ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಅವರು ಇತ್ತೀಚೆಗೆ ಆರ್‌ಜೆ ಮಯೂರ್ ಅವರ ‘ಗೋಲ್ಡನ್ ಕ್ಲಾಸ್ ವಿಥ್ ಮಯೂರ’ ಯೂಟ್ಯೂಬ್ ಸಂದರ್ಶನದಲ್ಲಿ ಭಾಗವಹಿಸಿದ್ದರು.
entertainment Apr 04 2026
Author: Ashwini HR Image Credits:Instagram
Kannada
"ಡಗಾರ್" ಪದದ ಚರ್ಚೆ
ಈ ಸಂದರ್ಭದಲ್ಲಿ ಸಮಾಜದಲ್ಲಿ ಬಳಕೆಯಲ್ಲಿರುವ "ಡಗಾರ್" ಎಂಬ ಅವಹೇಳನಕಾರಿ ಪದದ ಬಗ್ಗೆ ಗಂಭೀರ ಚರ್ಚೆ ನಡೆಯಿತು.
Image credits: Instagram
Kannada
ಅಸಲಿ ಅರ್ಥವೇನು?
ಈ ಪದದ ಅಸಲಿ ಅರ್ಥ 'ನಡತೆಗೆಟ್ಟವಳು' ಎಂದಾಗಿದ್ದು, ಇದರ ಬಗ್ಗೆ ಮಾತನಾಡಲು ಸ್ವತಃ ಮಯೂರ್ ಅವರೇ ಬಹಳ ಮುಜುಗರ ಪಟ್ಟುಕೊಂಡರು.
Image credits: Our own
Kannada
ಭಾವುಕರಾಗಿ ಪ್ರಶ್ನಿಸಿದ ಅನುಶ್ರೀ
ಆಗ ಅನುಶ್ರೀ, "ನೋಡಿ , ಆ ಪದವನ್ನು ಉಚ್ಚರಿಸಲು ನಿಮಗೇ ಅಷ್ಟು ಕಷ್ಟವಾಗುತ್ತಿದೆ ಎಂದರೆ, ಯಾರಾದರೂ ನಮ್ಮನ್ನ ಆ ತರ ಕರೆದಾಗ ನಮಗೆ ಇನ್ನ ಹೇಗೆನಿಸುತ್ತೆ ಅಂತ ನೀವೇ ಯೋಚಿಸಿ ಎಂದು ಭಾವುಕರಾಗಿ ಪ್ರಶ್ನಿಸಿದರು.
Image credits: Instgaram
Kannada
ಸೋಶಿಯಲ್ ಮೀಡಿಯಾದಲ್ಲಿ ವೈರಲ್
ಸದ್ಯ ಸಂದರ್ಶನದ ತುಣುಕೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಅವರ ಮುಖದಲ್ಲಿನ ಆಳವಾದ ಬೇಸರ ಎದ್ದು ಕಾಣುತ್ತಿತ್ತು.