Entertainment

ಎವಗರ್ ಗ್ರೀನ್ ರೇಖಾ

ಬಾಲಿವುಡ್‌ನ ಲೆಜೆಂಡರಿ ನಟಿ ರೇಖಾ ಇತ್ತೀಚೆಗಷ್ಟೇ ವೋಗ್ ಅರೇಬಿಯಾ ಇಂಟರ್ ನ್ಯಾಷನಲ್ ಮ್ಯಾಗಝಿನ್ ಗೆ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ನಟಿಯ ಸೌಂದರ್ಯಕ್ಕೆ ಅಭಿಮಾನಿಗಳು ತಲೆ ತೂಗಿದ್ದಾರೆ. 
 

Image credits: Instagram

68 ನೇ ವಯಸ್ಸಿನಲ್ಲಿ ಫೋಟೋ ಶೂಟ್

68ನೇ ವಯಸ್ಸಿನಲ್ಲಿ ನಟಿ ರೇಖಾ ರಾಯಲ್ ಮತ್ತು ರೀಗಲ್ ಲುಕ್ ನಲ್ಲಿ ನೋಡುಗರನ್ನು ತನ್ನತ್ತ ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. 
 

Image credits: Instagram

ಏಜ್ ಈಸ್ ಜಸ್ಟ್ ಎ ನಂಬರ್

ಪ್ರತಿಯೊಂದು ಫೋಟೋದಲ್ಲೂ ರೇಖಾರ ಬ್ಯೂಟಿ ಮತ್ತು ಅಧಾ ನೋಡಿದ್ರೆ ಏಜ್ ಈಸ್ ಜಸ್ಟ್ ಎ ನಂಬರ್ ಎಂದು ಹೇಳೋದು ಗ್ಯಾರಂಟಿ. 
 

Image credits: Instagram

ಮತ್ತೆ ಹಳೆ ರೇಖಾರನ್ನು ನೆನಪಿಸಿದ ಫೋಟೋ

ಮನಿಷ್ ಮಲ್ಹೋತ್ರಾ ರ ಔಟ್ ಫಿಟ್‌ನಲ್ಲಿ ರೇಖಾ ಹೇಗೆ ಕಾಣಿಸುತ್ತಿದ್ದಾರೆ ಅಂದ್ರೆ, ಉಮ್ರವೋ ಜಾನ್ ಚಿತ್ರದ ರೇಖಾರನ್ನು ಮತ್ತೆ ನೋಡಿದಂತೆ ಕಾಣಿಸ್ತಾ ಇದೆ. 
 

Image credits: Instagram

ಎವರ್ ಗ್ರೀನ್ ಬ್ಯೂಟಿ

ಈ ಎವರ್ ಗ್ರೀನ್ ನಟಿಯ ವೋಗ್ ಫೋಟೋ ಶೂಟ್ ನ ಪ್ರತಿಯೊಂದು ಫೋಟೋಗಳು ಒಂದಕ್ಕಿಂತ ಒಂದು ಅದ್ಭುತವಾಗಿ ಮೂಡಿ ಬಂದಿದೆ. 
 

Image credits: Instagram

ಫೋಟೋಸ್ ವೈರಲ್

ರೇಖಾರ ವೋಗ್ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ರೇಖಾ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ. 
 

Image credits: Instagram

ವೋಗ್ ಅರೇಬಿಯಾ

ರೇಖಾ ಫೋಟೋಗಳನ್ನು ವೋಗ್ ಅರೇಬಿಯಾ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದೆ. ಅವರ ತೀಕ್ಷ್ಣ ನೋಟ, ಗ್ಲಾಮರ್, ಪರಂಪರೆ ಮತ್ತು ಗ್ರೇಸ್ ಯಾವುದೇ ಫ್ಯಾಷನ್ ಐಕಾನ್‌ಗೆ ಕಮ್ಮಿ ಇಲ್ಲ ಎನ್ನುವಂತೆ ಮೂಡಿ ಬಂದಿದೆ. 
 

Image credits: Instagram

ಗೋಲ್ಡನ್ ಗಾಡೆಸ್

ಒಂದು ಫೋಟೊದಲ್ಲಿ ರೇಖಾ ಗೋಲ್ಡನ್ ಸೀರೆಯನ್ನು ಧರಿಸಿದ್ದರು. ವಜ್ರದ ಹಾರಗಳು, ಬಳೆಗಳು, ಕಿವಿಯೋಲೆಗಳು ಮತ್ತು ಸ್ಟೇಟ್ಮೆಂಟ್ ಉಂಗುರಗಳನ್ನು ಧರಿಸಿದ್ದು ಗೋಲ್ಡನ್ ಗಾಡೆಸ್ ರೀತಿ ಕಾಣುತ್ತಾರೆ. 
 

Image credits: Instagram

ಮಾಡರ್ನ್ ಕ್ಲಿಯೋಪಾತ್ರ

ಮತ್ತೊಂದು ಫೋಟೋದಲ್ಲಿ ನಟಿ ರೇಖಾ ಗೋಲ್ಡನ್ ಡ್ರೆಸ್ ಜೊತೆಗೆ, ಮ್ಯಾಚಿಂಗ್ ಇಯರಿಂಗ್ಸ್ ಮತ್ತು ಹೆಡ್ ವೇರ್ ಧರಿಸಿದ್ದು ಮಾಡರ್ನ್ ಕ್ಲಿಯೋಪಾತ್ರನ ಹಾಗೆ ಕಾಣಿಸುತ್ತಿದ್ದಾರೆ. 
 

Image credits: instagram

ಸಿಹಿ ಕಹಿ ಚಂದ್ರು ದೊಡ್ಡಮಗಳು ಎಷ್ಟು ಸಣ್ಣಗಾಗಿದ್ದಾಳೆ ನೋಡಿ; ಹಿತಾ ಫುಲ್ ಫಿಟ್!

ಅಮೆರಿಕಾದ ಟೈಮ್ಸ್ ಸ್ಕ್ವೇರ್‌ನಲ್ಲಿ ಸಿತಾರಾ: ಮಗಳ ನೋಡಿ ಮಹೇಶ್ ಬಾಬು ಭಾವುಕ

ಸ್ವಿಮ್ ಸೂಟ್‌ನಲ್ಲಿ ಪೋಸ್ ನೀಡಿದ ರಾಜ್ ಬಿ ಶೆಟ್ಟಿಯ 'ಟೋಬಿ' ನಟಿ ಚೈತ್ರಾ

ಕ್ಯಾಪ್ಟನ್ ಮಾರ್ವೆಲ್ ಅವತಾರದಲ್ಲಿ ರಶ್ಮಿಕಾ ಸೇರಿ ಭಾರತೀಯ ತಾರೆಯರು!