Kannada

ಕಡಿಮೆ ಬಜೆಟ್‌ನಲ್ಲೇ ಖರೀದಿಸಿ ಮಕ್ಕಳ ಚಿನ್ನದೋಲೆ; ಈ ಡಿಸೈನ್‌ಗಳು ಸಖತ್ ಕ್ಯೂಟ್

Kannada

ಫ್ಲವರ್ ಡಿಸೈನ್ ಇಯರಿಂಗ್ಸ್

ಹೂವಿನ ಡಿಸೈನ್ ಇರುವ ಈ 22 ಕ್ಯಾರೆಟ್ ಗೋಲ್ಡ್ ಸ್ಟಡ್ಸ್ ಮಕ್ಕಳಿಗೆ ತುಂಬಾನೇ ಮುದ್ದಾಗಿ ಕಾಣಿಸುತ್ತೆ. ಹಗುರ ಹಾಗೂ ಆರಾಮದಾಯಕವಾಗಿರೋದ್ರಿಂದ, ಪ್ರತಿದಿನ ಧರಿಸಲು ಕೂಡ ಇದು ಸೇಫ್ ಆಯ್ಕೆಯಾಗಿದೆ.

Image credits: pinterest
Kannada

ಹಾರ್ಟ್ ಶೇಪ್ ಮಿನಿ ಇಯರಿಂಗ್ಸ್

ಹೃದಯದ ಆಕಾರದ ಈ ಪುಟ್ಟ ಓಲೆಗಳು ಹೆಣ್ಣುಮಕ್ಕಳಿಗೆ ಸಖತ್ ಕ್ಯೂಟ್ ಆಗಿ ಕಾಣಿಸುತ್ತವೆ. ಕೇವಲ 0.5 ಗ್ರಾಂ ಚಿನ್ನದಲ್ಲಿ ತಯಾರಾದ ಈ ಡಿಸೈನ್‌ಗಳು ಹಗುರವಾಗಿವೆ, ಸುರಕ್ಷಿತವಾಗಿವೆ. ವಿಶೇಷ ಸಂದರ್ಭಗಳಿಗೆ ಇದು ಉತ್ತಮ ಆಯ್ಕೆ.

Image credits: pinterest
Kannada

ಸ್ಟಾರ್ ಶೇಪ್ ಗೋಲ್ಡ್ ಸ್ಟಡ್

ಸ್ಟಾರ್ ಶೇಪ್ ಗೋಲ್ಡ್ ಸ್ಟಡ್ ಡಿಸೈನ್ ಮಕ್ಕಳ ಲುಕ್ ಮತ್ತಷ್ಟು ಹೆಚ್ಚಿಸುತ್ತದೆ. 22 ಕ್ಯಾರೆಟ್ ಚಿನ್ನದಲ್ಲಿ ತಯಾರಾದ ಈ ಓಲೆಗಳು ಹಗುರವಾಗಿವೆ. ಹೊಸದಾಗಿ ಕಿವಿ ಚುಚ್ಚಿದವರಿಗೂ ಇದು ಉತ್ತಮ ಆಯ್ಕೆಯಾಗಿದೆ.

Image credits: sencowebfiles.s3.ap-south
Kannada

ಸಿಂಪಲ್ ರೌಂಡ್ ಬಾಲ್ ಇಯರಿಂಗ್ಸ್

ಸಿಂಪಲ್ ರೌಂಡ್ ಬಾಲ್ ಇಯರಿಂಗ್ಸ್ ಸದಾ ಫ್ಯಾಷನ್‌ನಲ್ಲಿರುವ ಕ್ಲಾಸಿಕ್ ಡಿಸೈನ್. ಇದು ಸರಳವಾಗಿದ್ದು, ಕ್ಲಾಸಿಕ್ ಲುಕ್ ನೀಡುತ್ತದೆ. ಈ ಓಲೆಗಳು ಮಕ್ಕಳ ಕಿವಿಗೆ ಸುಲಭವಾಗಿ ಹೊಂದಿಕೊಳ್ಳುತ್ತವೆ.

Image credits: pinterest
Kannada

ಬಟರ್‌ಫ್ಲೈ ಡಿಸೈನ್ ಗೋಲ್ಡ್ ಇಯರಿಂಗ್ಸ್

ಚಿಟ್ಟೆ ವಿನ್ಯಾಸದ ಈ ಓಲೆಗಳು ಮಕ್ಕಳ ಲುಕ್‌ಗೆ ಒಂದು ಮ್ಯಾಜಿಕಲ್ ಟಚ್ ನೀಡುತ್ತವೆ. ಈ ಡಿಸೈನ್ ವಿಶೇಷವಾಗಿ ಹಬ್ಬ-ಹರಿದಿನ ಹಾಗೂ ವಿಶೇಷ ಸಂದರ್ಭಗಳಿಗೆ ಅತ್ಯುತ್ತಮ ಆಯ್ಕೆಯಾಗಿದೆ.

Image credits: inseasonjewelry.com
Kannada

ಮಿನಿಮಲ್ ಲೀಫ್ ಡಿಸೈನ್ ಇಯರಿಂಗ್ಸ್

ಮಿನಿಮಲ್ ಲೀಫ್ ಡಿಸೈನ್ ಇಯರಿಂಗ್ಸ್ ನೋಡಲು ತುಂಬಾ ಕ್ಯೂಟ್ ಮತ್ತು ಎಲಿಗೆಂಟ್ ಆಗಿದೆ. ಮಕ್ಕಳು ಧರಿಸಲು ಆರಾಮದಾಯಕವಾಗಿದ್ದು, ಬಹುತೇಕ ಎಲ್ಲಾ ರೀತಿಯ ಬಟ್ಟೆಗಳಿಗೂ ಸುಲಭವಾಗಿ ಮ್ಯಾಚ್ ಆಗುತ್ತದೆ.

Image credits: pinterest

ನಿಮ್ಮ ಸೌಂದರ್ಯಕ್ಕೆ ಯಾರ ಕಣ್ಣೂ ಬೀಳಲ್ಲ, ಈ ಇವಿಲ್ ಐ ಕಿವಿಯೋಲೆ ಧರಿಸಿ!

ಹಬ್ಬದ ಸೀಸನ್‌ಗೆ ಯೂನಿಕ್ ಲುಕ್ ಬೇಕಾ? ಈ ಪೋಲ್ಕಾ ಡಾಟ್ ಸೀರೆ ಡಿಸೈನ್ ಟ್ರೈ ಮಾಡಿ

1 ಗ್ರಾಂ ಚಿನ್ನದ ಒಡವೆ ಗಿಫ್ಟ್ ಕೊಡ್ಬೇಕಾ? ಇಲ್ಲಿದೆ ನೋಡಿ ಬೆಸ್ಟ್ ಡಿಸೈನ್ಸ್

ಚಿಕ್ಕ ಟ್ಯಾಟೂ, ಸಖತ್ ಸ್ಟೈಲ್! ಕಾಲೇಜು ಹುಡುಗಿಯರಿಗಾಗಿ 6 ಬೆಸ್ಟ್ ಡಿಸೈನ್ಸ್