Fashion

ದುಬಾರಿ ಶೂ

ವಿಶ್ವದ ಅತ್ಯಂತ ದುಬಾರಿ ಶೂ ಬೆಲೆ ಬರೋಬ್ಬರಿ 41 ಲಕ್ಷ. ಇದರ ವಿಶೇಷತೆಯೇನು ಗೊತ್ತಾ?

Image credits: Pexels

41 ಲಕ್ಷದ ಶೂ

ಐಫೋನ್ ತಯಾರಕ ಆಪಲ್ ಮೊದಲು ಶೂಗಳನ್ನು ತಯಾರಿಸುತ್ತಿತ್ತು. ಆಪಲ್‌ನ ಒಂದು ಶೂ ಹರಾಜು ಆಗಲಿದ್ದು, ಇದರ ಬೆಲೆ ಬರೋಬ್ಬರಿ 41 ಲಕ್ಷ.

Image credits: Twitter

ಆಪಲ್‌ನಿಂದ ಹಲವು ಉತ್ಪನ್ನ

ಆಪಲ್‌, ಗ್ಯಾಜೆಟ್‌ಗಳ ಹೊರತಾಗಿ ಟೀಶರ್ಟ್‌ಗಳಂತಹಾ ಉತ್ಪನ್ನಗಳನ್ನು ಸಹ ಉತ್ಪಾದಿಸುತ್ತದೆ. ಆದರೆ ಈ ಉತ್ಪನ್ನಗಳು ಹೆಚ್ಚು ಟ್ರೆಂಡ್‌ನಲ್ಲಿ ಕಂಡು ಬರುವುದಿಲ್ಲ. ಆಪಲ್ ಸ್ಟೋರ್‌ಗಳಲ್ಲಿ ಮಾತ್ರ ದೊರಕುತ್ತದೆ.

Image credits: Freepik

ಆಪಲ್ ಬ್ರ್ಯಾಂಡ್‌ನ ಶೂ

ಫೋರ್ಬ್ಸ್‌ ವರದಿಯ ಪ್ರಕಾರ, 90ರ ದಶಕದಲ್ಲಿ ಆಪಲ್ ತನ್ನ ಉದ್ಯೋಗಿಗಳಿಗೆ ಶೂ ತಯಾರಿಸುತ್ತಿತ್ತು. ಇದು ಸಂಪೂರ್ಣವಾಗಿ ಬಿಳಿ ಬಣ್ಣದ ಶೂ ಆಗಿತ್ತು. 

Image credits: Freepik

ನೈಕ್ ಬೂಟುಗಳಿಗೆ ಹೋಲಿಕೆ

ಆಪಲ್‌ ಶೂಸ್‌ ನೈಕ್ ಬ್ರ್ಯಾಂಡ್‌ನ ಸ್ನೀಕರ್‌ಗಳನ್ನು ಹೋಲುತ್ತದೆ. ಈ ಶೂಗಳನ್ನು ಕೇವಲ ಗಿಫ್ಟ್ ನೀಡಲು ಮಾತ್ರ ತಯಾರಿಸಲಾಗುತ್ತಿತ್ತು.

Image credits: Pexels

ಆಪಲ್ ಶೂಗಳ ಹರಾಜು

1990ರ ದಶಕದ ಈ ಶೂಗಳನ್ನು ಸೋಥೆಬಿ ವೆಬ್‌ಸೈಟ್‌ನಲ್ಲಿ ಹರಾಜಿಗಾಗಿ ಪಟ್ಟಿ ಮಾಡಲಾಗಿದೆ. ಯಾರು ಬೇಕಾದರೂ ಅವುಗಳನ್ನು ಖರೀದಿಸಬಹುದು. ಆಪಲ್‌ನ ಇತರ ಉತ್ಪನ್ನಗಳಂತೆಯೇ ಇವರ ಶೂಗಳ ಬೆಲೆಯೂ ಹೆಚ್ಚಿದೆ.

Image credits: Twitter

ಆಪಲ್‌ ಶೂ ಬೆಲೆ

ಆಪಲ್ ಶೂಗಳ ಬೆಲೆ ಭಾರತೀಯ ರೂಪಾಯಿಗಳಲ್ಲಿ ಸುಮಾರು 41 ಲಕ್ಷ ರೂ. ಆಗಿದೆ.

Image credits: Freepik

ಯಾಕೆ ದುಬಾರಿ

ಆಪಲ್ ಶೂಗಳು ಯಾಕೆ ದುಬಾರಿಯಾಗಿವೆ ಎಂದು ಎಲ್ಲರೂ ಯೋಚಿಸಬಹುದು. ಯಾಕೆಂದರೆ ಇದನ್ನು ತಯಾರಿಸುವ ರೀತಿಯು ತುಂಬಾ ಹಂತಗಳಿಂದ ಕೂಡಿದೆ. ಮತ್ತು ಈ ಶೂ ಬಹಳ ವರ್ಷಗಳ ಕಾಲ ಏನೂ ಆಗುವುದಿಲ್ಲ.

Image credits: Pexels
Find Next One