ರೇಷ್ಮೆ ಸೀರೆಗಳಿಗೆ ವಿಕ್ಟೋರಿಯನ್ ಆಭರಣಗಳು ಹೊಸ ಟ್ರೆಂಡ್ ಸೃಷ್ಟಿಸಿವೆ. ಇವು ಸಾಂಪ್ರದಾಯಿಕ ನೋಟಕ್ಕೆ ರಾಯಲ್ ಟಚ್ ನೀಡುತ್ತವೆ. ಪ್ಲೇನ್ ಚಿನ್ನದ ಬದಲು ಇವು ಹೆಚ್ಚು ಆಕರ್ಷಕವಾಗಿ ಕಾಣುತ್ತವೆ.
fashion Jul 31 2026
Author: Govindaraj S Image Credits:Arshis Jewellery
Kannada
ಮಹಾರಾಣಿ ಲುಕ್ ಕೊಡುವ ಜ್ಯುವೆಲ್ಲರಿ
ಮಲ್ಟಿ ಕಲರ್ ಸ್ಟೋನ್ಸ್ ಮತ್ತು ಬೀಡ್ಸ್ ಕಾಂಬಿನೇಷನ್ ಇರುವ ಈ ವಿಕ್ಟೋರಿಯನ್ ಜ್ಯುವೆಲ್ಲರಿ ಸೀರೆಗಳ ಮೇಲೆ ತುಂಬಾ ಚೆನ್ನಾಗಿ ಕಾಣಿಸುತ್ತೆ. ಇದನ್ನು ಧರಿಸಿದರೆ ಮಹಾರಾಣಿ ಲುಕ್ ಬರೋದು ಪಕ್ಕಾ.
Image credits: Arshis Jewellery
Kannada
ಟ್ರೆಂಡಿ ವಿಕ್ಟೋರಿಯನ್ ನೆಕ್ಲೇಸ್
ಸದ್ಯ ಈ ರೀತಿಯ ವಿಕ್ಟೋರಿಯನ್ ನೆಕ್ಲೇಸ್ ಸೆಟ್‌ಗಳು ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿವೆ. ಇವನ್ನು ಕುತ್ತಿಗೆಗೆ ಹಾಕಿಕೊಂಡರೆ ಸಾಕು, ಒಳ್ಳೆ ರಾಯಲ್ ಲುಕ್ ನಿಮ್ಮದಾಗುತ್ತೆ.
Image credits: Arshis Jewellery
Kannada
ಬದಲಾಯಿಸಬಹುದಾದ ನೆಕ್ಲೇಸ್
ಈ ನೆಕ್ಲೇಸ್‌ನ ವಿಶೇಷತೆ ಅಂದ್ರೆ, ಇದರಲ್ಲಿರೋ ಸ್ಟೋನ್ಸ್ ಕಲರ್ ಬದಲಾಯಿಸಬಹುದು. ಬೇರೆ ಬೇರೆ ಬಣ್ಣಗಳಲ್ಲಿ ಲಭ್ಯವಿದ್ದು, ನಿಮ್ಮ ಡ್ರೆಸ್‌ಗೆ ಮ್ಯಾಚ್ ಆಗುವ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬಹುದು.
Image credits: Arshis Jewellery
Kannada
ಕುಂದನ್ ವಿಕ್ಟೋರಿಯನ್ ನೆಕ್ಲೇಸ್
ಕುಂದನ್ ಕೆತ್ತನೆಗಳಿಂದ ತುಂಬಿರುವ ಈ ವಿಕ್ಟೋರಿಯನ್ ನೆಕ್ ಸೆಟ್ ಯಾವುದೇ ಸೀರೆಗಾದರೂ ಅದ್ಭುತವಾಗಿ ಕಾಣುತ್ತದೆ. ಇದು ನಿಮಗೆ ಒಂದು ಕ್ಲಾಸಿ ಲುಕ್ ನೀಡುತ್ತದೆ.
Image credits: Arshis Jewellery
Kannada
ಫ್ಲೋರಲ್ ಡಿಸೈನ್‌ನಲ್ಲಿ...
ನೋಡೋಕೆ ಸಿಂಪಲ್ ಆಗಿ ಕಂಡರೂ, ನೈಟ್ ಪಾರ್ಟಿಗಳಿಗೆ ಇದು ಹೇಳಿ ಮಾಡಿಸಿದ್ದು. ಹೂವುಗಳು ಮತ್ತು ಹರಳುಗಳ ಕಾಂಬಿನೇಷನ್‌ನಲ್ಲಿ ಈ ನೆಕ್ಲೇಸ್ ಅನ್ನು ಡಿಸೈನ್ ಮಾಡಲಾಗಿದೆ.
Image credits: Arshis Jewellery
Kannada
ಹೆವಿ ಲುಕ್ ಕೊಡುವ ಚೋಕರ್
ಈ ರೀತಿಯ ಒಂದು ವಿಕ್ಟೋರಿಯನ್ ಚೋಕರ್ ಪ್ರತಿಯೊಬ್ಬರ ಕಲೆಕ್ಷನ್‌ನಲ್ಲೂ ಇರಲೇಬೇಕು. ರೇಷ್ಮೆ ಸೀರೆಗಳ ಮೇಲೆ ಇದು ತುಂಬಾನೇ ಹೆವಿ ಲುಕ್ ಕೊಡುತ್ತದೆ. ಜೊತೆಗೆ ರಾಯಲ್ ಆಗಿ ಕಾಣಿಸುತ್ತೀರಿ.
Image credits: Arshis Jewellery
Kannada
ನೇರಳೆ ಮಣಿಗಳ ನೆಕ್ಲೇಸ್
ಈ ಚೋಕರ್ ಕೂಡ ನಿಮಗೆ ರಾಯಲ್ ಲುಕ್ ನೀಡುತ್ತದೆ. ನೇರಳೆ ಬಣ್ಣದ ಮಣಿಗಳ ಕಾಂಬಿನೇಷನ್ ಇರುವ ಈ ನೆಕ್ಲೇಸ್ ಕುತ್ತಿಗೆಗೆ ಇನ್ನಷ್ಟು ಅಂದವನ್ನು ನೀಡುತ್ತದೆ.
Image credits: Arshis Jewellery
Kannada
ಸಿಂಪಲ್ ಲುಕ್‌ಗಾಗಿ...
ಸಿಂಪಲ್ ಆಗಿ ಕಾಣಬೇಕು ಅಂದುಕೊಂಡಾಗ ಈ ರೀತಿಯ ವಿಕ್ಟೋರಿಯನ್ ನೆಕ್ಲೇಸ್ ಟ್ರೈ ಮಾಡಬಹುದು. ನೈಟ್ ಪಾರ್ಟಿಗಳಿಗೆ ಇಂತಹ ನೆಕ್ಲೇಸ್ ಡಿಸೈನ್‌ಗಳು ತುಂಬಾ ಚೆನ್ನಾಗಿ ಹೊಂದುತ್ತವೆ.