ಚಿಕ್ಕ ಟ್ಯಾಟೂ, ಸಖತ್ ಸ್ಟೈಲ್! ಕಾಲೇಜು ಹುಡುಗಿಯರಿಗಾಗಿ 6 ಬೆಸ್ಟ್ ಡಿಸೈನ್ಸ್
ಸದ್ಯ ಕಾಲೇಜು ಹುಡುಗಿಯರಲ್ಲಿ ಚಿಕ್ಕ ಹಾಗೂ ಸಿಂಪಲ್ ಟ್ಯಾಟೂಗಳ ಕ್ರೇಜ್ ಹೆಚ್ಚಾಗಿದೆ. ನಿಮ್ಮ ಲುಕ್‌ಗೆ ಗ್ಲಾಮರಸ್ ಟಚ್ ನೀಡುವ ಕೆಲವು ಬೆಸ್ಟ್ ಡಿಸೈನ್‌ಗಳು ಇಲ್ಲಿವೆ.
fashion Mar 21 2026
Author: Sathish Kumar KH Image Credits:GEMINI AI
Kannada
ಬಟರ್‌ಫ್ಲೈ ಟ್ಯಾಟೂ
ಬಟರ್‌ಫ್ಲೈ ಅಥವಾ ಚಿಟ್ಟೆಯನ್ನು ಪರಿವರ್ತನೆ ಮತ್ತು ಸ್ವಾತಂತ್ರ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ನೀವು ಸ್ವತಂತ್ರ ಮನೋಭಾವದವರಾಗಿದ್ದರೆ, ಬಟರ್‌ಫ್ಲೈ ಟ್ಯಾಟೂ ಹಾಕಿಸಿಕೊಂಡು ಅದಕ್ಕೆ ಬಣ್ಣವನ್ನೂ ತುಂಬಿಸಬಹುದು.
Image credits: PINTEREST
Kannada
ಕುತ್ತಿಗೆಯಲ್ಲಿ ಹಾಕಿಸಿ ವೈನ್ ಟ್ಯಾಟೂ
ಕಾಲೇಜು ಹುಡುಗಿಯರು ಚಿಕ್ಕ ಟ್ಯಾಟೂ ಹಾಕಿಸಿಕೊಂಡು ಸಿಂಪಲ್ ಲುಕ್‌ಗೆ ಗ್ಲಾಮರಸ್ ಟಚ್ ನೀಡಬಹುದು. ನೀವು ಕುತ್ತಿಗೆ ಅಥವಾ ಕೈಯಲ್ಲಿ ವೈನ್ (Vine) ಟ್ಯಾಟೂ ಹಾಕಿಸಿಕೊಳ್ಳಬಹುದು.
Image credits: PINTEREST
Kannada
ಮಿನಿಮಲ್ ಸ್ಟಾರ್ ಅಥವಾ ಮೂನ್ ಟ್ಯಾಟೂ
ಚಿಕ್ಕ ನಕ್ಷತ್ರ, ಚಂದ್ರ ಅಥವಾ ನಕ್ಷತ್ರಪುಂಜದ ಟ್ಯಾಟೂಗಳಿಗೆ ಹುಡುಗಿಯರ ನಡುವೆ ಸಖತ್ ಕ್ರೇಜ್ ಇದೆ. ಈ ಟ್ಯಾಟೂಗಳು ಚಿಕ್ಕದಾಗಿರುವುದರಿಂದ ಸುಲಭವಾಗಿ ಹಾಕಿಸಿಕೊಳ್ಳಬಹುದು.
Image credits: PINTEREST
Kannada
ಡೈರೆಕ್ಷನ್ ಟ್ಯಾಟೂ
ದಿಕ್ಕುಗಳನ್ನು ತೋರಿಸುವ ಡೈರೆಕ್ಷನ್ ಟ್ಯಾಟೂ ಕೇವಲ ಹುಡುಗರಲ್ಲಿ ಮಾತ್ರವಲ್ಲ, ಹುಡುಗಿಯರಲ್ಲೂ ಸಖತ್ ಜನಪ್ರಿಯವಾಗಿದೆ. ಇಂತಹ ಟ್ಯಾಟೂವನ್ನು ಕೈಯ ಮಧ್ಯಭಾಗದಲ್ಲಿ ಹಾಕಿಸಿಕೊಳ್ಳಿ.
Image credits: PINTEREST
Kannada
ಹೆಸರು/ಇನಿಶಿಯಲ್ ಟ್ಯಾಟೂ
ನಿಮ್ಮ ಹೆಸರು ಅಥವಾ ನಿಮಗಿಷ್ಟವಾದವರ ಹೆಸರಿನ ಮೊದಲಕ್ಷರದ ಟ್ಯಾಟೂ ಕೂಡ ಕೈಗಳಲ್ಲಿ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಇದು ಗಾತ್ರದಲ್ಲಿ ಚಿಕ್ಕದಾಗಿದ್ದು, ಕ್ಲಾಸಿ ಲುಕ್ ನೀಡುತ್ತದೆ.
Image credits: PINTEREST
Kannada
ಓಂ ಜೊತೆ ನವಿಲುಗರಿ
ನಿಮ್ಮ ಟ್ಯಾಟೂವಿನಲ್ಲಿ ಭಕ್ತಿಯ ಸ್ಪರ್ಶ ಬೇಕಿದ್ದರೆ, ಕೈಗಳಲ್ಲಿ ಓಂ ಜೊತೆಗೆ ನವಿಲುಗರಿ ಮತ್ತು ಡಮರುಗವನ್ನು ಹಾಕಿಸಿಕೊಳ್ಳಬಹುದು. ಇವು ಕೂಡ ಕೂಲ್ ಲುಕ್ ನೀಡುತ್ತವೆ.