Cricket
ವಿಶ್ವದ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಭಾರತೀಯ ಆಟಗಾರರೇ ಪಡೆದಿದ್ದಾರೆ.
ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ 1,425 ಕೋಟಿ ರೂ. ಆಸ್ತಿಯೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
1,040 ಕೋಟಿ ರೂ. ಆಸ್ತಿ ಹೊಂದಿರುವ ಮಾಜಿ ನಾಯಕ ಎಂ ಎಸ್ ಧೋನಿ ಎರಡನೇ ಸ್ಥಾನದಲ್ಲಿದ್ದಾರೆ
ಭಾರತೀಯ ತಾರೆ ವಿರಾಟ್ ಕೊಹ್ಲಿ 1,020 ಕೋಟಿ ರೂ. ಆಸ್ತಿ ಹೊಂದಿದ್ದು, ಶ್ರೀಮಂತ ಕ್ರಿಕೆಟಿಗರಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
634 ಕೋಟಿ ರೂ. ಆಸ್ತಿ ಹೊಂದಿರುವ ಮಾಜಿ ನಾಯಕ ಸೌರವ್ ಗಂಗೂಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 480 ಕೋಟಿ ರೂ. ಆಸ್ತಿಯೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.
ದಿವಂಗತ ಆಸ್ಟ್ರೇಲಿಯಾದ ಸ್ಪಿನ್ ದಂತಕಥೆ ಶೇನ್ ವಾರ್ನ್ 409 ಕೋಟಿ ರೂ. ಆಸ್ತಿ ಹೊಂದಿದ್ದಾರೆ ಎಂದು ಅಂದಾಜಿಸಲಾಗಿದೆ.
ವೆಸ್ಟ್ ಇಂಡೀಸ್ ದಂತಕಥೆ ಕ್ರಿಸ್ ಗೇಲ್ 375 ಕೋಟಿ ರೂ. ಆಸ್ತಿ ಹೊಂದಿದ್ದಾರೆ ಎಂದು ವರದಿಯಾಗಿದೆ.
ಟಾಪ್ ಟೆನ್‌ನಲ್ಲಿರುವ ಮತ್ತೊಬ್ಬ ಭಾರತೀಯ ತಾರೆ ವೀರೇಂದ್ರ ಸೆಹ್ವಾಗ್.ಅವರ ನಿವ್ವಳ ಮೌಲ್ಯ 332 ಕೋಟಿ ರೂ.
ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ 320 ಕೋಟಿ ರೂ. ಆಸ್ತಿ ಹೊಂದಿದ್ದಾರೆ ಎಂದು ಅಂದಾಜಿಸಲಾಗಿದೆ.
ಹತ್ತನೇ ಸ್ಥಾನದಲ್ಲಿರುವ ಭಾರತದ ಯುವರಾಜ್ ಸಿಂಗ್ 266 ಕೋಟಿ ರೂ. ನಿವ್ವಳ ಮೌಲ್ಯ ಹೊಂದಿದ್ದಾರೆ ಎಂದು ವರದಿಯಾಗಿದೆ.
ಈ ಕ್ರಿಕೆಟಿಗನಿಂದ ಸಚಿನ್ ರೆಕಾರ್ಡ್ ಅಪಾಯದಲ್ಲಿದೆ..! ಯಾರೀತ?
ಎಂ ಎಸ್ ಧೋನಿ ಆಸ್ತಿ ಎಷ್ಟು? ಐಪಿಎಲ್‌ನಿಂದ ಎಷ್ಟು ಸಂಪಾದನೆ?
ಶಿಖರ್ ಮದ್ವೆಯಾಗಿದ್ದು ವಿವಾಹಿತೆಯನ್ನು! ಅವಳಿಂದಲೂ ದೂರವಾಗೀಗ ಒಬ್ಬಂಟಿ!
ಶ್ರೀರಾಮ ಭಕ್ತ ಸೌಥ್ ಆಫ್ರಿಕಾ ಕ್ರಿಕೆಟರ್ ಕೇಶವ್ ಮಹಾರಾಜ್ ಒಟ್ಟು ಸಂಪತ್ತು ಎಷ್ಟು?