Cricket

ಚೇಸ್ ಮಾಸ್ಟರ್ ವಿರಾಟ್‌ ಕೊಹ್ಲಿ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದಲ್ಲಿ ಎಲ್ಲರ ಚಿತ್ತ ಚೇಸ್‌ ಮಾಸ್ಟರ್ ವಿರಾಟ್ ಕೊಹ್ಲಿ ಮೇಲಿದೆ

Image credits: Getty

ಕೊನೆ ದಿನ 280 ಟಾರ್ಗೆಟ್

ಆಸೀಸ್ ಎದುರು ಟೆಸ್ಟ್ ವಿಶ್ವಕಪ್ ಗೆಲ್ಲಲು ಭಾರತಕ್ಕೆ 5ನೇ ದಿನ 280 ರನ್ ಅಗತ್ಯವಿದೆ. ಆಸ್ಟ್ರೇಲಿಯಾ ಗೆಲ್ಲಲು ಭಾರತದ 7 ವಿಕೆಟ್ ಬೇಕು

Image credits: Getty

ಕೊಹ್ಲಿ-ರಹಾನೆ ಮೇಲೆ ಚಿತ್ತ

ಸದ್ಯ ವಿರಾಟ್ ಕೊಹ್ಲಿ(44) & ಅಜಿಂಕ್ಯ ರಹಾನೆ(20) ಅಜೇಯ ಬ್ಯಾಟಿಂಗ್ ನಡೆಸಿದ್ದು, 5ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ
 

Image credits: Getty

ಉತ್ತಮ ಟ್ರ್ಯಾಕ್ ರೆಕಾರ್ಡ್

ಟೆಸ್ಟ್ ಕ್ರಿಕೆಟ್‌ನ 5ನೇ ದಿನದಾಟದಲ್ಲಿ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ
 

Image credits: Getty

ಅಪರೂಪದ ದಾಖಲೆ:

ಕಳೆದ 10 ವರ್ಷಗಳಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ 5ನೇ ದಿನ ಮೂರು ಬಾರಿ 100+ ರನ್‌ ಬಾರಿಸಿದ ಏಕೈಕ ಬ್ಯಾಟರ್ ಎನ್ನುವ ಅಪರೂಪದ ದಾಖಲೆಗೆ ಕೊಹ್ಲಿ ಪಾತ್ರರಾಗಿದ್ದಾರೆ

Image credits: Getty

5ನೇ ದಿನ ದೊಡ್ಡ ಮೊತ್ತ:

2014ರಲ್ಲಿ ಆಸ್ಟ್ರೇಲಿಯಾ ಎದುರು ಅಡಿಲೇಡ್‌ನಲ್ಲಿ(141), 2014ರಲ್ಲೇ ಕಿವೀಸ್ ಎದುರು ವೆಲ್ಲಿಂಗ್ಟನ್(105)ನಲ್ಲಿ & 2017ರಲ್ಲಿ ಲಂಕಾ ಎದುರು ಕೋಲ್ಕತಾದಲ್ಲಿ (104) ಶತಕ ಸಿಡಿಸಿದ್ದಾರೆ.

Image credits: Getty

5ನೇ ದಿನದಲ್ಲಿ ಕೊಹ್ಲಿ ಅಂಕಿ-ಅಂಶ:

ವಿರಾಟ್‌ ಕೊಹ್ಲಿ 14 ಇನಿಂಗ್ಸ್‌ಗಳಲ್ಲಿ 69.60 ರ ಬ್ಯಾಟಿಂಗ್ ಸರಾಸರಿಯಲ್ಲಿ 696 ರನ್ ಬಾರಿಸಿದ್ದಾರೆ.

Image credits: Getty

ದಶಕದ ಐಸಿಸಿ ಟ್ರೋಫಿ ಬರ ನೀಗುತ್ತಾ?

ಭಾರತ ಕಳೆದೊಂದು ದಶಕದಿಂದ ಐಸಿಸಿ ಟ್ರೋಫಿ ಜಯಿಸಿಲ್ಲ. ಇದೀಗ ವಿರಾಟ್ ಕೊಹ್ಲಿ ದೊಡ್ಡ ಇನಿಂಗ್ಸ್ ಆಡಿ ಭಾರತಕ್ಕೆ ಐಸಿಸಿ ಟ್ರೋಫಿ ಜಯಿಸುತ್ತಾರಾ ಕಾದು ನೋಡಬೇಕಿದೆ.
 

Image credits: Getty
Find Next One