₹1 ಕೋಟಿ ಖರ್ಚು ಮಾಡಲು ಸಿದ್ಧರಾಗಿರಿ. ಖಾಸಗಿ ಕಾಲೇಜುಗಳ ಶುಲ್ಕ ವರ್ಷಕ್ಕೆ ₹25–30 ಲಕ್ಷ ತಲುಪುತ್ತಿರುವುದರಿಂದ , ಎಂಬಿಬಿಎಸ್ ಪದವಿಗಳು ಶ್ರೀಮಂತರಿಗೆ ಐಷಾರಾಮಿ ಉತ್ಪನ್ನಗಳಾಗಿ ಬದಲಾಗುತ್ತಿವೆ.
education Jun 28 2025
Author: Gowthami K Image Credits:Getty
Kannada
ಸರಕಾರಿ ಕಾಲೇಜಿನಲ್ಲಿ ಕಡಿಮೆ
ಭಾರತದಲ್ಲಿ ವೈದ್ಯರಾಗಲು ತಗಲುವ ವೆಚ್ಚವು ಕಾಲೇಜು ಮತ್ತು ನೀವು ಆಯ್ಕೆ ಮಾಡುವ ಕೋರ್ಸ್ ಅನ್ನು ಅವಲಂಬಿಸಿರುತ್ತದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶಿಕ್ಷಣದ ವೆಚ್ಚವು ಖಾಸಗಿ ಕಾಲೇಜುಗಳಿಗಿಂತ ಕಡಿಮೆ ಇರುತ್ತದೆ.
Image credits: Getty
Kannada
ಎಷ್ಟು ಫೀಸ್
ಸರ್ಕಾರಿ ಕಾಲೇಜುಗಳಲ್ಲಿ ಎಂಬಿಬಿಎಸ್ ಕೋರ್ಸ್‌ಗೆ ಸುಮಾರು 2 ರಿಂದ 7 ಲಕ್ಷ ರೂಪಾಯಿಗಳು ತಗಲಬಹುದು, ಆದರೆ ಖಾಸಗಿ ಕಾಲೇಜುಗಳಲ್ಲಿ ಇದು 15 ಲಕ್ಷದಿಂದ 50 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಇರಬಹುದು. ಇತರ ಖರ್ಚು ಬೇರೆಯೇ.
Image credits: Getty
Kannada
5.5 ವರ್ಷ ಎಂಬಿಬಿಎಸ್ ಕೋರ್ಸ್
ಆದರೆ ಕೆಲವು ಹೆಚ್ಚುವರಿ ಶುಲ್ಕಗಳು ಇರಬಹುದು. ವಸತಿ, ಊಟ, ಪುಸ್ತಕಗಳು ಮತ್ತು ಇತರ ಅಗತ್ಯ ವಸ್ತುಗಳಿಗಾಗಿ ಪ್ರತಿ ತಿಂಗಳು ಸುಮಾರು 12,000 ದಿಂದ 15,000 ರೂಪಾಯಿಗಳವರೆಗೆ ಖರ್ಚು ಮಾಡಬೇಕಾಗಬಹುದು
Image credits: Getty
Kannada
ತಯಾರಿಗೂ ಖರ್ಚು
ವೈದ್ಯಕೀಯ ಪ್ರವೇಶ ಪರೀಕ್ಷೆಗಳಿಗೆ ತಯಾರಿ ಮತ್ತು ಇತರ ಖರ್ಚುಗಳು ಸಹ ಇವೆ. ನೀಟ್ ಸಮಯದಲ್ಲಿ ಕೋಚಿಂಗ್ ಸೆಂಟರ್‌ಗಳು ತುಂಬಿರುತ್ತವೆ. ಆದ್ರೆ ಅನೇಕರಿಗೆ ತಮ್ಮ ಕನಸು ನನಸು ಮಾಡಿಕೊಳ್ಳಲು ಆಗುವುದಿಲ್ಲ.
Image credits: Getty
Kannada
ನೀಟ್ ಮೂಲಕ ಆಯ್ಕೆ
ಮೂರು ಮಿಲಿಯನ್ ವಿದ್ಯಾರ್ಥಿಗಳು ವೈದ್ಯರಾಗುವ ಕನಸು ಕಟ್ಟಿಕೊಂಡಿದ್ದರೆ. ಅದರಲ್ಲಿ ನೀಟ್ ಮೂಲಕ ಆಯ್ಕೆಯಾಗಿ ಸರ್ಕಾರಿ ಸೀಟು ಗಿಟ್ಟಿಸಿಕೊಳ್ಳುವುದು ಕೇವಲ 50 ಸಾವಿರ ಮಂದಿ. ಉಳಿದವರು ಖಾಸಗಿಯಾಗಿ ಕಲಿಯಬೇಕಾಗುತ್ತದೆ.
Image credits: AI Photo
Kannada
ವಿದೇಶ ಎಂಬಿಬಿಎಸ್
ವಿದೇಶದಲ್ಲಿ ಎಂಬಿಬಿಎಸ್ ಮಾಡಲು ಭಾರತಕ್ಕಿಂತ ಹೆಚ್ಚಿನ ವೆಚ್ಚವಾಗುತ್ತದೆ, ಮತ್ತು ಬೋಧನಾ ಶುಲ್ಕಗಳು ಪ್ರತಿ ವರ್ಷ 3,000 ದಿಂದ 15,000 ಡಾಲರ್ ವರೆಗೆ ಇರಬಹುದು