ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮೊದಲೇ ಬಾಂಗ್ಲಾದೇಶ ಕ್ರಿಕೆಟ್ ತಂಡವು ಚರ್ಚೆಯಲ್ಲಿದೆ. ಈಗಾಗಲೇ ಬಾಂಗ್ಲಾ ಕ್ರಿಕೆಟ್ ಬೋರ್ಡ್ ತಮ್ಮ ತಂಡವನ್ನು ಕ್ರಿಕೆಟ್ ಆಡಲು ಭಾರತಕ್ಕೆ ಕಳಿಸುವುದಿಲ್ಲ ಎಂದಿದೆ.
cricket-sports Jan 05 2026
Author: Naveen Kodase Image Credits:stockPhoto
Kannada
ಬಾಂಗ್ಲಾದೇಶ ನಾಯಕ
ದೀಗ ಟಿ20 ವಿಶ್ವಕಪ್ ಟೂರ್ನಿಗೆ ಬಾಂಗ್ಲಾದೇಶ ತಂಡವನ್ನು ಪ್ರಕಟಿಸಿದ್ದು ಲಿಟನ್ ದಾಸ್‌ಗೆ ನಾಯಕ ಪಟ್ಟ ಕಟ್ಟಲಾಗಿದೆ. ಸಾಕಷ್ಟು ಅನುಭವವಿರುವ ಲಿಟನ್ ದಾಸ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
Image credits: stockPhoto
Kannada
ಲಿಟನ್ ದಾಸ್ ಅವರ ವೈಯುಕ್ತಿಕ ಜೀವನ
ಲಿಟನ್ ದಾಸ್ ಬಾಂಗ್ಲಾದೇಶ ಕ್ರಿಕೆಟ್ ತಂಡದ ಪ್ರಮುಖ ಆಟಗಾರನಾಗಿದ್ದು, ತಮ್ಮ ವೈಯುಕ್ತಿಕ ಬದುಕಿಗಾಗಿಯೂ ಆಗಾಗ ಚರ್ಚೆಯಲ್ಲಿರುತ್ತಾರೆ. ಅವರ ಪತ್ನಿ ಕೂಡಾ ಸುಂದರವಾಗಿದ್ದಾರೆ.
Image credits: Insta/debosrisonchita16
Kannada
ಅಷ್ಟಕ್ಕೂ ಲಿಟನ್ ದಾಸ್ ಪತ್ನಿ ಯಾರು?
ಲಿಟನ್ ದಾಸ್ ಪತ್ನಿಯ ಹೆಸರು ದೇಬೊಶ್ರೀ ಸೋನ್‌ಚಿತ. ಈಕೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯರಾಗಿದ್ದು, ತಮ್ಮ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಾ ಇರುತ್ತಾರೆ.
Image credits: Insta/debosrisonchita16
Kannada
ಶ್ರೀಕೃಷ್ಣನ ಪರಮ ಭಕ್ತೆ
ಲಿಟನ್ ದಾಸ್ ಅವರ ಪತ್ನಿ ದೇಬೊಶ್ರಿ, ಶ್ರೀಕೃಷ್ಣನ ಪರಮ ಭಕ್ತೆಯಾಗಿದ್ದಾರೆ. ಅವರು ತಮ್ಮ ಪ್ರೊಫೈಲ್‌ನಲ್ಲಿ ಕೃಷ್ಣನ ಸೇವಕಿ, ರೈತರ ಹಾಗೂ ಪ್ರಾಣಿಗಳ ಪ್ರೇಮಿ ಎಂದು ಬರೆದುಕೊಂಡಿದ್ದಾರೆ.
Image credits: Insta/debosrisonchita16
Kannada
ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ಫಾಲೋವರ್ಸ್
ದೇಬೊಶ್ರೀ ಸೋನ್‌ಚಿತ ಅವರ ಫ್ಯಾನ್ ಫಾಲೋವರ್ಸ್‌ಗೇನೂ ಕಡಿಮೆಯಿಲ್ಲ. ಇನ್‌ಸ್ಟಾಗ್ರಾಂನಲ್ಲಿ ಲಿಟನ್ ದಾಸ್ ಪತ್ನಿಯನ್ನು 80 ಸಾವಿರಕ್ಕೂ ಹೆಚ್ಚು ಮಂದಿ ಫಾಲೋ ಮಾಡುತ್ತಿದ್ದಾರೆ.
Image credits: Insta/debosrisonchita16
Kannada
ಪ್ರತಿ ಹಬ್ಬಗಳಲ್ಲೂ ಪೂಜೆ ಮಾಡುವ ದೇಬೊಶ್ರಿ
ಅಂದಹಾಗೆ ಲಿಟನ್ ದಾಸ್ ಹಾಗೂ ದೇಬೊಶ್ರಿ ಬಾಂಗ್ಲಾದೇಶದಲ್ಲಿದ್ದರೂ ಮತಾಂತರವಾಗದೇ ಹಿಂದೂ ಧರ್ಮದ ಆಚರಣೆಗಳನ್ನು ಚಾಚೂ ತಪ್ಪದೇ ಪಾಲಿಸುತ್ತಾ ಬಂದಿದ್ದಾರೆ.
Image credits: Insta/debosrisonchita16
Kannada
ಹಿಂದೂ ಧರ್ಮದ ಆಚರಣೆ
ಲಿಟನ್ ದಾಸ್ ದಂಪತಿ ದೀಪಾವಳಿ, ಗಣೇಶ, ಶಿವರಾತ್ರಿ, ದುರ್ಗಪೂಜೆಗಳನ್ನು ಮಾಡುತ್ತಾ ಬಂದಿದ್ದಾರೆ.