Kannada

ಭಾರತ-ದಕ್ಷಿಣ ಆಫ್ರಿಕಾ ಅಂಡರ್-19 ಮ್ಯಾಚ್

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಅಂಡರ್-19 ಏಕದಿನ ಸರಣಿಯಲ್ಲಿ ವೈಭವ್ ಸೂರ್ಯವಂಶಿ ನೇತೃತ್ವದ ಭಾರತ ತಂಡವು ಮೂರನೇ ಪಂದ್ಯದಲ್ಲಿ 233 ರನ್ ಅಂತರದ ಗೆಲುವು ಸಾಧಿಸಿದೆ.

Kannada

ಹರಿಣಗಳೆದುರು ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ

ಇನ್ನು ಭಾರತ ಯುವ ಪಡೆ ಮೂರೂ ಪಂದ್ಯಗಳಲ್ಲೂ ಅದ್ಭುತ ಪ್ರದರ್ಶನ ತೋರುವ ಮೂಲಕ 3-0 ಅಂತರದಲ್ಲಿ ಹರಿಣಗಳೆದುರು ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವಲ್ಲಿ ಯಶಸ್ವಿಯಾಗಿದೆ.

Image credits: X@Vaibhavsooryava
Kannada

ಮೂರನೇ ಪಂದ್ಯದಲ್ಲಿ ಶತಕ ಸಿಡಿಸಿದ ಸೂರ್ಯವಂಶಿ:

ಇನ್ನು ದಕ್ಷಿಣ ಆಫ್ರಿಕಾ ಅಂಡರ್-19 ತಂಡದ ಎದುರು ವೈಭವ್ ಸೂರ್ಯವಂಶಿ ಸ್ಪೋಟಕ ಶತಕ ಸಿಡಿಸಿದರು. ಕೇವಲ 74 ಎಸೆತಗಳನ್ನು ಎದುರಿಸಿದ ಅವರು 9 ಬೌಂಡರಿ ಹಾಗೂ 10 ಸಿಕ್ಸರ್ ಸಹಿತ 127 ರನ್ ಸಿಡಿಸಿದರು.

Image credits: X@Vaibhavsooryava
Kannada

ಹೊಸ ಇತಿಹಾಸ ಬರೆದ ಸೂರ್ಯವಂಶಿ:

14 ವರ್ಷದ ಸೂರ್ಯವಂಶಿ, ದಕ್ಷಿಣ ಆಫ್ರಿಕಾ ಎದುರು ಶತಕ ಸಿಡಿಸುವ ಮೂಲಕ ಜಗತ್ತಿನ ಆರು ಬೇರೆ ಬೇರೆ ದೇಶಗಳಲ್ಲಿ ಶತಕ ಸಿಡಿಸಿದ ಮೊದಲ ಕಿರಿಯ ಕ್ರಿಕೆಟಿಗ ಎನ್ನುವ ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ.

Image credits: X@Cricsam01
Kannada

ಈ ದೇಶಗಳಲ್ಲಿ ಸೂರ್ಯವಂಶಿ ಶತಕ

ವೈಭವ್ ಸೂರ್ಯವಂಶಿ ಭಾರತ ಮಾತ್ರವಲ್ಲದೇ, ಯುಎಇ, ಕತಾರ್, ಇಂಗ್ಲೆಂಡ್, ಆಸ್ಟ್ರೇಲಿಯಾ & ದಕ್ಷಿಣ ಆಫ್ರಿಕಾದಲ್ಲಿ ಶತಕ ಸಿಡಿಸಿದ್ದಾರೆ. ಇದುವರೆಗೂ ಯಾವ ದೇಶಕ್ಕೆ ಪ್ರವಾಸ ಮಾಡಿದ್ದಾರೋ ಅಲ್ಲೆಲ್ಲಾ ಶತಕ ಸಿಡಿಸಿದ್ದಾರೆ.

