Kannada

ಉದ್ದ ಕೂದಲಿಗೆ ಜೆನೆಲಿಯಾರಂತೆ ಹೂ ಮುಡಿಯಿರಿ.. ರಾಮನವಮಿಗೆ ದೇವತೆಯಂತೆ ಮಿಂಚಿ!

ರಾಮನವಮಿ ಹಬ್ಬಕ್ಕೆ ಸಾಂಪ್ರದಾಯಿಕವಾಗಿ ರೆಡಿಯಾಗಲು ನಟಿ ಜೆನೆಲಿಯಾ ದೇಶಮುಖ್ ಅವರ ಈ ಹೂವಿನ ಕೇಶವಿನ್ಯಾಸಗಳು ನಿಮಗೆ ಸ್ಫೂರ್ತಿ ನೀಡಬಹುದು. ಉದ್ದ ಕೂದಲಿಗೆ ಇವುಗಳು ಬಹಳ ಸುಂದರವಾಗಿ ಕಾಣಿಸುತ್ತವೆ.
Kannada

ರೋಸ್ ಬ್ರೇಡ್ ಹೇರ್‌ಸ್ಟೈಲ್

ಇತ್ತೀಚೆಗೆ ಜೆನೆಲಿಯಾ ದೇಶಮುಖ್ ತಮ್ಮ ಟ್ರೆಡಿಷನಲ್ ಲುಕ್‌ಗೆ ಗುಲಾಬಿ ಹೂಗಳಿಂದ ಅಲಂಕರಿಸಿದ ಜಡೆ ಹಾಕಿದ್ದರು. ಜಡೆಯ ಮೇಲ್ಭಾಗದಲ್ಲಿ ಗುಲಾಬಿ ಗೊಂಚಲು, ಕೆಳಗೆ ಗುಲಾಬಿ ಮತ್ತು ಮಲ್ಲಿಗೆ ಗಜರಾ ಇಟ್ಟಿದ್ದರು. 

Image credits: instagram
Kannada

ರೋಸ್ ಲಡಿ ಹೇರ್‌ಸ್ಟೈಲ್

ಜೆನೆಲಿಯಾರ ಲುಕ್ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಯುವತಿಯರು ಹಬ್ಬ-ಹರಿದಿನಗಳಲ್ಲಿ ಹೆಚ್ಚಾಗಿ ಇಂತಹ ಹೇರ್‌ಸ್ಟೈಲ್ ಇಷ್ಟಪಡುತ್ತಾರೆ. ಗುಲಾಬಿ ಹೂವಿನ ಸರಗಳನ್ನು ಮೇಲಿನಿಂದ ಪಿನ್ ಮಾಡಿ, ಕೂದಲನ್ನು ಓಪನ್ ಆಗಿ ಬಿಡಿ.

Image credits: instagram
Kannada

ಲೋ ಗಜರಾ ವಿತ್ ಬನ್

ಮಲ್ಲಿಗೆ ಹೂವಿನ ಗಜರಾ ಹೇರ್‌ಸ್ಟೈಲ್ ಹೆಚ್ಚಿನ ಮಹಿಳೆಯರಿಗೆ ಇಷ್ಟವಾಗುತ್ತದೆ. ಬನ್ ಸುತ್ತ ಗಜರಾ ಸುತ್ತುವ ಬದಲು, ಮಿನಿಮಲ್ ಲುಕ್‌ಗಾಗಿ ಬನ್‌ನ ಕೆಳಗೆ ಗಜರಾ ಇಡಿ. ಇದು ಸೀರೆ ಜೊತೆ ತುಂಬಾ ಚೆನ್ನಾಗಿ ಕಾಣಿಸುತ್ತದೆ.

Image credits: instagram
Kannada

ಮಲ್ಲಿಗೆ ಗಜರಾ ಹೇರ್‌ಸ್ಟೈಲ್ ವಿತ್ ಬನ್

ಸರಳವಾದ ಬನ್‌ಗೆ ಮುಡಿದ ಮಲ್ಲಿಗೆ ಗಜರಾ ಈ ಹೇರ್‌ಸ್ಟೈಲ್‌ಗೆ ಕ್ಲಾಸಿ ಮತ್ತು ಎಲಿಗೆಂಟ್ ಲುಕ್ ನೀಡುತ್ತದೆ. ಟ್ರೆಡಿಷನಲ್ ಸೀರೆ ಜೊತೆ ಈ ಸ್ಟೈಲ್, ಹಬ್ಬದ ಸಂದರ್ಭದಲ್ಲೂ ನಿಮ್ಮನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ.

Image credits: instagram
Kannada

ಬಿಳಿ ಹೂವಿನ ಜಡೆ

ಬಿಳಿ ಅಥವಾ ಕೆಂಪು ಸೀರೆಗೆ ನೀವು ಬಿಳಿ ಹೂವುಗಳಿಂದ ಅಲಂಕರಿಸಿದ ಜಡೆ ಹಾಕಿಕೊಳ್ಳಬಹುದು. ಹಿಂದಿನಿಂದ ನೋಡಲು ಇದು ಕೂಡಾ ತುಂಬಾನೇ ಆಕರ್ಷಕವಾಗಿ ಕಾಣಿಸುತ್ತದೆ.

Image credits: instagram
Kannada

ಓಪನ್ ಹೇರ್ ಫ್ಲವರ್ ಹೇರ್‌ಸ್ಟೈಲ್

ನಿಮ್ಮ ಎಥ್ನಿಕ್ ಲುಕ್‌ನಲ್ಲಿ ಕೂದಲನ್ನು ಓಪನ್ ಆಗಿ ಇಟ್ಟುಕೊಂಡು, ಅದಕ್ಕೆ ಹೂವಿನ ಟಚ್ ಕೊಡಬೇಕೆಂದರೆ ಈ ಸ್ಟೈಲ್ ಪರ್ಫೆಕ್ಟ್. ಜೆನೆಲಿಯಾ ಇಲ್ಲಿ ಸೈಡ್‌ನಲ್ಲಿ ಬಿಳಿ ಹೂವನ್ನು ಪಿನ್ ಮಾಡಿದ್ದಾರೆ.

Image credits: instagram

ಸಖತ್ ಟ್ರೆಂಡಿಂಗ್‌ನಲ್ಲಿರೋ 6 ಅಫ್ಘಾನಿ ಸಲ್ವಾರ್ ಸೂಟ್: ರೆಡಿಮೇಡ್‌ನಲ್ಲೂ ಲಭ್ಯ!

2 ಗ್ರಾಂ ಚಿನ್ನದಲ್ಲಿ ಪೆಟಲ್ ಇಯರಿಂಗ್ಸ್.. ಮಗಳಿಗಾಗಿ ಇಲ್ಲಿದೆ ಕ್ಯೂಟ್ ಡಿಸೈನ್ಸ್!

ಸೊಂಟ ಸಣ್ಣ ಕಾಣಬೇಕೇ? ಇಲ್ಲಿವೆ ದಿವ್ಯಾಂಕಾರ 7 ಸೀರೆ ಸ್ಟೈಲಿಂಗ್ ಸೀಕ್ರೆಟ್ಸ್ !

ಉದ್ದ ಮೂಗಿನವರಿಗೆ ಪರ್ಫೆಕ್ಟ್ ಲುಕ್! ಹಬ್ಬದಂದು ಈ 7 ಹೇರ್‌ಸ್ಟೈಲ್ ಟ್ರೈ ಮಾಡಿ!