Kannada

Kids Mehendi: ಮದುವೆಗೆ ಪುಟ್ಟ ಮಗಳ ಕೈಯಲ್ಲಿರಲಿ ಈ 9 ಕ್ಯೂಟ್ ಮೆಹಂದಿ ಡಿಸೈನ್ಸ್!

ಮನೆಯಲ್ಲಿ ಮದುವೆ ಸಂಭ್ರಮವಿದ್ದಾಗ, ದೊಡ್ಡವರ ಜೊತೆ ಮಕ್ಕಳೂ ಮೆಹಂದಿ ಹಾಕಿಸಿಕೊಳ್ಳಲು ಇಷ್ಟಪಡುತ್ತಾರೆ. ಪುಟ್ಟ ಮಕ್ಕಳ ಕೈಗಳಿಗೆ ಹಾಕಬಹುದಾದ ಕೆಲವು ಕ್ಯೂಟ್ ಡಿಸೈನ್‌ಗಳು ಇಲ್ಲಿವೆ.
Kannada

ಕಿಡ್ಸ್ ಮೆಹಂದಿ ಡಿಸೈನ್

ಮಕ್ಕಳ ಕೈಯಲ್ಲಿ ಆಟಿಕೆ ಅಥವಾ ಪ್ರಾಣಿಗಳ ಮೆಹಂದಿ ತುಂಬಾ ಕ್ಯೂಟ್ ಆಗಿ ಕಾಣಿಸುತ್ತೆ. ನೀವು ಮೆಹಂದಿಯಿಂದ ಒಂದು ಪುಟ್ಟ ಆನೆ ಚಿತ್ರ ಬಿಡಿಸಿ, ಅದರ ಮೇಲೆ ಸ್ಟಾರ್ ಮತ್ತು ಚಂದ್ರನ ಆಕಾರವನ್ನು ರಚಿಸಿ. 

Image credits: Instagram@muskan.mehndi_studio
Kannada

ಫ್ರೂಟ್ ಶೇಪ್ ಮೆಹಂದಿ

ಮಕ್ಕಳ ಕೈಯ ಹಿಂಭಾಗದಲ್ಲಿ ಈ ರೀತಿ ಮೆಹಂದಿ ಡಾಟ್ಸ್ ಬಳಸಿ ದ್ರಾಕ್ಷಿ ಗೊಂಚಲಿನ ಚಿತ್ರ ಬಿಡಿಸಬಹುದು. ಇದು ಅವರ ಕೈಗಳಿಗೆ ಮುದ್ದಾದ ಲುಕ್ ಕೊಡುತ್ತೆ.

Image credits: Instagram@muskan.mehndi_studio
Kannada

ಫ್ರಂಟ್ ಹ್ಯಾಂಡ್ ಮೆಹಂದಿ ಡಿಸೈನ್

ಪುಟ್ಟ ಮಗಳ ಅಂಗೈಯಲ್ಲಿ ಕ್ಯೂಟ್ ಮೆಹಂದಿ ಹಾಕಲು, ನಗುತ್ತಿರುವ ಸೇಬಿನ ಆಕಾರದ ಡಿಸೈನ್ ಬಿಡಿಸಿ. ಅದರ ಅಕ್ಕಪಕ್ಕದಲ್ಲಿ ಡಾಟ್ಸ್ ಮತ್ತು ಸ್ಟಾರ್‌ಗಳನ್ನು ಹಾಕಿ ಮೆಹಂದಿಯನ್ನು ಪೂರ್ಣಗೊಳಿಸಿ.

Image credits: Instagram@muskan.mehndi_studio
Kannada

ಫಿಶ್ ಶೇಪ್ ಮೆಹಂದಿ ಡಿಸೈನ್

ಕೈಯ ಹಿಂಭಾಗದಲ್ಲಿ ಈ ರೀತಿಯ ಮೀನಿನ ಆಕಾರದ ಮೆಹಂದಿ ಕೂಡ ತುಂಬಾ ಕ್ಯೂಟ್ ಆಗಿ ಕಾಣುತ್ತದೆ. ಇದರಲ್ಲಿ ಮೆಹಂದಿ ಕೋನ್‌ನಿಂದ ಮೀನಿನ ಚಿತ್ರ ಬಿಡಿಸಿ ಅಕ್ವೇರಿಯಂನಂತಹ ಲುಕ್ ನೀಡಲಾಗಿದೆ.

Image credits: Instagram@muskan.mehndi_studio
Kannada

ಫ್ರೂಟ್ ಬಾಸ್ಕೆಟ್ ಮೆಹಂದಿ ಡಿಸೈನ್

ಮಗಳ ಅಂಗೈಯಲ್ಲಿ ನೀವು ಅಂಡಾಕಾರದ ಹಣ್ಣಿನ ಬುಟ್ಟಿಯನ್ನು ಸಹ ಬಿಡಿಸಬಹುದು. ಇದರಲ್ಲಿ ಒಂದು ಬಾಸ್ಕೆಟ್ ರಚಿಸಿ, ಅದರಲ್ಲಿ ಸಣ್ಣ ಸಣ್ಣ ಹಣ್ಣುಗಳನ್ನು ಮೆಹಂದಿಯಿಂದ ಡೀಟೇಲ್ ಆಗಿ ಬಿಡಿಸಲಾಗಿದೆ.

