Health

ಬೇವಿನ ಎಣ್ಣೆ

ಶಿಲೀಂಧ್ರ ಸೋಂಕನ್ನು ಕಡಿಮೆ ಮಾಡುವ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಇತರ ಎಣ್ಣೆ ಜೊತೆಗೆ ಕೆಲವು ಹನಿ ಬೇವಿನ ಎಣ್ಣೆ ಬೆರೆಸಿ ನೆತ್ತಿಗೆ ಮಸಾಜ್ ಮಾಡಿ. 30 ನಿಮಿಷ ಬಿಟ್ಟು ಹೇರ್ ವಾಶ್ ಮಾಡಿ.
 

Image credits: Freepik

ಮೊಸರು

ನೆತ್ತಿಯ ನ್ಯಾಚುರಲ್ ಬ್ಯಾಲೆನ್ಸ್ ಉಳಿಸುತ್ತೆ, ತಲೆಹೊಟ್ಟನ್ನು ಕಡಿಮೆ ಮಾಡುವ ಪ್ರೋಬಯಾಟಿಕ್ಸ್ ಮೊಸರು ಒಳಗೊಂಡಿದೆ. ತಲೆಗೆ ಮೊಸರನ್ನು ಹಚ್ಚಿ ಮತ್ತು 30 ನಿಮಿಷಗಳ ಕಾಲ ಬಿಡಿ. 
 

Image credits: Freepik

ತೆಂಗಿನ ಎಣ್ಣೆ

ನೆತ್ತಿಯನ್ನು ಮಾಯಿಶ್ಚರ್ ಆಗಿರಿಸುತ್ತೆ, ಡ್ರೈನೆಸ್ ಮತ್ತು ಹೊಟ್ಟನ್ನು ಕಡಿಮೆ ಮಾಡುತ್ತದೆ. ಸ್ವಲ್ಪ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಅದನ್ನು ನೆತ್ತಿಗೆ ಹಚ್ಚಿ ಮಸಾಜ್ ಮಾಡಿ. 30 ನಿಮಿಷ ನಂತ್ರ ವಾಶ್ ಮಾಡಿ
 

Image credits: Freepik

ಅಲೋವೆರಾ

ನೆತ್ತಿಯ ಕಿರಿಕಿರಿಯನ್ನು ನಿವಾರಿಸುವ ಮತ್ತು ತಲೆಹೊಟ್ಟನ್ನು ಕಡಿಮೆ ಮಾಡುವ ಮಾಯಿಶ್ಚರೈಸಿಂಗ್ ಗುಣಲಕ್ಷಣಗಳನ್ನು ಅಲೋವೆರಾ ಹೊಂದಿದೆ. ತಾಜಾ ಅಲೋವೆರಾ ಜೆಲ್ ನೇರವಾಗಿ ನೆತ್ತಿಗೆ ಹಚ್ಚಿ, 30 ನಿಮಿಷಗಳ ಕಾಲ ಬಿಡಿ.
 

Image credits: Freepik

ಟೀ ಟ್ರೀ ಆಯಿಲ್

ಆಂಟಿ ಫಂಗಲ್ ಮತ್ತು ಆಂಟಿ ಬ್ಯಾಕ್ಟೀರಿಯಾ ಗುಣಲಕ್ಷಣ ಹೊಂದಿದೆ, ಇದು ತಲೆಹೊಟ್ಟಿಗೆ ಅತ್ಯುತ್ತಮ ಪರಿಹಾರ. ಯಾವುದೇ ಎಣ್ಣೆಯೊಂದಿಗೆ ಕೆಲವು ಹನಿ ಬೆರೆಸಿ ಮತ್ತು ಅದನ್ನು ನೆತ್ತಿಗೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. 
 

Image credits: Freepik

ಆಪಲ್ ಸೀಡರ್ ವಿನೆಗರ್

ನೆತ್ತಿಯ ಪಿಎಚ್ ಬ್ಯಾಲೆನ್ಸ್ ಪುನಃಸ್ಥಾಪಿಸಲು ಸಹಾಯ ಮಾಡುತ್ತೆ, ತಲೆಹೊಟ್ಟು ಉಂಟುಮಾಡುವ ಯೀಸ್ಟ್ ಮತ್ತು ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತೆ. ಆಪಲ್ ಸೈಡರ್ ವಿನೆಗರ್ ಮತ್ತು ನೀರಿನ ಬೆರೆಸಿ ನೆತ್ತಿಗೆ ಹಚ್ಚಿ. 
 

Image credits: Freepik

ನಿಂಬೆ ರಸ

ನಿಂಬೆ ರಸದ ಆಮ್ಲೀಯ ಸ್ವಭಾವ ನೆತ್ತಿಯ ಪಿಎಚ್ ಮಟ್ಟವನ್ನು ಬ್ಯಾಲೆನ್ಸ್ ಮಾಡಿ, ತಲೆಹೊಟ್ಟನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತಾಜಾ ನಿಂಬೆ ರಸವನ್ನು ತಲೆಬುರುಡೆಗೆ ಹಚ್ಚಿ, 5-10 ನಿಮಿಷ ಬಿಟ್ಟು ತೊಳೆಯಿರಿ 
 

Image credits: our own
Find Next One