ಕಟ್ ಔಟ್ ಶೈಲಿಯಲ್ಲಿರುವ ಈ ಬ್ಲೌಸ್ ಬ್ಯಾಕ್ ಡಿಸೈನ್ ನೋಡಲು ತುಂಬಾ ಆಕರ್ಷಕವಾಗಿದೆ. ಇದರ ಮೇಲಿರುವ ಎಂಬ್ರಾಯ್ಡರಿ ಹಾಗೂ ಮಧ್ಯದಲ್ಲಿರುವ ಮೂರು ಎಳೆಯ ಮುತ್ತಿನ ಚೈನ್ ಬ್ಲೌಸ್‌ನ ಅಂದವನ್ನು ಮತ್ತಷ್ಟು ಹೈಲೈಟ್ ಮಾಡುತ್ತದೆ.
Image credits: Blouse trends
Kannada
ಟ್ರೆಂಡಿ ಡಿಸೈನ್
ತಿಳಿ ಗೋಧಿ ಬಣ್ಣದ ನೆಟ್ ಮೆಟೀರಿಯಲ್ ಬ್ಲೌಸ್ ಇದಾಗಿದ್ದು, ಬೆನ್ನಿನ ಭಾಗದಲ್ಲಿ ಹಾರ್ಟ್ ಶೇಪ್ ಕಟ್-ಔಟ್ ನೀಡಲಾಗಿದೆ. ಇದರ ಅಂಚುಗಳಲ್ಲಿರುವ ಸುಂದರವಾದ ಎಂಬ್ರಾಯ್ಡರಿ ವರ್ಕ್ ಸೀರೆಯ ಲುಕ್ ಹೆಚ್ಚಿಸುತ್ತದೆ.
Image credits: Blouse trends
Kannada
ಜಾಲಿ ವರ್ಕ್
ತಿಳಿ ಹಸಿರು ಬಣ್ಣದ ರೇಷ್ಮೆ ಬ್ಲೌಸ್ ಬೆನ್ನಿನ ಮೇಲೆ ಆಕರ್ಷಕ ಜಾಲಿ ವರ್ಕ್ ಹಾಗೂ ಮಣಿಗಳ ಡಿಸೈನ್ ನೀಡಲಾಗಿದೆ. ಇಂಥ ಬ್ಲೌಸ್ ಡಿಸೈನ್‌ಗಳು ರೇಷ್ಮೆ ಸೀರೆಗಳಿಗೆ ಪರ್ಫೆಕ್ಟ್ ಮ್ಯಾಚ್ ಆಗುತ್ತವೆ.
Image credits: Blouse trends
Kannada
ಹೈ ನೆಕ್ ಬ್ಲೌಸ್
ನವಿಲು ಹಸಿರು ಮತ್ತು ನೀಲಿ ಬಣ್ಣದ ಪ್ರಿಂಟ್ ಇರುವ ಈ ಹೈ-ನೆಕ್ ಬ್ಲೌಸ್‌ಗೆ ಕಟ್-ಔಟ್ ಡಿಸೈನ್ ನೀಡಲಾಗಿದೆ. ಇದು ನಿಮಗೆ ಸಿಂಪಲ್ ಹಾಗೂ ಎಲಿಗೆಂಟ್ ಲುಕ್ ಕೊಡುತ್ತದೆ.
Image credits: Blouse trends
Kannada
ಕ್ಲಾಸಿ ಡಿಸೈನ್
ತಿಳಿ ನೇರಳೆ ಬಣ್ಣದ ಆರ್ಗನ್ಜಾ ಮೆಟೀರಿಯಲ್ ಬ್ಲೌಸ್ ಇದಾಗಿದ್ದು, ಬೆನ್ನಿನ ಮೇಲೆ ಓಪನ್ ಸರ್ಕಲ್ ಡಿಸೈನ್ ಇದೆ. ಕಟ್-ಔಟ್ ಅಂಚುಗಳ ಸುತ್ತಲೂ ಇರುವ ಸಣ್ಣ ಗೋಲ್ಡನ್ ಮಣಿಗಳು ಬ್ಲೌಸ್‌ಗೆ ಗ್ರ್ಯಾಂಡ್ ಲುಕ್ ನೀಡುತ್ತವೆ.
Image credits: Blouse trends
Kannada
ಟ್ರೆಂಡಿ ಬ್ಲೌಸ್
ಇಂಥ ಬ್ಲೌಸ್ ಡಿಸೈನ್‌ಗಳು ಸದ್ಯ ಸಖತ್ ಟ್ರೆಂಡಿಂಗ್‌ನಲ್ಲಿವೆ. ಇದು ಯಾವುದೇ ಸೀರೆಗಾದರೂ ಮಾಡರ್ನ್ ಲುಕ್ ನೀಡುತ್ತದೆ. ಪಾರ್ಟಿಗಳಲ್ಲಿ ನಿಮ್ಮ ಅಂದವನ್ನು ಇದು ದುಪ್ಪಟ್ಟು ಮಾಡುವುದು ಖಂಡಿತ.
Image credits: Blouse trends
Kannada
ರೇಷ್ಮೆ ಸೀರೆಗೆ ಪರ್ಫೆಕ್ಟ್
ಬೂದು ಬಣ್ಣದ ರೇಷ್ಮೆ ಬ್ಲೌಸ್ ಬೆನ್ನಿನ ಮೇಲೆ ಡೈಮಂಡ್ ಕಟ್-ಔಟ್ ನೀಡಲಾಗಿದೆ. ಕೆಳಭಾಗದಲ್ಲಿ ತಿಳಿ ನೇರಳೆ ಬಣ್ಣದ ನೆಟ್ ಫ್ಯಾಬ್ರಿಕ್ ಪ್ಲೀಟಿಂಗ್ ಇದ್ದು, ಕ್ಲಾಸಿ ಸ್ಟೈಲ್ ಇಷ್ಟಪಡುವವರಿಗೆ ಇದು ಬೆಸ್ಟ್ ಆಯ್ಕೆ.
Image credits: Blouse trends
Kannada
ಎಂಬ್ರಾಯ್ಡರಿ ಬ್ಲೌಸ್
ನೀಲಿ ಬಣ್ಣದ ಜಾರ್ಜೆಟ್ ಮೆಟೀರಿಯಲ್ ಬ್ಲೌಸ್ ಇದಾಗಿದ್ದು, ಪಫ್ ಸ್ಲೀವ್ಸ್ ಹಾಗೂ ಬೆನ್ನಿನ ಮೇಲೆ ಫ್ಲೋರಲ್ ಎಂಬ್ರಾಯ್ಡರಿ ಇದೆ. ಬೆನ್ನಿನ ಭಾಗದಲ್ಲಿರುವ ಕ್ರಾಸ್-ಓವರ್ ಡಿಸೈನ್ ಬ್ಲೌಸ್‌ಗೆ ಮತ್ತಷ್ಟು ಮೆರುಗು ನೀಡುತ್ತದೆ.