Entertainment

ಬಿಡುಗಡೆಯಾದ ದಿನವೇ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದ ಸಿನಿಮಾಗಳು

ಹೀಗೆ ದಾಖಲೆ ಮುರಿದು ಮೊದಲ ದಿನವೇ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದು ಅತಿ ಹೆಚ್ಚು ಕಲೆಕ್ಷನ್ ಮಾಡಿದ ಟಾಪ್ 10 ಸಿನಿಮಾಗಳ ಡಿಟೇಲ್ ಇಲ್ಲಿದೆ ನೋಡಿ.

10. ಚಿತ್ರ ಟಿಲ್ಲು ಸ್ಕ್ವೇರ್

ರಾಮ್ ನಿರ್ದೇಶನದ 'ಟಿಲ್ಲು ಸ್ಕ್ವೇರ್' ವಿಶ್ವದಾದ್ಯಂತ ಮೊದಲ ದಿನ ರೂ.23.6 ಕೋಟಿ ರೂ. ಗಳಿಸಿತು. ಈ ಚಿತ್ರದಲ್ಲಿ ಸಿದ್ದು ಜೊನ್ನಲಗಡ್ಡ, ಅನುಪಮಾ, ಪ್ರಿಯಾಂಕಾ, ಮುರಳಿ ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

9. ತಂಗಲಾನ್

ವಿಕ್ರಮ್, ಮಾಳವಿಕಾ ಮೋಹನನ್, ಪಾರ್ವತಿ ತಿರುವೋತು ನಟಿಸಿರುವ 'ತಂಗಲಾನ್' ಚಿತ್ರ ವಿಶ್ವದಾದ್ಯಂತ ಮೊದಲ ದಿನ ರೂ.24 ಕೋಟಿ ಕಲೆಕ್ಷನ್ ಮಾಡಿದೆ. ಈ ಚಿತ್ರಕ್ಕೆ ಪ. ರಂಜಿತ್ ನಿರ್ದೇಶನ ಮಾಡಿದ್ದಾರೆ.

8. ಬಡೇ ಮಿಯಾ ಚೋಟೇ ಮಿಯಾ

ಅಕ್ಷಯ್ ಕುಮಾರ್-ಟೈಗರ್ ಶ್ರಾಫ್ ನಟನೆಯ 'ಬಡೇ ಮಿಯಾ ಚೋಟೇ ಮಿಯಾ' ಚಿತ್ರ ವಿಶ್ವದಾದ್ಯಂತ ಮೊದಲ ದಿನ ರೂ.30.8 ಕೋಟಿ ಕಲೆಕ್ಷನ್ ಮಾಡಿದೆ. ಅಲಿ ಅಬ್ಬಾಸ್ ಜಾಫರ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.

7. ಫೈಟರ್

ಹೃತಿಕ್ ರೋಷನ್- ದೀಪಿಕಾ ಪಡುಕೋಣೆ ನಟನೆಯ 'ಫೈಟರ್' ಚಿತ್ರ ವಿಶ್ವದಾದ್ಯಂತ ಮೊದಲ ದಿನ ರೂ.37.8 ಕೋಟಿ ಕಲೆಕ್ಷನ್ ಮಾಡಿದೆ. ಸಿದ್ಧಾರ್ಥ್ ಆನಂದ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ.

6. ಇಂಡಿಯನ್ 2

ಸ್ಟಾರ್ ನಿರ್ದೇಶಕ ಶಂಕರ್ ಅವರ ಚಿತ್ರ ಇಂಡಿಯನ್ 2 ಈ ವರ್ಷ ವಿಶ್ವದಾದ್ಯಂತ ಮೊದಲ ದಿನ ರೂ.56.2 ಕೋಟಿ ಕಲೆಕ್ಷನ್ ಮಾಡಿದೆ. ಕಮಲ್ ಹಾಸನ್, ಸಿದ್ಧಾರ್ಥ್ ಈ ಚಿತ್ರದಲ್ಲಿ ನಟಿಸಿದ್ದಾರೆ.  
 

