Kannada

ಜೆನ್ ಜಿ ಹುಡುಗಿಯರ ಹೊಸ ಫ್ಯಾಷನ್ ಕ್ರಶ್, ಬುಲಾಕಿ ಧರಿಸಿ ದೇಸಿ ಗ್ಲಾಮ್

ಹಿಂದಿನ ಕಾಲದ ಫ್ಯಾಷನ್ ಆಗಿದ್ದ ಬುಲಾಕಿ ಈಗ ಮತ್ತೆ ಟ್ರೆಂಡ್‌ಗೆ ಬಂದಿದೆ. ಅದರಲ್ಲೂ ಜೆನ್ ಜಿ ಹುಡುಗಿಯರು ಈ ದೇಸಿ ಆಭರಣಕ್ಕೆ ಮನಸೋತಿದ್ದಾರೆ. ಇದನ್ನು ಧರಿಸಿ ತಮ್ಮ ದೇಸಿ ಗ್ಲಾಮ್ ಲುಕ್ ತೋರಿಸುತ್ತಿದ್ದಾರೆ.
Kannada

ಸೆಪ್ಟಮ್ ನೋಸ್ ರಿಂಗ್ ಡಿಸೈನ್ಸ್

ಮೂಗಿನ ಮಧ್ಯದಲ್ಲಿ ಧರಿಸುವ ಆಭರಣಕ್ಕೆ ಬುಲಾಕಿ ಎನ್ನುತ್ತಾರೆ. ಇದನ್ನು 'ಸೆಪ್ಟಮ್ ನೋಸ್ ರಿಂಗ್' ಅಂತಾನೂ ಕರೆಯುತ್ತಾರೆ. ಹಳೆ ಕಾಲದ ಈ ಜ್ಯುವೆಲ್ಲರಿ ಈಗ ಮಾಡರ್ನ್ ಫ್ಯಾಷನ್‌ನ ಭಾಗವಾಗಿದೆ.  

Image credits: pinterest
Kannada

ಮಿನಿಮಲ್ ಗೋಲ್ಡ್ ಸೆಪ್ಟಮ್ ನೋಸ್ ರಿಂಗ್

ಸರಳ ಮತ್ತು ಹಗುರವಾದ ಚಿನ್ನದ ರಿಂಗ್ ಇರುವ ಸೆಪ್ಟಮ್ ನೋಸ್ ರಿಂಗ್, ಕಾಲೇಜು ಲುಕ್‌ಗೆ ಪರ್ಫೆಕ್ಟ್ ಆಗಿದೆ. ಇದು ಕೇವಲ ತೆಳುವಾದ ಚಿನ್ನದ ತಂತಿಯಿಂದ ಮಾಡಿದ್ದು ಕಾಲೇಜು ಹುಡುಗಿಯರು ಇದನ್ನು ಹೆಚ್ಚಾಗಿ ಇಷ್ಟಪಡುತ್ತಾರೆ.

Image credits: pinterest
Kannada

ಸ್ಟೋನ್ ಸ್ಟಡೆಡ್ ಬುಲಾಕಿ

ಚಿಕ್ಕ ಚಿಕ್ಕ ಹೊಳೆಯುವ ಸ್ಟೋನ್‌ಗಳಿಂದ ಅಲಂಕರಿಸಿದ ಈ ಸೆಪ್ಟಮ್ ನೋಸ್ ರಿಂಗ್, ಪಾರ್ಟಿ ಮತ್ತು ಹಬ್ಬದ ದಿನಗಳಲ್ಲಿ ನಿಮ್ಮ ಲುಕ್ ಅನ್ನು ಇನ್ನಷ್ಟು ಗ್ಲಾಮರಸ್ ಆಗಿ ಮಾಡುತ್ತದೆ.

Image credits: pinterest
Kannada

ಡಬಲ್ ಲೇಯರ್ ಸೆಪ್ಟಮ್ ನೋಸ್ ರಿಂಗ್

ನಿಮಗೆ ಒಂದು ಬೋಹೋ ಲುಕ್ ಬೇಕಿದ್ದರೆ, ಈ ರೀತಿಯ ಡಬಲ್ ಲೇಯರ್ ಗೋಲ್ಡ್ ಬುಲಾಕಿಯನ್ನು ಧರಿಸಬಹುದು. ಇದರಲ್ಲಿ ಒಂದು ರೌಂಡ್ ಮತ್ತು ಇನ್ನೊಂದು ಕರ್ವ್ ಶೇಪ್‌ನಲ್ಲಿ ಇರುತ್ತದೆ.

Image credits: pinterest
Kannada

ಪರ್ಲ್ ಡೀಟೇಲ್ ಬುಲಾಕಿ

ಮುತ್ತುಗಳಿಂದ (ಪರ್ಲ್) ಅಲಂಕರಿಸಿದ ಈ ಡಿಸೈನ್ ತುಂಬಾ ಸಾಫ್ಟ್ ಮತ್ತು ಎಲಿಗೆಂಟ್ ಲುಕ್ ನೀಡುತ್ತದೆ. ವಿಶೇಷವಾಗಿ ಮದುವೆ ಸಮಾರಂಭಗಳಿಗೆ ಈ ಡಿಸೈನ್ ಬೆಸ್ಟ್. ಇದನ್ನು ಚಿನ್ನ ಮತ್ತು ಬೆಳ್ಳಿ ಎರಡರಲ್ಲೂ ಮಾಡಿಸಿಕೊಳ್ಳಬಹುದು.

Image credits: pinterest
Kannada

ಡ್ಯಾಂಗ್ಲರ್ ಬುಲಾಕಿ

ಬೆಳ್ಳಿಯ ತೆಳುವಾದ ಬುಲಾಕಿಯಲ್ಲಿ ಸ್ಟೋನ್‌ನ ಒಂದು ಚಿಕ್ಕ ಡ್ಯಾಂಗ್ಲರ್ ಅನ್ನು ಅಳವಡಿಸಲಾಗಿದೆ. ಮಿನಿಮಲ್ ಲುಕ್‌ನಲ್ಲಿ ಹೆಚ್ಚು ಕ್ಲಾಸಿಕ್ ಆಗಿ ಕಾಣಲು ನೀವು ಈ ರೀತಿಯ ಬುಲಾಕಿ ಡಿಸೈನ್ ಟ್ರೈ ಮಾಡಬಹುದು.

Image credits: pinterest

ಮೆಟಲ್ ಓಲೆಗಳಿಗೆ ಹೇಳಿ ಗುಡ್‌ ಬೈ, ಮುತ್ತು-ಮಣಿಗಳ ಈ ಡಿಸೈನ್ ಟ್ರೈ ಮಾಡಿ ನೋಡಿ!

ಕೈಗಳಿಗೆ ರಾಯಲ್ ಟಚ್ ನೀಡುತ್ತೆ ಈ 5 ಸುಂದರ ಪರ್ಲ್-ಕುಂದನ್ ಜಡಾವು ಬಳೆ ಡಿಸೈನ್ಸ್!

32 ಇಂಚಿನ ಸೊಂಟವನ್ನ 26 ಇಂಚಿನಷ್ಟು ಸಣ್ಣದಾಗಿ ಕಾಣಿಸುವಂತೆ ಮಾಡುವ ಸೊಂಟಪಟ್ಟಿ

ಸೀರೆ, ಕುರ್ತಾಗೆ ಸ್ಟೈಲಿಶ್ ಲುಕ್ ನೀಡುತ್ತೆ ಈ ಟ್ರೆಂಡಿ ಗಾಜಿನ ಬಳೆಗಳ ಡಿಸೈನ್ಸ್!