Kannada

ಭಾರಿ ಬೇಡಿಕೆಯಲ್ಲಿರುವ 5 ಮಲ್ಲಿಗೆ ಹೇರ್‌ಸ್ಟೈಲ್

ಸಾಂಪ್ರದಾಯಿಕ ಉಡುಗೆ ತೊಟ್ಟಾಗ ಹೂ ಮುಡಿದಿಲ್ಲ ಅಂದ್ರೆ ಹೇಗೆ?. ಮದುವೆ, ಪೂಜೆ, ಹಬ್ಬ ಯಾವುದೇ ಫ್ಯಾಮಿಲಿ ಫಂಕ್ಷನ್‌ ಇರಲಿ ಈ 5 ಮಲ್ಲಿಗೆ ಹೇರ್‌ಸ್ಟೈಲ್‌ಗಳು ಸೂಟ್ ಆಗ್ತವೆ. ಸಿಕ್ಕಾಪಟ್ಟೆ ಟ್ರೆಂಡ್‌ನಲ್ಲೂ ಇವೆ.

Kannada

ಹಾಫ್ ಕ್ಲಚ್

ಕೂದಲಿನ ಅರ್ಧ ಭಾಗವನ್ನು ತೆಗೆದುಕೊಂಡು ಚಿಕ್ಕದಾದ ಬನ್ ಅಥವಾ ಹಾಫ್ ಕ್ಲಚ್ ಹಾಕಿ. ಅದರ ಮೇಲೆ ಫಾಲಿಂಗ್ ಪ್ಯಾಟರ್ನ್‌ನಲ್ಲಿ ಮಲ್ಲಿಗೆ ಮುಡಿಯಿರಿ. ಈ ಸ್ಟೈಲ್ ಮಾಡರ್ನ್ ಹಾಗೂ ಟ್ರೆಡಿಷನಲ್ ಲುಕ್‌ನ ಫ್ಯೂಷನ್ ನೀಡುತ್ತೆ.   

Image credits: Instagram@archanarautela
Kannada

ಬ್ರೇಡೆಡ್

ಜಡೆ ಹಾಕಿ. ಅದರ ಜೊತೆಗೆ ಮಲ್ಲಿಗೆ ಹಗುರವಾಗಿ ಸುತ್ತಿ. ನೀವು ಬೇಕಿದ್ದರೆ ಚಿತ್ರದಲ್ಲಿರುವಂತೆ ಅಲ್ಲಲ್ಲಿ ಸೆಕ್ಷನ್‌ಗಳಾಗಿ ಕೂಡ ಮಲ್ಲಿಗೆ ಮುಡಿಯಬಹುದು. ಇದು ನಿಮಗೆ ಸಾಂಪ್ರದಾಯಿಕ ಲುಕ್ ನೀಡುತ್ತೆ.     

Image credits: Instagram@theweddingcompanyofficial
Kannada

ಸ್ಪೈರಲ್ ಲೋ ಬನ್

ಇದು ಅತ್ಯಂತ ಜನಪ್ರಿಯ ಮತ್ತು ಎವರ್‌ಗ್ರೀನ್ ಸ್ಟೈಲ್.  ಕೆಳಭಾಗದಲ್ಲಿ ಬನ್ ಹಾಕಿ, ಅದರ ಸುತ್ತಲೂ ಮಲ್ಲಿಗೆ ಸುತ್ತಿ. ಇದು ಸೀರೆ ಅಥವಾ ಲೆಹೆಂಗಾದೊಂದಿಗೆ ಸುಂದರ ಮತ್ತು ಕ್ಲೀನ್ ಲುಕ್ ನೀಡುತ್ತೆ.  

Image credits: Pinterest
Kannada

ಮಲ್ಟಿ ಲೇಯರ್

ನಿಮ್ಮ ಕೂದಲು ಉದ್ದವಾಗಿದ್ದರೆ ಜಡೆ ಹಾಕಿ ಈ ರೀತಿಯ ಫ್ಯಾನ್ಸಿ ಸ್ಟೈಲ್‌ನಲ್ಲಿ ಮಲ್ಟಿ ಲೇಯರ್ ಮಲ್ಲಿಗೆ ಮುಡಿಯಿರಿ. ಇದನ್ನು ಪಿನ್ ಬಳಸಿ ಜಡೆಗೆ ಸಿಕ್ಕಿಸಿದರೆ ತುಂಬಾನೇ ರಿಚ್ ಮತ್ತು ಬ್ರೈಡಲ್ ಲುಕ್ ಸಿಗುತ್ತೆ.   

Image credits: instagram
Kannada

ಲೇಯರಿಂಗ್ ಜಾಸ್ಮಿನ್

ಕೂದಲನ್ನ ಫ್ರೀಯಾಗಿ ಬಿಡಲು ಇಷ್ಟವಿದ್ದರೆ ಮೇಲ್ಭಾಗದಲ್ಲಿ ಪಿನ್ ಬಳಸಿ ಲೇಯರ್‌ಗಳಾಗಿ ಮಲ್ಲಿಗೆ ಹೂವನ್ನು ಬಿಡಿ. ಇದರೊಂದಿಗೆ ಓಪನ್ ಹೇರ್‌ಸ್ಟೈಲ್ ಮಾಡಿಕೊಂಡರೆ ನಿಮ್ಮ ಲುಕ್ ಯೂನಿಕ್ ಮತ್ತು ಸ್ಟೈಲಿಶ್ ಆಗಿ ಕಾಣುತ್ತೆ.  

Image credits: Instagram@theweddingcompanyofficial

ಮೊಮ್ಮಕ್ಕಳಿಗೆ ಅಜ್ಜಿಯ ಗಿಫ್ಟ್, 1 ಗ್ರಾಂ ಗೋಲ್ಡ್‌ನ ಕ್ಯೂಟ್ ಡಿಸೈನ್ ಉಂಗುರ ಕೊಡಿ!

ಹೂವಿನ ಡ್ರೆಸ್, ಪಚ್ಚೆ ಹಾರ: ದಿಶಾ ಪಟಾನಿಗೂ ಟಕ್ಕರ್ ಕೊಟ್ಟ ಇಶಾ ಅಂಬಾನಿ!

ಹುಡುಗಿಯರ ಕಾನ್ಫಿಡೆನ್ಸ್ ಹೆಚ್ಚಿಸುತ್ತೆ ಈ ಓಲೆ! ಇಲ್ಲಿವೆ 6 ಫ್ಯಾನ್ಸಿ ಇಯರಿಂಗ್ಸ್

ಕಾಲ್ಗೆಜ್ಜೆ ಬೆಳ್ಳಿಯದ್ದೇ ಯಾಕೆ ಹಾಕ್ತಾರೆ? ಚಿನ್ನದ ಕಾಲ್ಗೆಜ್ಜೆ ಯಾಕೆ ಹಾಕಲ್ಲ?