Kannada

ಕಡಿಮೆ ಖರ್ಚಿನಲ್ಲಿ ಗಣೇಶನಿಗೆ ಭರ್ಜರಿ ಅಲಂಕಾರ; ಇಲ್ಲಿವೆ ಬೆಸ್ಟ್ ಐಡಿಯಾಗಳು!

ಗಣೇಶ ಚತುರ್ಥಿ ಹಬ್ಬಕ್ಕೆ ಮನೆಯಲ್ಲಿಯೇ ಕಡಿಮೆ ಖರ್ಚಿನಲ್ಲಿ ಸುಲಭವಾಗಿ ಅಲಂಕಾರ ಮಾಡಲು ಇಲ್ಲಿ ಕೆಲವು ಐಡಿಯಾಗಳನ್ನು ನೀಡಲಾಗಿದೆ. ಇವು ನಿಮ್ಮ ಮನೆಗೆ ಹೊಸ ಕಳೆ ನೀಡುತ್ತವೆ.
Kannada

ಹೂವುಗಳಿಂದ ಅಲಂಕಾರ

ಗಣೇಶೋತ್ಸವಕ್ಕೆ ನೀವು ಈ ರೀತಿಯ ಹೂವಿನ ಅಲಂಕಾರವನ್ನು ಮಾಡಬಹುದು. ಇದಕ್ಕಾಗಿ ನೀವು ನೈಜ ಹೂವುಗಳ ಜೊತೆಗೆ ಕೃತಕ ಹೂವುಗಳನ್ನು ಸಹ ಬಳಸಬಹುದು. ಇದು ಹೆಚ್ಚು ಕಾಲ ಬಾಳಿಕೆ ಬರುತ್ತದೆ.

Image credits: Social Media
Kannada

DIY ಡೆಕೋರೇಷನ್ ಐಡಿಯಾ

ಗಣಪತಿಗಾಗಿ ಇಂತಹ ವರ್ಣರಂಜಿತ ಬ್ಯಾಕ್‌ಡ್ರಾಪ್‌ಗಳನ್ನು ನೀವೇ ತಯಾರಿಸಬಹುದು. ಇದಕ್ಕಾಗಿ ವಿವಿಧ ಬಗೆಯ ಹೂವಿನ ಮಾಲೆಗಳು ಅಥವಾ ಇತರ ಅಲಂಕಾರಿಕ ವಸ್ತುಗಳನ್ನು ಬಳಸಬಹುದು.

Image credits: Social Media
Kannada

ಸೀರೆ ಬಳಸಿ ಬ್ಯಾಕ್‌ಡ್ರಾಪ್

ಮನೆಯಲ್ಲಿರುವ ಸುಂದರವಾದ ಸೀರೆಗಳನ್ನು ಬಳಸಿ ಆಕರ್ಷಕ ಮತ್ತು ಸರಳವಾದ ಬ್ಯಾಕ್‌ಡ್ರಾಪ್‌ ರೆಡಿ ಮಾಡಬಹುದು. ಇದರ ಮೇಲೆ ಗಣಪತಿಯ ಮಂತ್ರ ಅಥವಾ 'ಶ್ರೀ' ಎಂದು ಬರೆದರೆ ಮತ್ತಷ್ಟು ಚೆನ್ನಾಗಿ ಕಾಣುತ್ತದೆ.

Image credits: Social Media
Kannada

ಪೇಪರ್ ಬಳಸಿ ಮಾಡಿ ಬ್ಯಾಕ್‌ಡ್ರಾಪ್

ಕಡಿಮೆ ಖರ್ಚಿನಲ್ಲಿ ಆಕರ್ಷಕವಾಗಿ ಕಾಣುವ ಪೇಪರ್ ಬ್ಯಾಕ್‌ಡ್ರಾಪ್‌ ಮಾಡಬಹುದು. ಇಲ್ಲಿ ಬಣ್ಣದ ಪೇಪರ್‌ಗಳನ್ನು ಬಳಸಿ ನವಿಲುಗರಿಯ ವಿನ್ಯಾಸವನ್ನು ರಚಿಸಲಾಗಿದೆ. ಇದು ನೋಡಲು ತುಂಬಾನೇ ಸುಂದರ.

Image credits: Social Media
Kannada

ಕ್ರಿಯೇಟಿವ್ ಡೆಕೋರೇಷನ್

ಬಪ್ಪನಿಗಾಗಿ ಏನಾದರೂ ವಿಭಿನ್ನವಾಗಿ ಅಲಂಕಾರ ಮಾಡಬೇಕು ಎಂದುಕೊಂಡಿದ್ದರೆ, ಈ ರೀತಿ ಕ್ರಿಯೇಟಿವ್ ಆಗಿ ಯೋಚಿಸಬಹುದು. ಇಂತಹ ಹತ್ತಾರು ಐಡಿಯಾಗಳು ನಿಮಗೆ ಸೋಶಿಯಲ್ ಮೀಡಿಯಾದಲ್ಲಿ ಸಿಗುತ್ತವೆ.

Image credits: Social Media

ಕಂಪ್ಯೂಟರ್‌ನಂತಿದೆ ಈ 3 ರಾಶಿಯ ನೆನಪಿನ ಶಕ್ತಿ, ಸಣ್ಣ ವಿಷಯವನ್ನೂ ಮರೆಯಲ್ಲ

4 ರಾಶಿಗೆ ಸುವರ್ಣಯುಗ ಆರಂಭದ ಬುಧ ಗೋಚರದ ಅವಧಿ ಇಲ್ಲಿದೆ ನೋಡಿ

ದೃಷ್ಟಿಯಾಗಬಾರದು ಅಂದ್ರೆ, ಕಿವಿ ಬಳಿ ಅಲ್ಲ ಈ ಜಾಗದಲ್ಲಿ 21ದಿನ ಕಪ್ಪು ಬೊಟ್ಟು ಇಡಿ!

ಈ ವರ್ಷಾಂತ್ಯಕ್ಕೆ 4 ರಾಶಿಗಳಿಗೆ ಕಂಕಣಬಲ! ಮದುವೆಯಾಗಲು ಏನು ಮಾಡಬೇಕು?