19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ತಂಡವು ಐಪಿಎಲ್ ಮಿನಿ ಹರಾಜಿನಲ್ಲಿ ಅಳೆದುತೂಗಿ ಆಟಗಾರರನ್ನು ಖರೀದಿಸಿದೆ.
ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು ಇದೀಗ ಮತ್ತೊಂದು ಟ್ರೋಫಿ ಮೇಲೆ ಕಣ್ಣಿಟ್ಟಿದ್ದು, ಬೆಂಗಳೂರು ತಂಡದ ಪರ ಅಬ್ಬರಿಸಲು ರೆಡಿಯಾದ 5 ಅಟಗಾರರ ಬಗ್ಗೆ ತಿಳಿಯೋಣ.
ಇಂಗ್ಲೆಂಡ್ ಸ್ಪೋಟಕ ಬ್ಯಾಟರ್ ಫಿಲ್ ಸಾಲ್ಟ್ ಕಳೆದ ಐಪಿಎಲ್‌ನಲ್ಲಿ 403 ಸಿಡಿಸಿದ್ದರು. ಇದೀಗ ಸಾಲ್ಟ್ ಮತ್ತೆ ಅಬ್ಬರಿಸಲು ರೆಡಿಯಾಗಿದ್ದಾರೆ.
ಆಸೀಸ್ ಬಿಗ್ ಹಿಟ್ಟರ್ ಟಿಮ್ ಡೇವಿಡ್ 9 ಪಂದ್ಯಗಳಲ್ಲಿ 187 ರನ್ ಸಿಡಿಸಿದ್ದರು. ಈ ಬಾರಿ ಕೂಡಾ ಮ್ಯಾಚ್ ಫಿನಿಶ್ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಆರ್‌ಸಿಬಿ ಸ್ಟಾರ್ ಆಲ್ರೌಂಡರ್ ಕೃನಾಲ್ ಪಾಂಡ್ಯ ಕಳೆದ ಬಾರಿ 109 ರನ್ ಹಾಗೂ 17 ವಿಕೆಟ್ ಕಬಳಿಸಿದ್ದರು. ಇದೀಗ ಪಾಂಡ್ಯರಿಂದ ತಂಡ ಅಂತಹದ್ದೇ ಪ್ರದರ್ಶನದ ನಿರೀಕ್ಷೆಯಲ್ಲಿದೆ.
ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ, 11 ಇನ್ನಿಂಗ್ಸ್‌ಗಳಿಂದ 261 ರನ್ ಚಚ್ಚಿದ್ದರು. ಜಿತೇಶ್ ಈ ಬಾರಿಯೂ ಅಬ್ಬರಿಸಿದರೆ ಎದುರಾಳಿಗಳಿಗೆ ಉಳಿಗಾಲವಿಲ್ಲ.
ಆಸೀಸ್ ಮಾರಕ ವೇಗಿ ಹೇಜಲ್‌ವುಡ್, ಆಸೀಸ್ ಪರ 12 ಪಂದ್ಯಗಳಲ್ಲಿ 22 ವಿಕೆಟ್ ಕಬಳಿಸಿದ್ದರು. ಈ ಬಾರಿ ಕೂಡಾ ಹೇಜಲ್‌ವುಡ್ ಅವರಿಂದ ಅಂತಹದ್ದೇ ಪ್ರದರ್ಶನದ ನಿರೀಕ್ಷೆಯಲ್ಲಿದೆ.
ಟಿ20 ರ್‍ಯಾಂಕಿಂಗ್‌ನಲ್ಲಿ ಬುಮ್ರಾ ದಾಖಲೆ ಧೂಳೀಪಟ; ವರುಣ್ ಚಕ್ರವರ್ತಿ ಹೊಸ ದಾಖಲೆ
ಹೃತಿಕ್ ರೋಶನ್ 'ಕ್ರಿಶ್' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?
ಫೋಟೋ ಹಂಚಿಕೊಂಡು 'ಡಾರ್ಲಿಂಗ್..' ಎಂದು ಬರೆದ ಸಾರಾ ತೆಂಡುಲ್ಕರ್
ರೋಹಿತ್ ಶರ್ಮಾ ನಂತರ ಅತಿ ಹೆಚ್ಚು ಸಿಕ್ಸರ್ ಬಾರಿಸಿದ 5 ಸಕ್ರಿಯ ಬ್ಯಾಟರ್‌ಗಳಿವರು!