ಕಡಿಮೆ ಡಿಸೈನ್‌ನೊಂದಿಗೆ ಸೊಗಸಾಗಿ ಕಾಣುವ ಈ ಬ್ರೇಸ್‌ಲೆಟ್‌ಗಳು ಸಿಂಪಲ್ ಸ್ಟೈಲ್ ಇಷ್ಟಪಡುವವರಿಗೆ ಖಂಡಿತ ಹಿಡಿಸುತ್ತೆ. ಇದನ್ನು ಕಡಿಮೆ ತೂಕದಲ್ಲಿ ಖರೀದಿಸಬಹುದು.
ಕಪ್ಪು ಮಣಿಯ ಬ್ರೇಸ್‌ಲೆಟ್‌ಗಳು ಈಗ ಸಖತ್ ಟ್ರೆಂಡ್‌ನಲ್ಲಿವೆ. ಇಂದಿನ ಯುವತಿಯರ ಸ್ಟೈಲ್‌ಗೆ ಇದು ಹೇಳಿ ಮಾಡಿಸಿದಂತಿದೆ.
ಹಾರ್ಟ್ ಶೇಪ್ ಹಾಗೂ ಇನ್ಫಿನಿಟಿ ಇಂಟರ್‌ಲಿಂಕ್ ಇರುವ ಈ ಗೋಲ್ಡ್ ಬ್ರೇಸ್‌ಲೆಟ್ ವೆಸ್ಟರ್ನ್ ಡ್ರೆಸ್‌ಗಳಿಗೆ ಟ್ರೆಂಡಿ ಲುಕ್ ಕೊಡುತ್ತೆ. ಆಫೀಸ್ ವೇರ್‌ಗೆ ಇದು ಬೆಸ್ಟ್ ಚಾಯ್ಸ್.
ಮಧ್ಯದಲ್ಲಿ ಕಲ್ಲು ಇರುವ ಈ ವಾಚ್ ಸ್ಟೈಲ್ ಬ್ರೇಸ್‌ಲೆಟ್ ಕೈಗಳ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತೆ. ಇದನ್ನು ಕೇವಲ 5 ಗ್ರಾಂ ತೂಕದಲ್ಲಿ ಮಾಡಿಸಬಹುದು.
ತೆಳುವಾದ ಚೈನ್‌ಗೆ ಮಣಿಗಳನ್ನು ಪೋಣಿಸಿದಂತಿರುವ ಈ ಬ್ರೇಸ್‌ಲೆಟ್ ಟ್ರೆಂಡಿ ಲುಕ್ ನೀಡುತ್ತೆ. ಕ್ಯಾಶುಯಲ್ ಡ್ರೆಸ್‌ಗಳ ಜೊತೆ ಇದು ತುಂಬಾ ಚೆನ್ನಾಗಿ ಕಾಣುತ್ತೆ.
ಬಿಳಿ ಮತ್ತು ಗುಲಾಬಿ ಬಣ್ಣದ ಕಲ್ಲುಗಳಿಂದ ಕಂಗೊಳಿಸುವ ಈ ಗೋಲ್ಡ್ ಬ್ರೇಸ್‌ಲೆಟ್ ಪಾರ್ಟಿ ವೇರ್‌ಗೆ ಸೂಕ್ತವಾಗಿದೆ. ಸಿಂಪಲ್ ಗೌನ್ ಹಾಗೂ ಡಿಸೈನರ್ ಡ್ರೆಸ್‌ಗಳ ಜೊತೆ ಟ್ರೈ ಮಾಡಬಹುದು.
ಹೂವಿನ ಡಿಸೈನ್ ಇರುವ ಈ ಗೋಲ್ಡ್ ಬ್ರೇಸ್‌ಲೆಟ್ ಸಾಂಪ್ರದಾಯಿಕ ಉಡುಪುಗಳಿಗೆ ಪರ್ಫೆಕ್ಟ್ ಮ್ಯಾಚ್. ವಿಶೇಷ ಸಂದರ್ಭಗಳಿಗೆ ಇದು ಬೆಸ್ಟ್ ಆಪ್ಷನ್.
ಇಂತಹ ಸಿಂಪಲ್ ಚೈನ್ ಬ್ರೇಸ್‌ಲೆಟ್‌ಗಳು ದಿನನಿತ್ಯದ ಬಳಕೆಗೆ ಹೇಳಿ ಮಾಡಿಸಿದಂತಿವೆ. ಕುರ್ತಿ, ಸೀರೆ ಹಾಗೂ ಕ್ಯಾಶುಯಲ್ ಡ್ರೆಸ್‌ಗಳ ಮೇಲೂ ಇವು ಆಕರ್ಷಕವಾಗಿ ಕಾಣುತ್ತವೆ.
Gold Chain: ಕೇವಲ ಅರ್ಧ ತೊಲದಲ್ಲಿ ಸಿಗುವ ಬ್ಯೂಟಿಫುಲ್ ಗೋಲ್ಡ್ ಚೈನ್ ಡಿಸೈನ್ಸ್ ಇಲ್ಲಿವೆ ನೋಡಿ
ಸೀರೆ, ಲೆಹೆಂಗಾಗೆ ಗ್ರ್ಯಾಂಡ್ ಲುಕ್ ನೀಡುವ ಚೋಕರ್ ಡಿಸೈನ್ಸ್! ಒಮ್ಮೆ ಟ್ರೈ ಮಾಡಿ
ರೇಷ್ಮೆ ಸೀರೆಯ ಅಂದ ಹೆಚ್ಚಿಸುವ ಸೂಪರ್ ಬ್ಲೌಸ್ ಡಿಸೈನ್ಸ್! ಒಮ್ಮೆ ಟ್ರೈ ಮಾಡಿ
Bangles Set: ಕೈಗಳ ಅಂದ ಹೆಚ್ಚಿಸುವ ಬಳೆಗಳಿಗೆ ಮ್ಯಾಚಿಂಗ್ ಜ್ಯುವೆಲರಿ ಸೆಟ್!