Kannada

ಮೆಹೆಂದಿ ಹಚ್ಚಿದ ಕೈಗಳ ಅಂದ ಹೆಚ್ಚಿಸುತ್ತೆ ಈ 6 ಬ್ರೈಡಲ್ ನೇಲ್ ಆರ್ಟ್ ಲುಕ್!

ಮದುವೆಯ ದಿನ ಪ್ರತಿಯೊಬ್ಬರಿಗಿಂತ ಭಿನ್ನವಾಗಿ, ಸುಂದರವಾಗಿ ಕಾಣಲು ವಧು ಬಯಸುತ್ತಾಳೆ. ಬಟ್ಟೆ, ಮೇಕಪ್ ಜೊತೆಗೆ ನೇಲ್ ಆರ್ಟ್ ಕೂಡಾ ಬ್ರೈಡಲ್ ಲುಕ್​ನ ಅಂದವನ್ನು ಹೆಚ್ಚಿಸುತ್ತದೆ.
Kannada

ಚೈನ್ ನೇಲ್ ಆರ್ಟ್ ಲುಕ್

ಮದುಮಗಳು ಮೆಹೆಂದಿ ಹಚ್ಚಿದ ಕೈಗಳಿಗೆ ತನಗಿಷ್ಟದ ನೇಲ್‌ಪಾಲಿಶ್ ಹಚ್ಚಿದ ನಂತರ, ಚೈನ್ ಮತ್ತು ಸ್ಟೋನ್‌ಗಳ ಸಹಾಯದಿಂದ ಸುಂದರವಾದ ನೇಲ್ ಆರ್ಟ್ ಮಾಡಿಸಿಕೊಳ್ಳಬಹುದು.

Image credits: INSTAGRAM/weddinganswers
Kannada

ಫ್ಲೋರಲ್ ನೇಲ್ ಆರ್ಟ್

ಹೂವುಗಳಿಂದ ಅಲಂಕರಿಸಿದ ನೇಲ್ ಆರ್ಟ್, ಬ್ರೈಡಲ್ ಲುಕ್‌ಗೆ ಸಾಫ್ಟ್ ಮತ್ತು ರೊಮ್ಯಾಂಟಿಕ್ ಟಚ್ ನೀಡುತ್ತದೆ. ಪೇಸ್ಟಲ್ ಬಣ್ಣಗಳು ಮತ್ತು 3D ಫ್ಲೋರಲ್ ಡಿಸೈನ್ ಕೈಗಳ ಅಂದವನ್ನು ಹೆಚ್ಚಿಸುತ್ತವೆ.

Image credits: INSTAGRAM/weddinganswers
Kannada

ಸ್ಟೋನ್ ಮತ್ತು ರೈನ್‌ಸ್ಟೋನ್ ನೇಲ್ ಆರ್ಟ್

ಈ ರೀತಿಯ ನೇಲ್ ಆರ್ಟ್‌ನಲ್ಲಿ ಸಣ್ಣ ಸಣ್ಣ ಸ್ಟೋನ್ ಅಥವಾ ರೈನ್‌ಸ್ಟೋನ್‌ಗಳನ್ನು ಹಚ್ಚಲಾಗುತ್ತದೆ. ಇದು ಕೈಗಳಿಗೆ ಆಭರಣದಂತಹ ಲುಕ್ ನೀಡುತ್ತದೆ. ಮದುವೆ ಅಥವಾ ರಿಸೆಪ್ಷನ್‌ಗೆ ಇದು ತುಂಬಾನೇ ಗ್ಲಾಮರಸ್ ಆಯ್ಕೆಯಾಗಿದೆ.

Image credits: INSTAGRAM/weddinganswers
Kannada

ಹೆಸರು ಅಥವಾ ದಿನಾಂಕದ ನೇಲ್ ಆರ್ಟ್

ನಿಮ್ಮ ಉಗುರುಗಳ ಮೇಲೆ ನಿರ್ದಿಷ್ಟ ಹೆಸರು, ದಿನಾಂಕ ಅಥವಾ ನಿಮಗೆ ಇಷ್ಟವಾದ ಆಕೃತಿಗಳನ್ನು ಸಹ ಚಿತ್ರಿಸಬಹುದು. ಇದು ನೋಡಲು ತುಂಬಾನೇ ಸಿಂಪಲ್ ಮತ್ತು ಸುಂದರವಾಗಿ ಕಾಣುತ್ತದೆ.

Image credits: INSTAGRAM/weddinganswers
Kannada

ನ್ಯೂಡ್ ಬೇಸ್ ಸ್ಟೋನ್, ರೈನ್‌ಸ್ಟೋನ್ ನೇಲ್ ಆರ್ಟ್

ಆಭರಣದಂತಹ ಡೀಟೇಲಿಂಗ್ ಇರುವ ಈ ನೇಲ್ ಆರ್ಟ್, ನಿಮ್ಮ ಸಿಂಪಲ್ ಉಗುರುಗಳ ಲುಕ್ ಅನ್ನು ಇನ್ನಷ್ಟು ಹೆಚ್ಚಿಸುತ್ತದೆ. ಬ್ಯೂಟಿ ಪಾರ್ಲರ್‌ನಲ್ಲಿ ಈ ರೀತಿಯ ನೇಲ್ ಆರ್ಟ್ ಮಾಡಿಸಿಕೊಳ್ಳಬಹುದು.

Image credits: INSTAGRAM/weddinganswers
Kannada

ಗೋಲ್ಡ್ ಗ್ಲಿಟರ್ ನೇಲ್ಸ್

ಪೂರ್ತಿ ಉಗುರಿನ ಮೇಲೆ ಶೈನಿ ಗೋಲ್ಡ್ ಪಾಲಿಶ್ ಹಚ್ಚಿದರೆ, ಮದುಮಗಳ ಕೈಗಳಿಗೆ ಸಿಂಪಲ್ ಆದ್ರೂ ಗ್ರಾಂಡ್ ಲುಕ್ ಸಿಗುತ್ತದೆ. ಈ ರೀತಿಯ ನೇಲ್ ಪಾಲಿಶ್‌ಗಾಗಿ ನೀವು ಹೆಚ್ಚು ಹುಡುಕುವ ಅಗತ್ಯವಿಲ್ಲ.

Image credits: INSTAGRAM/weddinganswers

ಬೀಚ್ ಲುಕ್​ಗೆ ಸೂಪರ್ ಸ್ಟೈಲಿಶ್ ಟಚ್: ವೈರಲ್ ಆಗ್ತಿರೋ ಶಂಖದ ಆಭರಣಗಳ ಡಿಸೈನ್ ನೋಡಿ

ಕಾಶ್ಮೀರಿ, ಜೆಲ್ಲಿ ಬಳಿಕ ಈಗ ಮ್ಯಾಗಿ ಬಳೆಗಳದ್ದೇ ಹವಾ: 7 ಫ್ಯಾನ್ಸಿ ಡಿಸೈನ್ಸ್ ನೋಡಿ

ನೀತಾ ಅಂಬಾನಿಯ ಈ 5 ಸೀರೆಗಳು ನಿಮ್ಮಲ್ಲಿದ್ದರೆ ಪ್ರತಿ ಸಮಾರಂಭದಲ್ಲೂ ನೀವೇ ಸ್ಟಾರ್!

ಹಗುರ, ಕ್ಯೂಟ್, ಸ್ಟೈಲಿಶ್: ಪ್ರತಿಯೊಬ್ಬ ಹುಡುಗಿಯ ಮೊದಲ ಆಯ್ಕೆ ಈ ಕಿವಿಯೋಲೆಗಳು