ಚಿನ್ನ, ಬೆಳ್ಳಿ ಯಾಕೆ? ಈ 6 ಕಲರ್‌ಫುಲ್ ಮೂಗುತಿ ಹಾಕಿ, ಹೊಸ ಲುಕ್‌ನಲ್ಲಿ ಮಿಂಚಿ!
ಸದಾ ಒಂದೇ ಬಗೆಯ ಚಿನ್ನ, ಬೆಳ್ಳಿಯ ಮೂಗುತಿ ಹಾಕಿ ಬೇಜಾರಾಗಿದ್ರೆ, ಈ ಕಲರ್‌ಫುಲ್ ಮೂಗುತಿಗಳನ್ನು ಟ್ರೈ ಮಾಡಿ ನೋಡಿ. ಇವು ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ.
fashion Jun 06 2026
Author: Govindaraj S Image Credits:instagram
Kannada
ಬಟರ್‌ಫ್ಲೈ ಬ್ಲೂ ಗ್ರೀನ್ ಮೂಗುತಿ
ಬರೀ ಚಿನ್ನ ಅಥವಾ ಬೆಳ್ಳಿಯ ಮೂಗುತಿ ಹಾಕಿ ಬೇಜಾರಾಗಿದೆಯಾ? ಹಾಗಿದ್ರೆ, ಈ ತರಹದ ಕಲರ್‌ಫುಲ್ ಮೂಗುತಿಗಳನ್ನು ಧರಿಸಿ ನಿಮ್ಮ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಬಹುದು.
Image credits: instagram
Kannada
ರಾಬಿಟ್ ಲುಕ್ ಮೂಗುತಿ
ಮೊಲದ ಹಾಗೆ ಕಾಣುವ ಈ ಮೂಗುತಿ ತುಂಬಾನೇ ಕ್ಯೂಟ್ ಆಗಿದೆ. ನೀವೂ ಕೂಡ ಇಂತಹ ಕಲರ್‌ಫುಲ್ ಕಲ್ಲಿನ ಮೂಗುತಿಗಳನ್ನು ಆಯ್ಕೆ ಮಾಡಿಕೊಂಡು ಸುಂದರವಾಗಿ ಕಾಣಬಹುದು.
Image credits: pinterest
Kannada
ಕೆಂಪು ಕಲ್ಲಿನ ಮೂಗುತಿ
ಕೆಂಪು ಬಣ್ಣದ ಕಲ್ಲಿನಿಂದ ಮಾಡಿದ ಈ ಮೂಗುತಿ ನೋಡಲು ಹೆವಿ ಲುಕ್ ಕೊಡುತ್ತದೆ. ಜೊತೆಗೆ, ಕೆಳಗೆ ನೇತಾಡುವ ಮುತ್ತಿನ ಹನಿ ಇದರ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.
Image credits: nykdesignstudio instagram
Kannada
ಹಸಿರು ಕಲ್ಲಿನ ಮೂಗುತಿ
ನಿಮ್ಮ ಹಸಿರು ಬಣ್ಣದ ಡ್ರೆಸ್‌ಗೆ ಮ್ಯಾಚ್ ಆಗುವಂತೆ ಈ ರೀತಿ ಹಸಿರು ಬಣ್ಣದ ಮೂಗುತಿ ಧರಿಸಬಹುದು. ಇಂತಹ ಮೂಗುತಿಗಳಲ್ಲಿ ನಿಮಗೆ ಗೋಲ್ಡ್ ಪ್ಲೇಟೆಡ್ ವರ್ಕ್ ಕೂಡ ಸಿಗುತ್ತದೆ.
Image credits: pinterest
Kannada
ಹಾರ್ಟ್ ಶೇಪ್ ಪಿಂಕ್ ಮೂಗುತಿ
ಕೇವಲ ಗುಂಡಗಿನ ಡಿಸೈನ್ ಮಾತ್ರವಲ್ಲ, ನೀವು ಹಾರ್ಟ್ ಶೇಪ್ ಅಥವಾ ಸ್ಟಾರ್ ಶೇಪ್‌ನ ಮೂಗುತಿಗಳನ್ನು ಕೂಡ ಖರೀದಿಸಬಹುದು. ಈ ಮೂಗುತಿಗಳ ಸೈಜ್ ಚಿಕ್ಕದಾಗಿದ್ದರೂ, ಮುಖಕ್ಕೆ ತುಂಬಿದ ಲುಕ್ ಕೊಡುತ್ತವೆ.
Image credits: Pinterest
Kannada
ಬ್ಯಾಗೆಟ್-ಕಟ್ ಕಲರ್‌ಫುಲ್ ಮೂಗುತಿ
ನೀವು ಕಟ್ ವರ್ಕ್ ಸ್ಟೋನ್ ಇರುವ ಸುಂದರವಾದ ಮೂಗುತಿ ಡಿಸೈನ್‌ಗಳನ್ನು ಕೂಡ ಖರೀದಿಸಬಹುದು. ಇಂತಹ ಮೂಗುತಿಗಳು ಸ್ಟೇಟ್‌ಮೆಂಟ್ ರಿಂಗ್‌ನಂತೆ ಕೆಲಸ ಮಾಡುತ್ತವೆ, ಎಲ್ಲರ ಗಮನ ಸೆಳೆಯುತ್ತವೆ.