Kannada

ಬನಾರಸಿ ಸೀರೆಯ ಅಂದ, ಪಚ್ಚೆ ಹಾರದಲ್ಲಿ ನೀತಾ ರಾಯಲ್ ಲುಕ್

ಭಾರತದ ಶ್ರೀಮಂತ ಮಹಿಳೆ ನೀತಾ ಅಂಬಾನಿ ತಮ್ಮ ಫ್ಯಾಷನ್ ಸೆನ್ಸ್​ನಿಂದ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಕೆಂಪು ಬನಾರಸಿ ಸೀರೆ ಹಾಗೂ ಪಚ್ಚೆ ಹಾರದಲ್ಲಿ ಕಂಗೊಳಿಸಿದ್ದಾರೆ.
Kannada

ಕೆಂಪು ಬನಾರಸಿ ಸೀರೆಯಲ್ಲಿ ನೀತಾ ಅಂಬಾನಿ

ನೀತಾ ಅಂಬಾನಿ ಮತ್ತೊಮ್ಮೆ ತಮ್ಮ ದೇಸಿ ಲುಕ್​ನಿಂದ ಎಲ್ಲರ ಗಮನ ಸೆಳೆದಿದ್ದಾರೆ. ಕೆಂಪು ರೇಷ್ಮೆ ಬನಾರಸಿ ಸೀರೆಯಲ್ಲಿ ಅವರ ಸೌಂದರ್ಯ ಮೇಳೈಸಿದೆ. ಮ್ಯಾಚಿಂಗ್ ಜ್ಯುವೆಲರಿ ಹೇರ್‌ಸ್ಟೈಲ್ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

Image credits: instagram- ritikahairstylist
Kannada

ಕೆಂಪು ಸೀರೆಯಲ್ಲಿ ಕ್ಲಾಸಿ ಲುಕ್

ನೀತಾ ಅಂಬಾನಿ ತಮ್ಮ ಲುಕ್​ನಲ್ಲಿ ಕ್ಲಾಸ್ ಮತ್ತು ಗ್ಲಾಮರ್ ಎರಡನ್ನೂ ಒಟ್ಟಿಗೆ ಕ್ಯಾರಿ ಮಾಡುತ್ತಾರೆ. ಈ ಬಾರಿ ಅವರ ಕ್ಲಾಸಿ ವೈಬ್ ಎಲ್ಲರ ಮನಗೆದ್ದಿದೆ. 

Image credits: instagram- ritikahairstylist
Kannada

ಗಮನ ಸೆಳೆದ ಮ್ಯಾಚಿಂಗ್ ಬ್ಲೌಸ್

ನೀತಾ ಅಂಬಾನಿ ಈ ಕೆಂಪು ಬನಾರಸಿ ಸೀರೆಗೆ ಅಗಲವಾದ ಬಾರ್ಡರ್ ಇರುವ ಮ್ಯಾಚಿಂಗ್ ಬ್ಲೌಸ್ ಧರಿಸಿದ್ದಾರೆ. ಇದರಲ್ಲಿ ಸೂರ್ಯ ಮತ್ತು ಸಿಂಹಗಳ ಆಕೃತಿಗಳಿವೆ. ಬೋಟ್ ನೆಕ್‌ಲೈನ್ ಇರುವುದರಿಂದ ಇದು ರಾಯಲ್ ಲುಕ್ ನೀಡುತ್ತಿದೆ.
Image credits: instagram- ritikahairstylist
Kannada

ಮನಸೂರೆಗೊಂಡ ಗೋಲ್ಡ್ ಪಚ್ಚೆ ಹಾರ

ಈ ಬಾರಿಯೂ ನೀತಾ ಅಂಬಾನಿ ಸೀರೆಯೊಂದಿಗೆ ಹೆವಿ ಜ್ಯುವೆಲರಿ ಧರಿಸಿದ್ದಾರೆ. ಕುತ್ತಿಗೆಯಲ್ಲಿ ಆ್ಯಂಟಿಕ್ ಗೋಲ್ಡ್ ಡಿಸೈನ್​ನ ನೆಕ್ಲೇಸ್ ಇದೆ. ಇದರಲ್ಲಿ ದೊಡ್ಡ ಗಾತ್ರದ ಹಸಿರು ಪಚ್ಚೆಗಳನ್ನು ಅಳವಡಿಸಲಾಗಿದೆ.