5. ಗುಂಟೂರು ಕಾರಂ

ಮಹೇಶ್ ಬಾಬು, ಶ್ರೀಲೀಲಾ ನಟನೆಯ ಗುಂಟೂರು ಕಾರಂ ಚಿತ್ರ ಬಿಡುಗಡೆಯಾದ ಮೊದಲ ದಿನ ರೂ.73.2 ಕೋಟಿ ಕಲೆಕ್ಷನ್ ಮಾಡಿದೆ. ತ್ರಿವಿಕ್ರಮ್ ಶ್ರೀನಿವಾಸ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.

4. ಸ್ತ್ರೀ 2

ರಾಜ್‌ಕುಮಾರ್ - ರಾವ್-ಶ್ರದ್ಧಾ ಕಪೂರ್ ನಟನೆಯ ಸ್ತ್ರೀ 2 ಸಿನಿಮಾ ವಿಶ್ವದಾದ್ಯಂತ ಮೊದಲ ದಿನ ರೂ.80.2 ಕೋಟಿ ಕಲೆಕ್ಷನ್ ಮಾಡಿದೆ. ಅಮರ್ ಕೌಶಿಕ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.

3. ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್

ತಮಿಳು ಸ್ಟಾರ್ ನಟ ವಿಜಯ್ ಅವರ ಚಿತ್ರ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ವಿಶ್ವದಾದ್ಯಂತ ಮೊದಲ ದಿನ ರೂ.101.2 ಕೋಟಿ ಕಲೆಕ್ಷನ್ ಮಾಡಿದೆ. ವೆಂಕಟ್ ಪ್ರಭುಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.

2. ದೇವರ

ಜೂನಿಯರ್ ಎನ್‌ಟಿಆರ್-ಜಾನ್ವಿ ಕಪೂರ್ ನಟನೆಯ ಮೊದಲ ಚಿತ್ರ ದೇವರ ವಿಶ್ವದಾದ್ಯಂತ ಮೊದಲ ದಿನ ರೂ.172 ಕೋಟಿ ಕಲೆಕ್ಷನ್ ಮಾಡಿದೆ. ಕೊರಟಾಲ ಶಿವ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ.

1. ಕಲ್ಕಿ 2898 AD

ಪ್ರಭಾಸ್ - ದೀಪಿಕಾ ಪಡುಕೋಣೆ ನಟನೆಯ ಕಲ್ಕಿ 2898 AD 2024 ರಲ್ಲಿ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಗಳಿಸಿದ ಚಿತ್ರವಾಗಿ ಹೊರಹೊಮ್ಮಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾ ರೂ.182.6 ಕೋಟಿ ಕಲೆಕ್ಷನ್ ಮಾಡಿದೆ.

ಹೊಸ ಲುಕ್‌ನಲ್ಲಿ ತರುಣ್- ಸೋನಲ್; ಮತ್ತೆ ಎಲ್ಲಿಗೆ ಎಂದು ಕಾಲೆಳೆದ ನೆಟ್ಟಿಗರು!

ಬಿಗ್‌ಬಾಸ್‌ ಕನ್ನಡ ಸೀಸನ್ 1 ರಿಂದ 10ರವರೆಗೆ 50 ಲಕ್ಷ ಗೆದ್ದವರಿವರು!

ಕಿಪಿ ಕೀರ್ತಿ ಬಂದ್ರೆನೇ ಬಿಗ್ ಬಾಸ್ ನೋಡೋದು; ವೈಲ್ಡ್‌ ಕಾರ್ಡ್‌ ಎಂಟ್ರಿ ಫಿಕ್ಸ್?

ಇವ್ರೆಲ್ಲಾ ಈ ಬಾರಿ ಕನ್ನಡ ಬಿಗ್‌ಬಾಸ್‌ ನಲ್ಲಿ ಪಕ್ಕಾ ಅಂತೆ!