ಇತ್ತೀಚಿನ ದಿನಗಳಲ್ಲಿ ಒಟಿಟಿ ಹಾಗೂ ಬೆಳ್ಳಿಪರದೆಯ ಮೇಲೆ ನೈಜ ಘಟನೆಗಳನ್ನು ಆಧರಿಸಿದ ಸಿನಿಮಾಗಳು, ವೆಬ್ ಸೀರೀಸ್‌ಗಳು ಹೆಚ್ಚು ಸದ್ದು ಮಾಡುತ್ತಿವೆ.
Image credits: Instagram
Kannada
ಮಿಸ್ಟರ್ ಬಚ್ಚನ್
ಸೌತ್ ಸೂಪರ್‌ಸ್ಟಾರ್ ರವಿತೇಜ ನಟನೆಯ 'ಮಿಸ್ಟರ್ ಬಚ್ಚನ್' ಸಿನಿಮಾ ಆದಾಯ ತೆರಿಗೆ ಇಲಾಖೆ ದಾಳಿಯ ಕಥೆಯನ್ನು ಹೊಂದಿದೆ. ಉದ್ಯಮಿ ಸರ್ದಾರ್ ಇಂದರ್ ಸಿಂಗ್ ಅವರ ಜೀವನದ ನೈಜ ಘಟನೆಗಳೇ ಈ ಸಿನಿಮಾದ ಕಥಾವಸ್ತು.
Image credits: Instagram
Kannada
ದ ಮನಿ ಗೇಮ್
ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ 'ದ ಮನಿ ಗೇಮ್' ವೀಕ್ಷಣೆಗೆ ಲಭ್ಯವಿದೆ. ಈ ವೆಬ್ ಸೀರೀಸ್‌ನಲ್ಲಿ ಅಥ್ಲೀಟ್‌ಗಳ ಜೀವನದ ರೋಚಕ ಪಯಣವನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ.
Image credits: Instagram
Kannada
ಸೆಕ್ಟರ್ 36
ವಿಕ್ರಾಂತ್ ಮೆಸ್ಸಿ ನಟನೆಯ 'ಸೆಕ್ಟರ್ 36' ಒಂದು ಇಂಡಿಯನ್ ಕ್ರೈಮ್ ಥ್ರಿಲ್ಲರ್ ಸಿನಿಮಾವಾಗಿದೆ. ನೋಯ್ಡಾದ ಸೆಕ್ಟರ್ 36ರಲ್ಲಿ ನಡೆದ ಭೀಕರ ನೈಜ ಘಟನೆಯನ್ನೇ ಆಧರಿಸಿ ಈ ಸಿನಿಮಾ ಮಾಡಲಾಗಿದೆ.
ಅಪಾರಶಕ್ತಿ ಖುರಾನಾ ಮತ್ತು ರಾಹುಲ್ ಬೋಸ್ ನಟನೆಯ ಸ್ಪೈ ಥ್ರಿಲ್ಲರ್ 'ಬರ್ಲಿನ್' ಜೀ5 (Zee5) ನಲ್ಲಿ ರಿಲೀಸ್ ಆಗಿದೆ. ಇದು ಸಂಪೂರ್ಣ ನೈಜ ಘಟನೆಯಲ್ಲದಿದ್ದರೂ, ನಿಮ್ಮನ್ನು 90ರ ದಶಕದ ಕಾಲಘಟ್ಟಕ್ಕೆ ಕರೆದೊಯ್ಯುತ್ತದೆ.