Image credits: Instagram@muskan.mehndi_studio
Kannada

ಪೈನಾಪಲ್ ಶೇಪ್ ಮೆಹಂದಿ ಡಿಸೈನ್

ಕೈಯ ಹಿಂಭಾಗದಲ್ಲಿ ಈ ರೀತಿ ಕ್ಯೂಟ್ ಆದ ಪೈನಾಪಲ್ ಆಕಾರದ ಕ್ರಿಸ್-ಕ್ರಾಸ್ ಪ್ಯಾಟರ್ನ್ ಮೆಹಂದಿಯನ್ನು ಸಹ ನೀವು ಹಾಕಬಹುದು. ಇದರ ಅಕ್ಕಪಕ್ಕದಲ್ಲಿ ಡಾಟ್ಸ್ ಹಾಕಿ ಡಿಸೈನ್ ಪೂರ್ಣಗೊಳಿಸಲಾಗಿದೆ.

Image credits: Instagram@muskan.mehndi_studio
Kannada

ಬಟರ್‌ಫ್ಲೈ ಡಿಸೈನ್ ಮೆಹಂದಿ

ಈ ಕ್ಯೂಟ್ ಬಟರ್‌ಫ್ಲೈ ಡಿಸೈನ್ ಮೆಹಂದಿಯ ಬಣ್ಣ ತುಂಬಾ ಸುಂದರವಾಗಿ ಮೂಡಿಬರುತ್ತೆ. ಚಿಕ್ಕಪ್ಪ ಅಥವಾ ಮಾವನ ಮದುವೆಯಲ್ಲಿ ಈ ಡಿಸೈನ್ ಹಾಕಿದರೆ ನಿಮ್ಮ ಮಗಳು ಎಲ್ಲರಿಗಿಂತ ಭಿನ್ನವಾಗಿ ಕಾಣುತ್ತಾಳೆ.

Image credits: Instagram@muskan.mehndi_studio
Kannada

ಕಿಟ್ಟಿ ಮೆಹಂದಿ ಡಿಸೈನ್

ಮಕ್ಕಳ ಅಂಗೈಯಲ್ಲಿ ಈ ರೀತಿಯ ಕ್ಯೂಟ್ ಕಿಟ್ಟಿ ಡಿಸೈನ್ ಬಿಡಿಸಬಹುದು. ಇದರಲ್ಲಿ ಬೆಕ್ಕಿನ ಮುಖವನ್ನು ಮಧ್ಯದಲ್ಲಿ ಬಿಡಿಸಿ, ಅಕ್ಕಪಕ್ಕದಲ್ಲಿ ಹಾರ್ಟ್ ಶೇಪ್ ಹಾಕಿ. ಬೆರಳ ತುದಿಗಳನ್ನು ತುಂಬಿ ಮೆಹಂದಿಯನ್ನು ಪೂರ್ಣಗೊಳಿಸಿ.

Image credits: Instagram@muskan.mehndi_studio
Kannada

ಮೂನ್ ಶೇಪ್ ಮೆಹಂದಿ ಡಿಸೈನ್

ಕೈಯ ಹಿಂಭಾಗದಲ್ಲಿ ಅರ್ಧ ಚಂದ್ರನನ್ನು ಬಿಡಿಸಿ ಅದರಲ್ಲಿ ಡೀಟೇಲಿಂಗ್ ಮಾಡಬಹುದು. ಇದಕ್ಕೆ ಕ್ರಿಯೇಟಿವ್ ಲುಕ್ ನೀಡಲು, ಮಧ್ಯದಲ್ಲಿ ಒಂದು ಕ್ಯೂಟ್ ಮೊಲದ ಚಿತ್ರವನ್ನು ಬಿಡಿಸಿ. 

Image credits: Instagram@muskan.mehndi_studio

ಕುರ್ತಿ ಸ್ಟೈಲ್ ಮಾಡಲು 6 ಟಿಪ್ಸ್: ಬೇಸಿಗೆಯಲ್ಲಿ ಇಂಡೋ-ವೆಸ್ಟರ್ನ್ ಲುಕ್ ಸಖತ್ ಆಗಿರುತ್ತೆ

Red Saree: ಸಂಪ್ರದಾಯದ ಜೊತೆ ಫ್ಯಾಷನ್: ಈ 6 ಬಗೆಯ ಕೆಂಪು ಸೀರೆಗಳನ್ನು ಟ್ರೈ ಮಾಡಿ

ಹೊಟ್ಟಿನ ಸಮಸ್ಯೆಯನ್ನ ಬೇರು ಸಮೇತ ಹೋಗಲಾಡಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್

ಸಣ್ಣ ಸೊಂಟಕ್ಕೆ ಗೋಲ್ಡ್ ಪ್ಲೇಟೆಡ್ ಹಿಪ್ ಚೈನ್, ಈ 7 ಡಿಸೈನ್‌ಗಳಲ್ಲಿ ನೀವೂ ಮಿಂಚಿ!