ಶ್ರೀಶಾಂತ್ ಪತ್ನಿ ಭುವನೇಶ್ವರಿ ಕುಮಾರಿ, ಐಪಿಎಲ್ ಮಾಜಿ ಚೇರ್‌ಮನ್ ಲಲಿತ್ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
cricket-sports Sep 01 2025
Author: Naveen Kodase Image Credits:Instagram
Kannada
ಶ್ರೀಶಾಂತ್ ಪತ್ನಿ ಭುವನೇಶ್ವರಿ
ಶ್ರೀಶಾಂತ್ ಪತ್ನಿ ಭುವನೇಶ್ವರಿ ಕುಮಾರಿ, ರಾಜಮನೆತನದವರು. ಅವರ ಕುಟುಂಬ ರಾಜಸ್ಥಾನದ ಅಲ್ವಾರ್‌ನ ದಿವಾನ್‌ಪುರದವರು ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ.
Image credits: Instagram
Kannada
ಭುವನೇಶ್ವರಿ ಮತ್ತು ಶ್ರೀಶಾಂತ್ ಭೇಟಿ
ಶ್ರೀಶಾಂತ್ ಮತ್ತು ಭುವನೇಶ್ವರಿ ಮೊದಲ ಭೇಟಿ ಜೈಪುರದಲ್ಲಿ ಕ್ರಿಕೆಟ್ ಪಂದ್ಯದ ವೇಳೆ ನಡೆಯಿತು. ಶ್ರೀಶಾಂತ್ ಮೊದಲ ನೋಟದಲ್ಲೇ ಭುವನೇಶ್ವರಿಗೆ ಕ್ಲೀನ್ ಬೌಲ್ಡ್ ಆದರು.
Image credits: Instagram
Kannada
2013 ರಲ್ಲಿ ಶ್ರೀಶಾಂತ್ ಮತ್ತು ಭುವನೇಶ್ವರಿ ವಿವಾಹ
ಭುವನೇಶ್ವರಿ ಕುಮಾರಿ ಮತ್ತು ಶ್ರೀಶಾಂತ್ 2013 ರಲ್ಲಿ ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಸೂರ್ಯಶ್ರೀ ಶ್ರೀಶಾಂತ್ ಮತ್ತು ಶ್ರೀ ಸಾನ್ವಿಕಾ ಶ್ರೀಶಾಂತ್.
Image credits: Instagram
Kannada
ಶ್ರೀಶಾಂತ್ ಪತ್ನಿ ಸುದ್ದಿಯಲ್ಲಿ
ಇತ್ತೀಚೆಗೆ ಹರ್ಭಜನ್ ಸಿಂಗ್ ಮತ್ತುಶ್ರೀಶಾಂತ್ ನಡುವಿನ ಕಪಾಳಮೋಕ್ಷದ ಇನ್ನೊಂದು ವಿಡಿಯೋ ಲಲಿತ್ ಮೋದಿ ಹರಿಬಿಟ್ಟಿದ್ದರು. ಇದರ ಬಗ್ಗೆ ಶ್ರೀಶಾಂತ್ ಪತ್ನಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ
Image credits: Instagram
Kannada
ವಿಡಿಯೋ ಹಂಚಿಕೊಂಡಿದ್ದ ಲಲಿತ್ ಮೋದಿ
2008 ರಲ್ಲಿ ಶ್ರೀಶಾಂತ್ ಮತ್ತು ಹರ್ಭಜನ್ ನಡುವಿನ ಕಪಾಳಮೋಕ್ಷ ಪ್ರಕರಣದ ವಿಡಿಯೋ ಯಾರೂ ನೋಡಿರಲಿಲ್ಲ. ಲಲಿತ್ ಮೋದಿ ಮೈಕೆಲ್ ಕ್ಲಾರ್ಕ್ ಪಾಡ್‌ಕ್ಯಾಸ್ಟ್‌ನಲ್ಲಿ ಘಟನೆಯ ಬಗ್ಗೆ ಹೇಳಿದ್ದರು. ಆ ವಿಡಿಯೋ ವೈರಲ್ ಆಗಿತ್ತು.
Credits: X
Kannada
ಭುವನೇಶ್ವರಿ ಪೋಸ್ಟ್
ಲಜ್ಜೆಗೆಟ್ಟ ಲಲಿತ್ ಮೋದಿ ಮತ್ತು ಮೈಕೆಲ್ ಕ್ಲಾರ್ಕ್, ನೀವು ಮನುಷ್ಯರಲ್ಲ. 2008ರ ಘಟನೆಯನ್ನು ಪ್ರಚಾರಕ್ಕಾಗಿ ಬಳಸುತ್ತಿದ್ದೀರಿ ಎಂದು ಭುವನೇಶ್ವರಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು.
Image credits: Instagram
Kannada
ಹರ್ಭಜನ್ ಸಿಂಗ್ ಹಲವು ಬಾರಿ ಕ್ಷಮೆ ಕೇಳಿದ್ದಾರೆ
ಹರ್ಭಜನ್ ಸಿಂಗ್ ಈ ಘಟನೆಗೆ ತುಂಬಾ ವಿಷಾದ ವ್ಯಕ್ತಪಡಿಸಿದ್ದಾರೆ. ಶ್ರೀಶಾಂತ್ ಅವರನ್ನು ಹಲವು ಬಾರಿ ಕ್ಷಮೆ ಕೇಳಿದ್ದಾರೆ.