ಲೇಡಿ ಸೂಪರ್‌ಸ್ಟಾರ್ ನಯನತಾರಾ ತಮ್ಮ ವೀಕೆಂಡ್ ಅನ್ನು ಸಖತ್ ರಿಚ್ ಆಗಿ ಕಳೆದಿದ್ದಾರೆ. ಮಾಲ್ಡೀವ್ಸ್‌ಗೆ ಹಾರಿದ್ದ ನಟಿ, ಅಲ್ಲಿನ ಕೆಲವೊಂದು ಹಾಟ್ ಮತ್ತು ಕೂಲ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಹಳದಿ ಬಣ್ಣದ ಸಮ್ಮರ್ ಗೌನ್ ಧರಿಸಿ, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಗೂ ತಲೆಗೆ ಹ್ಯಾಟ್ ಹಾಕಿ ಸಮುದ್ರ ತೀರದಲ್ಲಿ ‘ವಿಟಮಿನ್ ಡಿ’ ಪಡೆಯುತ್ತಾ ವಾಕಿಂಗ್ ಮಾಡುತ್ತಿರುವ ನಯನತಾರಾ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
Image credits: instagram
Kannada
ಎಲ್ಲಿದೆ ಈ ರೆಸಾರ್ಟ್?
ಎಲ್ಲರ ಕಣ್ಣು ಬಿದ್ದಿರುವುದು ಅವರು ತಂಗಿರುವ ಆ ಅಲ್ಟ್ರಾ-ಲಕ್ಸುರಿ ರೆಸಾರ್ಟ್ ಮತ್ತು ಅದರ ಖರ್ಚಿನ ಮೇಲೆ! ನಯನತಾರಾ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ರೆಸಾರ್ಟ್‌ನ ಲೊಕೇಶನ್ ಟ್ಯಾಗ್ ಮಾಡಿದ್ದಾರೆ.
Image credits: instagram
Kannada
ರಾತ್ರಿಗೆ ಬರೋಬ್ಬರಿ 8 ಲಕ್ಷ ರೂಪಾಯಿ
ಅವರು ಮಾಲ್ಡೀವ್ಸ್‌ನ ನಾರ್ತ್ ಮೇಲ್ ಅಟಾಲ್‌ನ ಫಾರಿ ಐಲ್ಯಾಂಡ್‌ನಲ್ಲಿರುವ 'ಪಟಿನಾ ಮಾಲ್ಡೀವ್ಸ್' (Patina Maldives) ಎಂಬ ಅತ್ಯಂತ ಐಷಾರಾಮಿ ರೆಸಾರ್ಟ್‌ನಲ್ಲಿ ತಂಗಿದ್ದಾರೆ.
Image credits: instagram
Kannada
ಹೈ-ಫೈ ರೆಸಾರ್ಟ್
ನಯನತಾರಾ ತಂಗಿರುವಂತಹ ಹೈ-ಫೈ ರೆಸಾರ್ಟ್‌ನ ಬೆಲೆ ಕೇಳಿದರೆ ಸಾಮಾನ್ಯ ಜನರು ಮೂಗಿನ ಮೇಲೆ ಬೆರಳಿಡುವುದು ಖಂಡಿತ. ಇಬ್ಬರು ವಯಸ್ಕರು ಉಳಿದುಕೊಳ್ಳಲು ಸುಮಾರು ₹3,92,376 ರೂ.!
Image credits: instagram
Kannada
8 ಲಕ್ಷ ರೂಪಾಯಿ ಬೇಕೇಬೇಕು
ವೀಕೆಂಡ್‌ನಲ್ಲಿ 2 ರಾತ್ರಿ ಇಲ್ಲಿ ಕಳೆದರೆ ಅಂದಾಜು 8 ಲಕ್ಷ ರೂಪಾಯಿ ತೆರಬೇಕು!