Kannada

Long Haram: ಸೀರೆಗೆ ಸಖತ್ ಲುಕ್ ನೀಡುವ ಲಾಂಗ್ ಹಾರ ಡಿಸೈನ್ಸ್!

Kannada

ಸಿಂಪಲ್ ಅಂಡ್ ಟ್ರೆಂಡಿ ಲುಕ್

ದುಂಡಗಿನ ಆಕಾರದ ಪೆಂಡೆಂಟ್‌ನಲ್ಲಿ ರೂಬಿ ಹಾಗೂ ಪಚ್ಚೆ ಹರಳುಗಳನ್ನು ಜೋಡಿಸಲಾಗಿದೆ. ಇದಕ್ಕೆ ತಕ್ಕಂತೆ ಮ್ಯಾಚಿಂಗ್ ಕಿವಿಯೋಲೆಗಳಿದ್ದು, ಇದು ನಿಮಗೆ ಸಿಂಪಲ್ ಹಾಗೂ ಟ್ರೆಂಡಿ ಲುಕ್ ನೀಡುತ್ತದೆ.

Image credits: South india Jewels
Kannada

ಮುತ್ತಿನ ಹಾರ

ಮುತ್ತಿನ ಎಳೆಗಳಿಂದ ಕಂಗೊಳಿಸುವ ಈ ಟ್ರೆಡಿಷನಲ್ ಹಾರಕ್ಕೆ ಚಂದ್ರವಂಕ ಡಿಸೈನ್‌ನ ಪೆಂಡೆಂಟ್ ಹಾಗೂ ಮ್ಯಾಚಿಂಗ್ ಕಿವಿಯೋಲೆಗಳಿವೆ. ನೋಡಿದ ತಕ್ಷಣವೇ ಇಷ್ಟವಾಗುವಂತಹ ಅದ್ಭುತ ವಿನ್ಯಾಸ ಇದರಲ್ಲಿದೆ.

Image credits: South india Jewels
Kannada

ಡಿಸೈನರ್ ಹಾರ

ಇದೊಂದು ಸುಂದರವಾದ ಡಿಸೈನರ್ ಹಾರ. ಮೂರು ಎಳೆಯ ಮುತ್ತಿನ ಸರಕ್ಕೆ ಡಿಸೈನರ್ ಲಾಕೆಟ್ ನೀಡಲಾಗಿದೆ. ಅದರಲ್ಲಿರುವ ಕೆಂಪು ಮಣಿಗಳು ಹಾರದ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ.

Image credits: South india Jewels
Kannada

ಕ್ಲಾಸಿಕಲ್ ಹಾರ

ಈ ಹಾರದ ಲಾಕೆಟ್‌ನಲ್ಲಿ ಹೂವಿನ ಡಿಸೈನ್ ಇದ್ದು, ಮಧ್ಯದಲ್ಲಿರುವ ಹಸಿರು ಹರಳು ಕ್ಲಾಸಿಕ್ ಲುಕ್ ನೀಡಿದೆ. ಟ್ರೆಡಿಷನಲ್ ಉಡುಗೆಗಳ ಮೇಲೆ ಈ ಹಾರ ಧರಿಸಿದರೆ ನಿಮ್ಮ ಸೌಂದರ್ಯ ಇಮ್ಮಡಿಯಾಗುವುದು ಖಂಡಿತ.

Image credits: South india Jewels
Kannada

ರಾಯಲ್ ಲುಕ್ ಹಾರ

ಎರಡು ಎಳೆಯ ಮುತ್ತಿನ ಹಾರದ ಜೊತೆಗೆ ಮಧ್ಯದಲ್ಲಿ ಆಕರ್ಷಕವಾದ ಪೆಂಡೆಂಟ್ ನೀಡಲಾಗಿದೆ. ಸೀರೆ ಮೇಲೆ ಈ ಹಾರವನ್ನು ಧರಿಸಿದರೆ ಪಕ್ಕಾ ರಾಯಲ್ ಲುಕ್ ಸಿಗುತ್ತದೆ.

Image credits: South india Jewels
Kannada

ರೌಂಡ್ ಪೆಂಡೆಂಟ್ ಹಾರ

ರೌಂಡ್ ಪೆಂಡೆಂಟ್ ಹಾಗೂ ಮೂರು ಎಳೆಯ ಮುತ್ತಿನ ಡಿಸೈನ್ ಹೊಂದಿರುವ ಈ ಹಾರ ಸಖತ್ ಕ್ಲಾಸಿ ಲುಕ್ ನೀಡುತ್ತದೆ. ರೇಷ್ಮೆ ಸೀರೆಗಳ ಮೇಲೆ ಇದು ತುಂಬಾ ಸುಂದರವಾಗಿ ಕಾಣುತ್ತದೆ.

Image credits: South india Jewels

ಯಾವುದೇ ಡ್ರೆಸ್ ಹಾಕಿದ್ರೂ ಸೂಪರ್ ಲುಕ್ ಕೊಡೋ ಬ್ರೇಸ್‌ಲೆಟ್ ಡಿಸೈನ್ಸ್!

Gold Chain: ಕೇವಲ ಅರ್ಧ ತೊಲದಲ್ಲಿ ಸಿಗುವ ಬ್ಯೂಟಿಫುಲ್ ಗೋಲ್ಡ್ ಚೈನ್ ಡಿಸೈನ್ಸ್ ಇಲ್ಲಿವೆ ನೋಡಿ

ಸೀರೆ, ಲೆಹೆಂಗಾಗೆ ಗ್ರ್ಯಾಂಡ್ ಲುಕ್ ನೀಡುವ ಚೋಕರ್ ಡಿಸೈನ್ಸ್! ಒಮ್ಮೆ ಟ್ರೈ ಮಾಡಿ

ರೇಷ್ಮೆ ಸೀರೆಯ ಅಂದ ಹೆಚ್ಚಿಸುವ ಸೂಪರ್ ಬ್ಲೌಸ್ ಡಿಸೈನ್ಸ್! ಒಮ್ಮೆ ಟ್ರೈ ಮಾಡಿ