Author: Naveen Kodase Image Credits:Sparkles by Archana
Kannada
ಮುತ್ತಿನ ಬಳೆಗಳ ಸೆಟ್
ಮಧ್ಯದಲ್ಲಿ ಸುಂದರವಾದ ಪಿಂಕ್ ಸ್ಟೋನ್ ಇರುವ ರೌಂಡ್ ಪೆಂಡೆಂಟ್ ಹಾಗೂ ಮುತ್ತಿನ ಇಯರ್ ಚೈನ್ ಜುಮ್ಕಾ ಇದಾಗಿದೆ. ಇದಕ್ಕೆ ಮ್ಯಾಚಿಂಗ್ ಆಗಿ ಆಂಟಿಕ್ ಬಳೆಗಳು ಧರಿಸಿದರೆ ಪಕ್ಕಾ ಟ್ರೆಡಿಷನಲ್ ಲುಕ್ ಸಿಗುತ್ತದೆ.
Image credits: Sparkles by Archana
Kannada
ಲಕ್ಷ್ಮೀ ಬ್ಯಾಂಗಲ್ ಸೆಟ್
ಸುಂದರವಾದ ಫ್ಲೋರಲ್ ಡಿಸೈನ್ ಪೆಂಡೆಂಟ್ ಹಾಗೂ ಗುಲಾಬಿ ಬಣ್ಣದ ಜುಮ್ಕಾಗಳನ್ನು ಹೊಂದಿರುವ ಸೆಟ್ ಇದು. ಇದಕ್ಕೆ ತಕ್ಕಂತೆ ಲಕ್ಷ್ಮೀದೇವಿ ಡಿಸೈನ್ ಇರುವ ಹಸಿರು ಮತ್ತು ಕೆಂಪು ಬಳೆಗಳ ಸೆಟ್ ಅನ್ನು ಮ್ಯಾಚ್ ಮಾಡಲಾಗಿದೆ.
Image credits: Sparkles by Archana
Kannada
ಲಕ್ಷ್ಮೀ ದೇವಿ ಬಳೆಗಳ ಸೆಟ್
ಪಿಂಕ್ ಸ್ಟೋನ್ಸ್ ಹಾಗೂ ಲಕ್ಷ್ಮೀದೇವಿ ಹ್ಯಾಂಗಿಂಗ್ಸ್ ಇರುವ ಸುಂದರವಾದ ಇಯರ್ ಚೈನ್ ಸೆಟ್ ಇದಾಗಿದೆ. ಇದರ ಜೊತೆಗೆ ಹಸಿರು, ಕೆಂಪು ಹರಳುಗಳ ಬಳೆಗಳ ಸೆಟ್ ನಿಮ್ಮ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ.
Image credits: Sparkles by Archana
Kannada
ಪರ್ಪಲ್ ಬಳೆಗಳ ಸೆಟ್
ಪರ್ಪಲ್ ಬಣ್ಣದ ಹರಳುಗಳು ಹಾಗೂ ಬಿಳಿ ಮುತ್ತುಗಳಿಂದ ಕೂಡಿದ ರಿಚ್ ಟೆಂಪಲ್ ಜ್ಯುವೆಲರಿ ಸೆಟ್ ಇದು. ಇದಕ್ಕೆ ಮ್ಯಾಚಿಂಗ್ ಆಗಿ ಪರ್ಪಲ್-ವೈಟ್ ಬಳೆಗಳು ಮತ್ತು ಲಕ್ಷ್ಮೀದೇವಿ ಕಡಾ ಬಳೆಗಳನ್ನು ನೀಡಲಾಗಿದೆ.
Image credits: Sparkles by Archana
Kannada
ಕಾಸಿನ ಬಳೆಗಳು
ಹಸಿರು ಹರಳುಗಳು ಹಾಗೂ ಮುತ್ತುಗಳಿಂದ ಕಂಗೊಳಿಸುವ ಟೆಂಪಲ್ ಜ್ಯುವೆಲರಿ ಇದಾಗಿದೆ. ಇದಕ್ಕೆ ಒಪ್ಪುವಂತಹ ಹಸಿರು ಬಳೆಗಳು ಮತ್ತು ಗೋಲ್ಡನ್ ಕಾಯಿನ್ (ಕಾಸಿನ) ಬಳೆಗಳು ಅದ್ಭುತವಾದ ಟ್ರೆಡಿಷನಲ್ ಲುಕ್ ನೀಡುತ್ತವೆ.
Image credits: Sparkles by Archana
Kannada
ಟೆಂಪಲ್ ಜ್ಯುವೆಲರಿ
ಬಿಳಿ ಮತ್ತು ಕೆಂಪು ಮುತ್ತುಗಳ ಕಾಂಬಿನೇಷನ್‌ನಲ್ಲಿರುವ ಟೆಂಪಲ್ ಜ್ಯುವೆಲರಿ ಸೆಟ್ ತುಂಬಾ ಸುಂದರವಾಗಿದೆ. ಇದರ ಜೊತೆಗಿರುವ ಲಕ್ಷ್ಮೀದೇವಿ ಡಿಸೈನ್‌ನ ಬಿಳಿ-ಕೆಂಪು ಬಳೆಗಳು ಆಕರ್ಷಕ ಲುಕ್ ನೀಡುತ್ತವೆ.
Image credits: Sparkles by Archana
Kannada
ಲಕ್ಷ್ಮೀದೇವಿ ಬಳೆಗಳ ಸೆಟ್
ನವಿಲು ಡಿಸೈನ್ ಹಾಗೂ ಲಕ್ಷ್ಮೀದೇವಿ ಜುಮ್ಕಾಗಳಿಂದ ಕೂಡಿದ ಗ್ರ್ಯಾಂಡ್ ಟೆಂಪಲ್ ಸೆಟ್ ಇದಾಗಿದೆ. ಇದಕ್ಕೆ ಜೊತೆಯಾಗಿರುವ ಪೀಕಾಕ್ ಆಂಟಿಕ್ ಬಳೆಗಳು ಈ ಕಲೆಕ್ಷನ್ ಅನ್ನು ಮತ್ತಷ್ಟು ಕಂಪ್ಲೀಟ್ ಮಾಡುತ್ತವೆ.