ಕಡಿಮೆ ತೂಕದ ಚಿನ್ನದ ಉಂಗುರಗಳು, ನಿಮ್ಮ ಅಂದ ಹೆಚ್ಚಿಸುವ ಟ್ರೆಂಡಿ ಡಿಸೈನ್ಸ್
fashion Oct 01 2026
Author: Govindaraj S Image Credits:Instagram@junu_aj_gold
Kannada
ಕಡಿಮೆ ತೂಕ, ಸುಂದರ ಒಡವೆ
ಮಹಿಳೆಯರು ಈಗ ಕಡಿಮೆ ತೂಕದ ಚಿನ್ನದ ಉಂಗುರಗಳಿಗೆ ಹೆಚ್ಚು ಡಿಮ್ಯಾಂಡ್ ಇಡುತ್ತಿದ್ದಾರೆ. ಕಡಿಮೆ ಬಜೆಟ್‌ನಲ್ಲಿ ಸಿಗುವ ಈ ನಾಜೂಕಾದ ಉಂಗುರಗಳು ದಿನನಿತ್ಯದ ಬಳಕೆಗೆ ಪರ್ಫೆಕ್ಟ್ ಮ್ಯಾಚ್ ಆಗುತ್ತವೆ.
Image credits: Instagram@junu_aj_gold
Kannada
ಸಿಂಗಲ್ ಸ್ಟೋನ್ ಉಂಗುರ
ಕೇವಲ 1 ರಿಂದ 2 ಗ್ರಾಂ ತೂಕದ ಸಿಂಗಲ್ ಸ್ಟೋನ್ ಉಂಗುರಗಳು ಸಿಂಪಲ್ ಹಾಗೂ ಎಲಿಗೆಂಟ್ ಲುಕ್ ನೀಡುತ್ತವೆ. ಆಫೀಸ್ ಅಥವಾ ಕಾಲೇಜಿಗೆ ಹೋಗುವಾಗ ಪ್ರತಿದಿನ ಧರಿಸಲು ಇದು ಬೆಸ್ಟ್ ಆಯ್ಕೆ.
Image credits: Instagram@junu_aj_gold
Kannada
ಫ್ಲೋರಲ್ ಡಿಸೈನ್ ಉಂಗುರ
ಹೂವಿನ ವಿನ್ಯಾಸದ ಈ ಉಂಗುರಗಳನ್ನು 2 ರಿಂದ 3 ಗ್ರಾಂ ತೂಕದಲ್ಲಿ ಸುಲಭವಾಗಿ ಮಾಡಿಸಬಹುದು. ಸಾಂಪ್ರದಾಯಿಕ ಹಾಗೂ ಮಾಡರ್ನ್ ಲುಕ್ ಎರಡನ್ನೂ ಈ ಡಿಸೈನ್‌ನಲ್ಲಿ ನೀವು ಕಾಣಬಹುದು.
Image credits: Gemini AI
Kannada
ಮಿನಿಮಲ್ ಡೈಮಂಡ್ ಕಟ್
ಸಣ್ಣ ಡೈಮಂಡ್ ಕಟ್ ಅಥವಾ ಜಿರ್ಕಾನ್ ಹರಳುಗಳಿರುವ ಉಂಗುರಗಳು 1.5 ರಿಂದ 2.5 ಗ್ರಾಂನಲ್ಲಿ ಸಿದ್ಧವಾಗುತ್ತವೆ. ತೂಕದಲ್ಲಿ ಹಗುರವಾಗಿದ್ದರೂ ನೋಡಲು ಮಾತ್ರ ತುಂಬಾ ರಿಚ್ ಆಗಿ ಕಾಣುತ್ತವೆ.
Image credits: Instagram@junu_aj_gold
Kannada
ಮ್ಯಾಟ್ ಅಥವಾ ರೋಸ್ ಗೋಲ್ಡ್
ಮ್ಯಾಟ್ ಫಿನಿಶ್ ಅಥವಾ ರೋಸ್ ಗೋಲ್ಡ್ ಟಚ್ ಇರುವ ಉಂಗುರಗಳು ಕಡಿಮೆ ತೂಕದಲ್ಲೂ ಸಖತ್ ಆಕರ್ಷಕವಾಗಿ ಕಾಣುತ್ತವೆ. ಕೇವಲ 2 ರಿಂದ 3 ಗ್ರಾಂನಲ್ಲಿ ಇಂತಹ ಟ್ರೆಂಡಿ ಡಿಸೈನ್ ಮಾಡಿಸಬಹುದು.