ಶೈಲಪುತ್ರಿ ಆರಾಧನೆಯ ಈ ದಿನ ಕೇಸರಿ ಬಣ್ಣದ ಸೀರೆ ಧರಿಸಿ. ಅನುಪಮಾ ಗೌಡರ ಈ ಕೇಸರಿ ಮತ್ತು ಪಿಂಕ್ ಬಾರ್ಡರ್ ಸೀರೆ ಹಬ್ಬಕ್ಕೆ ಹೇಳಿ ಮಾಡಿಸಿದಂತಿದೆ.
fashion Oct 07 2026
Author: Pavna Das Image Credits:Instagram
Kannada
ನವರಾತ್ರಿ ದಿನ -2 - ಅಕ್ಟೋಬರ್ 12
ಎರಡನೇ ದಿನ ಬ್ರಹ್ಮಚಾರಿಯನ್ನು ಪೂಜಿಸುವ ದಿನ ಬಿಳಿ ಬಣ್ಣದ ಸೀರೆ ಧರಿಸಿ. ಅನುಪಮಾ ಧರಿಸಿರುವ ಬಾರ್ಡರ್ ಹಾಗೂ ಸೆರಗಿನಲ್ಲಿ ಮಾತ್ರ ಫ್ಲೋರಲ್ ವರ್ಕ್ ಇರುವ ಸೀರೆ ಚೆನ್ನಾಗಿದೆ.
Image credits: Instagram
Kannada
ನವರಾತ್ರಿ ದಿನ -3 - ಅಕ್ಟೋಬರ್ 13
ಮೂರನೇ ದಿನ ಚಂದ್ರಘಂಟಾ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಕೆಂಪು ಬಣ್ಣದ ಸೀರೆ ಧರಿಸಿ. ಈ ಕೆಂಪು ಬಣ್ಣದ ಮೈ ಪೂರ್ತಿ ಜರಿ ಇರುವ ಲೈಟ್ ವೈಟ್ ಸೀರೆ ಹಬ್ಬದ ಕಳೆಯನ್ನು ಮತ್ತಷ್ಟು ಹೆಚ್ಚಿಸುತ್ತೆ.
Image credits: Instagram
Kannada
ನವರಾತ್ರಿ ದಿನ -4 - ಅಕ್ಟೋಬರ್ 14
ನಾಲ್ಕನೇ ದಿನ ಕುಷ್ಮಾಂಡ ದೇವಿಯನ್ನು ಪೂಜಿಸಲಾಗುತ್ತಿದೆ. ಈ ದಿನದ ಬಣ್ಣ ನೀಲಿ. ಈ ಹೆವಿ ಅಗಲ ಬಾರ್ಡರ್ ಸೀರೆ ಮತ್ತು ಫುಲ್ ಸ್ಲೀವ್ ಬ್ಲೌಸ್ ಲುಕ್ ರಿಚ್ ಲುಕ್ ನೀಡಲು ಸಹಾಯ ಮಾಡುತ್ತದೆ.
Image credits: Instagram
Kannada
ನವರಾತ್ರಿ ದಿನ -5 - ಅಕ್ಟೋಬರ್ 15
ಐದನೇ ದಿನ ಸ್ಕಂದಮಾತೆಯನ್ನು ಪೂಜಿಸಲಾಗುತ್ತದೆ. ಈ ದಿನದ ಬಣ್ಣ ಹಳದಿ. ಅನುಪಮಾ ಧರಿಸಿರುವ ಈ ಪಿಂಕ್ ಬಾರ್ಡರ್ ಬಂದಿರುವ ಹಳದಿ ಸೀರೆ ವಿಂಟೇಜ್ ಲುಕ್ ನೀಡುತ್ತದೆ.
Image credits: Instagram
Kannada
ನವರಾತ್ರಿ ದಿನ -6 - ಅಕ್ಟೋಬರ್ 16
ಆರನೇ ದಿನ ಕಾತ್ಯಾಯಿನಿ ಮಾತೆಯನ್ನು ಪೂಜಿಸಲಾಗುತ್ತದೆ. ಈ ದಿನ ಬಣ್ಣ ಹಸಿರು. ತಿಳಿ ಹಸಿರು ಬಣ್ಣಕ್ಕೆ, ಡಾರ್ಕ್ ಗ್ರೀನ್ ಸೆರಗು ಬಂದಿರುವ ಈ ಮೈಸೂರ್ ಕ್ರೇಪ್ ಸೀರೆ ತುಂಬಾನೆ ಸುಂದರವಾಗಿದೆ.
Image credits: Instagram
Kannada
ನವರಾತ್ರಿ ದಿನ -7 - ಅಕ್ಟೋಬರ್ 17
ನವರಾತ್ರಿ ಏಳನೇ ದಿನ ಕಾಳರಾತ್ರಿಯನ್ನು ಪೂಜಿಸಲಾಗುತ್ತದೆ. ಈ ದಿನದ ಬಣ್ಣ ಬೂದು ಬಣ್ಣ. ಈ ದಿನ ನೀವು ಸೀರೆಯ ಬದಲು ಅನುಪಮಾ ಧರಿಸಿರುವಂತೆ ಬೂದು ಮತ್ತು ಕಪ್ಪು ಬಣ್ಣದ ಸುಂದರ ಲಂಗ ದಾವಣಿ ಧರಿಸಿ.
Image credits: Instagram
Kannada
ನವರಾತ್ರಿ ದಿನ -8 - ಅಕ್ಟೋಬರ್ 18
ನವರಾತ್ರಿಯ ಎಂಟನೇ ದಿನ ಮಹಾಗುರಿಯ ದಿನ. ಈ ದಿನದ ಬಣ್ಣ ನೇರಳೆ. ಸಿಲ್ವರ್ ಬಾರ್ಡರ್ ಇರುವಂತಹ ಈ ಕಾಟನ್ ಸಿಲ್ಕ್ ಸೀರೆ ಹಬ್ಬಕ್ಕೆ ಆರಾಮದಾಯಕವಾಗಿರುತ್ತದೆ.
Image credits: Instagram
Kannada
ನವರಾತ್ರಿ ದಿನ -9 - ಅಕ್ಟೋಬರ್ 19
ಇನ್ನು ನವರಾತ್ರಿಯ ಕೊನೆಯ ದಿನ ಸಿದ್ದಿದಾತ್ರಿಯನ್ನು ಪೂಜಿಸುವ ದಿನ. ಈ ದಿನದ ಬಣ್ಣ ನವಿಲು ಹಸಿರು. ಅನುಪಮಾ ಧರಿಸಿರುವ ಈ ಸೀರೆ ಹಬ್ಬದ ಸಂಭ್ರಮವನ್ನು ಡಬಲ್ ಮಾಡುತ್ತೆ.