Image credits: instagram- ritikahairstylist
Kannada

ಟ್ವಿಸ್ಟೆಡ್ ಲೋ ಬನ್​ನಲ್ಲಿ ವಿಶೇಷ ನೋಟ

ಸಾಂಪ್ರದಾಯಿಕ ಉಡುಗೆಗೆ ಇನ್ನಷ್ಟು ಮೆರುಗು ನೀಡಲು, ನೀತಾ ಅಂಬಾನಿ ಟ್ವಿಸ್ಟೆಡ್ ಮೆಸ್ಸಿ ಲೋ ಬನ್ ಹೇರ್​ಸ್ಟೈಲ್ ಮಾಡಿಕೊಂಡಿದ್ದಾರೆ. ಇದನ್ನು ಗುಲಾಬಿ ಹೂವುಗಳಿಂದ ಅಲಂಕರಿಸಿದ್ದು ಅದ್ಭುತವಾಗಿದೆ.

Image credits: instagram- ritikahairstylist
Kannada

ಸೀರೆಯೊಂದಿಗೆ ನ್ಯೂಡ್ ಮೇಕಪ್

ನೀತಾ ಅಂಬಾನಿ ಮಿನಿಮಲ್ ಮೇಕಪ್ ಲುಕ್ ಆಯ್ಕೆ ಮಾಡಿಕೊಂಡಿದ್ದಾರೆ. ರೇಷ್ಮೆ ಬನಾರಸಿ ಸೀರೆಯೊಂದಿಗೆ ಗ್ಲಾಸಿ ಕೆನ್ನೆಗಳು, ನ್ಯೂಡ್ ಲಿಪ್‌ಸ್ಟಿಕ್ ಮತ್ತು ಕೆಂಪು ಬಿಂದಿ ಧರಿಸಿದ್ದಾರೆ. ಇದು ಅವರಿಗೆ ತುಂಬಾ ಕ್ಲಾಸಿ ಲುಕ್ 

Image credits: instagram- ritikahairstylist
Kannada

ನೀತಾ ಅಂಬಾನಿ ಲುಕ್ ರೀಕ್ರಿಯೇಟ್ ಮಾಡಿ

ನೀವು ಕೂಡ ಯಾವುದೇ ಸಮಾರಂಭದಲ್ಲಿ ರಾಯಲ್ ಆಗಿ ಕಾಣಬೇಕೆಂದರೆ, ನೀತಾ ಅಂಬಾನಿ ಅವರಂತೆ ಕೆಂಪು ಬನಾರಸಿ ಸೀರೆಯೊಂದಿಗೆ ಹಸಿರು ಜ್ಯುವೆಲರಿ, ಸಿಂಪಲ್ ಮೇಕಪ್ ಮಾಡಿಕೊಳ್ಳಿ. ಇದು ಐಷಾರಾಮಿ ಫೀಲ್ ನೀಡುತ್ತೆ

Image credits: instagram- ritikahairstylist

ಸರ್ಪ್ರೈಸ್ ಗಿಫ್ಟ್ ಕೊಟ್ಟು ಪ್ರಪೋಸ್ ಮಾಡಿ, ನಿಮ್ಮ GFಗೆ ಗೋಲ್ಡ್ ಮೂಗುತಿ ಕೊಡಿ

ಆಲ್‌ರೌಂಡರ್ ಹೇರ್‌ಸ್ಟೈಲ್‌ಗೆ ಬೇಡಿಕೆ ಹೆಚ್ಚಳ; ಕರ್ಲಿ, ವೇವ್ಸ್‌ ಸ್ಟೈಲ್ ಇಲ್ಲಿವೆ

ಬೆಳ್ಳಿ ಬೆಲೆ ಭಾರೀ ಕುಸಿತ, ಇದೇ ಚಾನ್ಸ್, ಖರೀದಿಸಿ ಸಿಲ್ವರ್ ಪಯಲ್ ಡಿಸೈನ್ಸ್!

ವರ್ಕಿಂಗ್ ವುಮನ್ಸ್‌ಗೆ ಇವಿಲ್ ಐ ಬ್ರೇಸ್ಲೆಟ್, ಇಲ್ಲಿವೆ 6 ಡಿಸೈನ್ಸ್‌