Image credits: Insta/vaibhav_sooryavanshi09
Kannada

ಯಾವೆಲ್ಲಾ ಟೂರ್ನಿಯಲ್ಲಿ ಶತಕ

ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ, ಇದಾದ ಬಳಿಕ ಇಂಗ್ಲೆಂಡ್‌ನಲ್ಲಿ ಯೂಥ್ ಒನ್‌ಡೇ ಹಾಗೂ ಟೆಸ್ಟ್‌ನಲ್ಲಿ ಶತಕ. ಇದಾದ ನಂತರ ಇಂಡಿಯಾ 'ಎ' ಪರ ರೈಸಿಂಗ್ ಏಷ್ಯಾಕಪ್ ಟೂರ್ನಿಯಲ್ಲಿ ಶತಕ ಸಿಡಿಸಿದ್ದಾರೆ.

Image credits: x@SDhawan25
Kannada

ಯಾವೆಲ್ಲಾ ಟೂರ್ನಿಗಳಲ್ಲಿ ಶತಕ

ಇದಾದ ಬಳಿಕ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಬಿಹಾರ ಪರ ಶತಕ, ಅಂಡರ್-19 ಏಷ್ಯಾಕಪ್, ವಿಜಯ್ ಹಜಾರೆ ಟ್ರೋಫಿ, ಇದೀಗ ದಕ್ಷಿಣ ಆಫ್ರಿಕಾ ಅಂಡರ್-19 ತಂಡದೆದರು ಮೂರಂಕಿ ಮೊತ್ತ ದಾಖಲಿಸಿದ್ದಾರೆ.

Image credits: insta/vaibhav_sooryavanshi09
Kannada

ದಿಗ್ಗಜರಿಂದಲೂ ಮಾಡಲಾಗದ ದಾಖಲೆ

ಇಷ್ಟು ಸಣ್ಣ ವಯಸ್ಸಿನಲ್ಲಿ ಕ್ರಿಕೆಟ್ ದಿಗ್ಗಜರಾದ ಧೋನಿ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕೂಡಾ ಜಾಗತಿಕ ಮಟ್ಟದಲ್ಲಿ ಆರು ಶತಕ ಸಿಡಿಸಿರಲಿಲ್ಲ.  

Image credits: insta/vaibhav_sooryavanshi09
Kannada

ವೈಭವ್‌ ಟೀಂ ಇಂಡಿಯಾಗೆ ಎಂಟ್ರಿ ಕೊಡೋದು ಯಾವಾಗ?

ಇದೀಗ ವೈಭವ್ ಸೂರ್ಯವಂಶಿ ಭಾರತ ಹಿರಿಯರ ತಂಡಕ್ಕೆ ಯಾವಾಗ ಪಾದಾರ್ಪಣೆ ಮಾಡಬಹುದು ಎನ್ನುವ ಕುತೂಹಲ ಜೋರಾಗಿದೆ.

Image credits: Getty

ಭಾರತದ ಸ್ಪೋರ್ಟ್ಸ್‌ ಪ್ರೆಸೆಂಟರ್‌ಗೆ ಗೇಟ್‌ಪಾಸ್‌ ನೀಡಿದ ಬಾಂಗ್ಲಾ!

ಈ ಬಾಂಗ್ಲಾದೇಶ ಕ್ರಿಕೆಟಿಗನ ಪತ್ನಿ ಶ್ರೀಕೃಷ್ಣನ ಅಪ್ಪಟ ಆರಾಧಕಿ!

ಸೂರ್ಯಕುಮಾರ್ ಯಾದವ್ ಮೇಲೆ ಗಂಭೀರ ಆರೋಪ ಮಾಡಿದ ಖುಷಿ ಮುಖರ್ಜಿ ಯಾರು?

2025ರಲ್ಲಿ ಅತಿಹೆಚ್ಚು ವೈರಲ್ ಆದ ಸ್ಮೃತಿ ಮಂಧನಾ ಟಾಪ್-5 ಬ್ಯೂಟಿಫುಲ್ ಫೋಟೋಗಳಿವು!