ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಹೊಸದಾಗಿ ಪಾಕಿಸ್ತಾನದ ಹೈದರಾಬಾದ್ ಫ್ರಾಂಚೈಸಿ ಎಂಟ್ರಿಕೊಟ್ಟಿದೆ. ಇದು ಸೋಲ್ಡ್ ಆದ ಮೊತ್ತ ಹೆಚ್ಚು ಗಮನ ಸೆಳೆಯುತ್ತಿದೆ.
cricket-sports Jan 13 2026
Author: Naveen Kodase Image Credits:Getty
Kannada
ಈ ಫ್ರಾಂಚೈಸಿ ಬೆಲೆ ಕೇವಲ ₹55.57 ಕೋಟಿ
ಪಿಎಸ್‌ಎಲ್‌ನಲ್ಲಿ ಹೈದರಾಬಾದ್ ಫ್ರಾಂಚೈಸಿಯು ಕೇವಲ 55.57 ಕೋಟಿ ರುಪಾಯಿಗೆ ಬಿಡ್ ಮಾಡುವ ಮೂಲಕ ಫ್ರಾಂಚೈಸಿ ಹಕ್ಕು ಪಡೆದುಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ.
Image credits: X/DoctorofCricket
Kannada
ಐಪಿಎಲ್ ಸಂಬಳದ ಜತೆ ಹೋಲಿಕೆ
ಹೈದರಾಬಾದ್ ಫ್ರಾಂಚೈಸಿ ಇಷ್ಟು ಕಡಿಮೆ ಮೊತ್ತಕ್ಕೆ ಬಿಡ್ ಆದ ಬೆನ್ನಲ್ಲೇ ನೆಟ್ಟಿಗರು ಐಪಿಎಲ್ ಸ್ಟಾರ್ ಆಟಗಾರರ ಸಂಬಳಕ್ಕೂ ಪಿಎಸ್‌ಎಲ್ ಫ್ರಾಂಚೈಸಿಗೂ ಹೋಲಿಕೆ ಮಾಡಲಾರಂಭಿಸಿದ್ದಾರೆ.
Image credits: Getty
Kannada
ರಿಷಭ್ ಪಂತ್ ಸಂಬಳ
ಕಳೆದ ಆವೃತ್ತಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ರಿಷಭ್ ಪಂತ್‌ಗೆ 27 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. 2026ರ ಐಪಿಎಲ್‌ನಲ್ಲೂ ಪಂತ್ ಅಷ್ಟೇ ಮೊತ್ತ ಪಡೆಯಲಿದ್ದಾರೆ.
Image credits: stockPhoto
Kannada
ಶ್ರೇಯಸ್ ಅಯ್ಯರ್-ಡಫಿ ಸಂಬಳ:
ಇನ್ನು ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ₹26.75 ಕೋಟಿ ಹಾಗೂ ಆರ್‌ಸಿಬಿ ವೇಗಿ ಜೇಕಬ್ ಡಫಿಗೆ ಬೇಸ್ ಪ್ರೈಸ್ 2 ಕೋಟಿಗೆ ಖರೀದಿಸಲಾಗಿದೆ.
Image credits: ANI
Kannada
ಈ ಮೂವರ ಸಂಬಳ ಪಿಎಸ್‌ಎಲ್ ಫ್ರಾಂಚೈಸಿಗಿಂತ ಹೆಚ್ಚು!
ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಹಾಗೂ ಜೇಕಬ್ ಡಫಿಯ ಒಟ್ಟು ಸಂಬಳ, ಪಿಎಸ್‌ಎಲ್‌ನ ಹೈದರಾಬಾದ್ ಫ್ರಾಂಚೈಸಿಯ ಬಿಡ್ ಮೊತ್ತಕ್ಕಿಂತ ಹೆಚ್ಚು ಎಂದು ಭಾರತದ ಐಪಿಎಲ್ ಫ್ಯಾನ್ಸ್ ಟ್ರೋಲ್ ಮಾಡುತ್ತಿದ್ದಾರೆ.