ನು ಹಚ್ಚುವ ಮುನ್ನ ಕನಿಷ್ಠ 2 ಗಂಟೆ (ಅಥವಾ ರಾತ್ರಿ ಪೂರ್ತಿ) ನೀರಿನಲ್ಲಿ ಮುಳುಗಿಸಿಡಿ.
ಮಣ್ಣಿನ ಸಣ್ಣ ರಂಧ್ರಗಳು ನೀರನ್ನು ಹೀರಿಕೊಳ್ಳುತ್ತವೆ. ಇದರಿಂದ ಎಣ್ಣೆ ಹೀರಿಕೊಳ್ಳುವ ಜಾಗವೇ ಇರುವುದಿಲ್ಲ!
ನೀರಿನಿಂದ ತೆಗೆದ ನಂತರ ಹಣತೆಗಳನ್ನು ಬಟ್ಟೆಯ ಮೇಲೆ ಬೋರಲು ಹಾಕಿ (ಉಲ್ಟಾ ಇಟ್ಟು) ಚೆನ್ನಾಗಿ ಒಣಗಲು ಬಿಡಿ.
ಈಗ ಎಣ್ಣೆ ಅಥವಾ ತುಪ್ಪ ಹಾಕಿ ಹಚ್ಚಿ. ಹಣತೆ ಎಣ್ಣೆ ಕುಡಿಯುವುದಿಲ್ಲ, ದೀಪ ರಾತ್ರಿಯಿಡೀ ಶಾಂತವಾಗಿ ಬೆಳಗುತ್ತದೆ!
ವಿಷ್ಣುವಿನ ದಶ ಅವತಾರಗಳಿಂದ Gen-Zಗಳು ಕಲಿಯಬೇಕಾದ 10 ಪಾಠಗಳು
Ganpati Decoration 2026: ಕಡಿಮೆ ಖರ್ಚಿನಲ್ಲಿ ಗಣೇಶನಿಗೆ ಭರ್ಜರಿ ಅಲಂಕಾರ; ಇಲ್ಲಿವೆ ಬೆಸ್ಟ್ ಐಡಿಯಾಗಳು!
ಕಂಪ್ಯೂಟರ್‌ನಂತಿದೆ ಈ 3 ರಾಶಿಯ ನೆನಪಿನ ಶಕ್ತಿ, ಸಣ್ಣ ವಿಷಯವನ್ನೂ ಮರೆಯಲ್ಲ
4 ರಾಶಿಗೆ ಸುವರ್ಣಯುಗ ಆರಂಭದ ಬುಧ ಗೋಚರದ ಅವಧಿ ಇಲ್ಲಿದೆ ನೋಡಿ