Kannada

ಪುಟ್ಟ ಪಾದಗಳಿಗೆ

ಪುಟ್ಟ ಮಕ್ಕಳ ಕಾಲಿಗೆ ಗೆಜ್ಜೆ ಹಾಕೋದು ನಮ್ಮಲ್ಲಿ ಸಂಪ್ರದಾಯ. ಇಲ್ಲಿ ನಾವು 1 ರಿಂದ 5 ವರ್ಷದ ಹೆಣ್ಣು ಅಥವಾ ಗಂಡು ಮಕ್ಕಳಿಗೆ ಹಾಕಬಹುದಾದ 6 ಗೆಜ್ಜೆ ಡಿಸೈನ್‌ಗಳನ್ನು ತೋರಿಸುತ್ತಿದ್ದೇವೆ. 

Kannada

ಸಿಂಪಲ್ ಡಿಸೈನ್

ಹೆಣ್ಣುಮಕ್ಕಳ ಕಾಲಿಗೆ ಗೆಜ್ಜೆಗಳಿರುವ ಕಾಲುಗೆಜ್ಜೆ ತುಂಬಾ ಚೆನ್ನಾಗಿ ಕಾಣುತ್ತೆ. ಭಾರವಾದ ಗೆಜ್ಜೆ ಬದಲು ಸಿಂಪಲ್ ಡಿಸೈನ್ ಆಯ್ಕೆ ಮಾಡಿ. ಇದರಿಂದ ಮಕ್ಕಳಿಗೆ ಹಾಕಿಕೊಳ್ಳಲು ಯಾವುದೇ ತೊಂದರೆ ಆಗಲ್ಲ. 

Image credits: giva.co
Kannada

ಗೆಜ್ಜೆ ಕಡ ಕಾಲುಗೆಜ್ಜೆ

ಗೆಜ್ಜೆ ಕಡ ಕಾಲುಗೆಜ್ಜೆ 2 ತಿಂಗಳಿಂದ 3 ವರ್ಷದ ಮಕ್ಕಳ ಕಾಲಿಗೆ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಈ ರೀತಿಯ ಕಾಲುಗೆಜ್ಜೆಗಳು 3-4 ಸಾವಿರ ರೂಪಾಯಿಗೆ ಸಿಗುತ್ತವೆ.

Image credits: pinterest
Kannada

ಕಪ್ಪು ಮಣಿ-ಬೆಳ್ಳಿ ಗೆಜ್ಜೆ ಕಾಲುಗೆಜ್ಜೆ

ಮಕ್ಕಳಿಗೆ ದೃಷ್ಟಿ ಆಗದಿರಲಿ ಅಂತ ಈ ರೀತಿಯ ಕಡ ಕಾಲುಗೆಜ್ಜೆ ತೆಗೆದುಕೊಳ್ಳಬಹುದು. ಕಡದಲ್ಲಿ ಕಪ್ಪು ಮಣಿಗಳನ್ನು ಜೋಡಿಸಲಾಗಿರುತ್ತದೆ. ಅದರ ಕೆಳಗೆ ಗೆಜ್ಜೆಗಳನ್ನು ಸೇರಿಸಿರುತ್ತಾರೆ.

Image credits: pinterest
Kannada

ಬೆಳ್ಳಿಯ ಮಣಿಗಳ ಪಾಯಲ್

ನಿಮ್ಮ ಮುದ್ದು ಕಂದನ ಕಾಲಿಗೆ ತುಂಬಾನೇ ಹಗುರವಾದ, ಸ್ಟೈಲಿಶ್ ಕಾಲುಗೆಜ್ಜೆ ಹಾಕಿಸಬೇಕು ಅಂದುಕೊಂಡಿದ್ದರೆ ಈ ಡಿಸೈನ್ ಆಯ್ಕೆ ಮಾಡಬಹುದು. ಸಣ್ಣ ಸಣ್ಣ ಬೆಳ್ಳಿಯ ಮಣಿಗಳನ್ನು ಚೈನ್‌ನಲ್ಲಿಯೇ ಜೋಡಿಸಲಾಗಿರುತ್ತದೆ.  

Image credits: instagram
Kannada

ಹಾರ್ಟ್ ಶೇಪ್ ಪಾಯಲ್

ಇಲ್ಲಿ ಚೈನ್ ಜೊತೆಗೆ ಹಾರ್ಟ್ ಶೇಪ್ ಡಿಸೈನ್ ಸೇರಿಸಲಾಗಿರುತ್ತದೆ. 2-3 ಸಾವಿರ ರೂಪಾಯಿಗೆ ಈ ತರಹದ ಪಾಯಲ್‌ಗಳನ್ನು ನೀವು ಕೊಂಡುಕೊಳ್ಳಬಹುದು. 

Image credits: instagram
Kannada

ಮಕ್ಕಳ ಪಾಯಲ್‌ ಬೆಲೆ ಎಷ್ಟಿರುತ್ತೆ?

ಬೆಳ್ಳಿಯಲ್ಲಿ ಮಕ್ಕಳ ಕಾಲುಗೆಜ್ಜೆ 2-6 ಸಾವಿರ ರೂ. ಒಳಗೆ ಸಿಗುತ್ತವೆ. ಇದರ ಬೆಲೆ ತೂಕ ಮತ್ತು ಡಿಸೈನ್ ಮೇಲೆ ಅವಲಂಬಿತವಾಗಿರುತ್ತದೆ. ಪುಟ್ಟ ಮಕ್ಕಳಿಗೆ ಹಗುರವಾದ ಪಾಯಲ್ ಹಾಕುವುದೇ ಒಳ್ಳೆಯದು. 

Image credits: instagram

ಡಿಸೈನ್ ಪರ್ಫೆಕ್ಟ್ ಆಗಿದ್ರೆ ಸೀರೆಗೆ ಹೊಸ ಲುಕ್: ಇಲ್ಲಿವೆ 6 ರಫಲ್ ಬ್ಲೌಸ್ ಡಿಸೈನ್

Shimmery Bangles: ಒಂದೇ ಕೈಯಲ್ಲಿ 6 ಗಾಜಿನ ಬಳೆ ಹಾಕಿ, ನಿಮ್ಮ ಸ್ಟೈಲ್ ತೋರಿಸಿ!

ಪ್ರತಿ ಔಟ್‌ಫಿಟ್‌ಗೂ ಬಣ್ಣ ತುಂಬುವ ರೇನ್‌ಬೋ ನೆಕ್ಲೇಸ್‌; 7 ಟ್ರೆಂಡಿ ಡಿಸೈನ್ಸ್

ಕಿರುಬೆರಳಿನ ಅಂದ ಹೆಚ್ಚಿಸೋ ಈ ಪಿಂಕಿ ರಿಂಗ್ ಡಿಸೈನ್‌ ನೋಡಿದ್ರೆ ಲವ್ ಆಗೋದು ಪಕ್ಕಾ