Fashion
ಮಿಸ್ ಇಂಡಿಯಾ ಎಲೈಟ್ 2016 ವಿಜೇತೆ ಮತ್ತು ರಾಷ್ಟ್ರಮಟ್ಟದ ರೂಪದರ್ಶಿ ಆಕಾಂಕ್ಷಾ ಚೌಧರಿ ಭಾರತದ ಉನ್ನತ ಬಿ-ಸ್ಕೂಲ್ ಐಐಎಂ ಅಹಮದಾಬಾದ್ ವಿದ್ಯಾರ್ಥಿನಿ.
'ಬ್ಯೂಟಿ ವಿತ್ ಬ್ರೈನ್ಸ್' ಎಂಬುದಕ್ಕೆ ಉದಾಹರಣೆಯಾಗಿರುವ ಆಕಾಂಕ್ಷಾ ಚೌಧರಿ ಮಾಡೆಲಿಂಗ್ ಜೊತೆಗೆ ಸಿಎಟಿ ತೇರ್ಗಡೆಯಾಗಿ ಭಾರತದ ಅತ್ಯುತ್ತಮ ಕಾಲೇಜಿನಲ್ಲಿ ಸೀಟ್ ಗಿಟ್ಟಿಸಿಕೊಂಡಿದ್ದರು..
ಕಾಲೇಜು ದಿನಗಳಲ್ಲೆ, ಫ್ಯಾಷನ್ ಶೋಗಳಲ್ಲಿ ಭಾಗವಹಿಸಿದ್ದರು ಮತ್ತು ಕನಿಕಾ ಕಪೂರ್, ರಣದೀಪ್ ಹೂಡಾ, ಗೌಹರ್ ಖಾನ್ ಮತ್ತು ಜರೀನ್ ಖಾನ್ ಅವರಂತಹ ತಾರೆಗಳೊಂದಿಗೆ ಶೋ ಮಾಡಿದ್ದರು
ಆಕಾಂಕ್ಷಾ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್‌ಗೆ ಅರ್ಜಿ ಸಲ್ಲಿಸಿದಾಗ, ಮಿಸ್ ಇಂಡಿಯಾ ಎಲೈಟ್ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಇಲ್ಲಿ ಗೆಲ್ಲೋದ್ರ ಜೊತೆ ಸಿಎಟಿಯಲ್ಲಿ 98.12 ಪಡೆದು ಐಐಎಂಗೆ ಪ್ರವೇಶ ಪಡೆದರು.
ಮಾಡೆಲಿಂಗ್ ನನ್ನನ್ನು ಫಿಟ್ ಮತ್ತು ಹೆಲ್ತಿ ಜೀವನ ನಡೆಸಲು ಮತ್ತು ಸೌಂದರ್ಯದ ನಿಜವಾದ ಸಾರವು ಮಕ್ಕಳಲ್ಲಿ ಬೆಳೆಸುವ ಮೌಲ್ಯಗಳಲ್ಲಿದೆ ಎಂದು ಗುರುತಿಸಲು ಸಹಾಯ ಮಾಡಿದೆ.
ಆಕಾಂಕ್ಷ ತನ್ನ ಪ್ಯಾಷನ್ ಮತ್ತು ಗುರಿ ಎರಡನ್ನೂ ಜೊತೆಜೊತೆಯಾಗಿ ಹೊಂದಿಸಿಕೊಂಡರು. ಮಾಡಲೆಂಗ್ ಮಾಡೋದ್ರ ಜೊತೆ ಜೊತೆಗೆ ಸಿಎಟಿ ಅಧ್ಯಯನ ಮುಂದುವರಿಸಿದರು.
ಐಐಎಂ ಅಹ್ಮದಾಬಾದ್ (ಬ್ಯಾಚ್ 2017-19) ನಿಂದ ಎಂಬಿಎ ಡಿಗ್ರಿ ಪಡೆದ ಆಕಾಂಕ್ಷಾ ಪ್ರಸ್ತುತ ಮೆಕಿನ್ಸೆಯಲ್ಲಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಬದ್ಧತೆ, ನಂಬಿಕೆ ಮತ್ತು ಸಮರ್ಪಣೆಯೇ ಯಶಸ್ಸಿಗೆ ಕಾರಣ
ಆಕಾಂಕ್ಷಾ ಚೌಧರಿ ಸಾಧನೆಯು ಒಬ್ಬ ವ್ಯಕ್ತಿಯು ತಮ್ಮ ಪ್ಯಾಶನ್ ಅನುಸರಿಸುವವುದರ ಜೊತೆಗೆ ಕರಿಯರ್‌ನಲ್ಲೂ ಯಶಸ್ವಿಯಾಗಬಹುದು ಅನ್ನೋದನ್ನು ತೋರಿಸುತ್ತೆ.