Cricket

ಶಿಖರ್ ಧವನ್ ಬಗ್ಗೆ 10 ಸಂಗತಿಗಳು

ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್, ಭಾರತದ ಯಶಸ್ವಿ ಆರಂಭಿಕ ಬ್ಯಾಟರ್‌ಗಳಲ್ಲಿ ಒಬ್ಬರು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ

ಧವನ್ ಭಾರತಕ್ಕಾಗಿ ಎಲ್ಲಾ ಮಾದರಿಗಳಲ್ಲಿ ಒಟ್ಟು 269 ಪಂದ್ಯಗಳನ್ನು ಆಡಿದ್ದಾರೆ, ಟೆಸ್ಟ್‌ಗಳಲ್ಲಿ 2315 ರನ್‌ಗಳು, ಏಕದಿನ ಪಂದ್ಯಗಳಲ್ಲಿ 6793 ರನ್‌ಗಳು ಮತ್ತು ಟಿ20 ಪಂದ್ಯಗಳಲ್ಲಿ 1759 ರನ್‌ಗಳನ್ನು ಗಳಿಸಿದ್ದಾರೆ. 

ಶಿಖರ್ ಧವನ್ ಜನನ, ಆರಂಭಿಕ ಜೀವನ

ಶಿಖರ್ ಧವನ್ ಡಿಸೆಂಬರ್ 5, 1985 ರಂದು ಭಾರತದ ದೆಹಲಿಯಲ್ಲಿ ಜನಿಸಿದರು. ಅವರ ಅಡ್ಡ ಹೆಸರು 'ಗಬ್ಬರ್', ಇದು "ಶೋಲೆ" ಚಿತ್ರದ ಪ್ರಸಿದ್ಧ ಪಾತ್ರದಿಂದ ಪ್ರೇರಿತವಾಗಿದೆ.

ಕ್ರಿಕೆಟ್ ವೃತ್ತಿಜೀವನದ ಆರಂಭ

ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು 2010 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದ ಮೂಲಕ. 3 ವರ್ಷಗಳ ನಂತರ ಅವರು ಟೆಸ್ಟ್‌ ಪಾದಾರ್ಪಣೆ ಮಾಡಿ ಆಸೀಸ್‌ ಎದುರು ಶತಕ ಸಿಡಿಸಿದ್ದರು.

ಶಿಖರ್ ಧವನ್: ದಾಖಲೆಗಳು ಮತ್ತು ಸಾಧನೆಗಳು

  • ವೇಗದ ಶತಕ: ಟೆಸ್ಟ್‌ ಪಾದಾರ್ಪಣೆಯಲ್ಲಿ ಕೇವಲ 85 ಎಸೆತಗಳಲ್ಲಿ ಶತಕ ಗಳಿಸಿದರು. 
  • 100 ನೇ ಏಕದಿನ ಪಂದ್ಯದಲ್ಲಿ ಶತಕ ಗಳಿಸಿದ ಮೊದಲ ಭಾರತೀಯ: 2016 ರಲ್ಲಿ. 
  • 2011 ರ ವಿಶ್ವಕಪ್ ತಂಡದ ಭಾಗ, ಮೀಸಲು ಆಟಗಾರನಾಗಿ.

ಐಪಿಎಲ್ ಮತ್ತು ದೇಶೀಯ ಕ್ರಿಕೆಟ್

ಐಪಿಎಲ್ ಪ್ರದರ್ಶನ: ದೆಹಲಿ ಡೇರ್‌ಡೆವಿಲ್ಸ್, ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್‌, ಪಂಜಾಬ್ ಕಿಂಗ್ಸ್‌ ಪರ ಆಡಿದ್ದಾರೆ. 222 ಪಂದ್ಯಗಳಿಂದ 6769 ರನ್‌ಗಳನ್ನು ಗಳಿಸಿದ್ದಾರೆ, 

ಶಿಖರ್ ಧವನ್ ಪತ್ನಿ, ಮಕ್ಕಳು

  • ವಿವಾಹ: ಆಯೆಷಾ ಮುಖರ್ಜಿಗೆ. ಈಗ ವಿಚ್ಛೇದನ. 
  • ಮಕ್ಕಳು: ಶಿಖರ್ ಧವನ್ ಅವರಿಗೆ ಜೋರಾವರ್ ಎಂಬ ಮಗನಿದ್ದಾನೆ. ಮತ್ತು ಪತ್ನಿ ಆಯೆಷಾ ಅವರ ಮೊದಲ ಮದುವೆಯಿಂದ ಇಬ್ಬರು ಹಣ್ಣು ಮಕ್ಕಳು, ರಿಯಾ ಮತ್ತು ಅಲಿಯಾ.

ಶಿಖರ್ ಧವನ್ ಹವ್ಯಾಸಗಳು ಮತ್ತು ಆಸಕ್ತಿಗಳು

ಶಿಖರ್ ಧವನ್ ಪ್ರಾಣಿ ಪ್ರೇಮಿ. ಅವರು ಶಿಖರ್ ಧವನ್ ಫೌಂಡೇಶನ್ ಅನ್ನು ಸಹ ನಡೆಸುತ್ತಿದ್ದಾರೆ, ಇದು ಜನರ ಉತ್ತಮ ಧ್ಯೇಯಕ್ಕಾಗಿ ಸರ್ಕಾರೇತರ ಸಂಸ್ಥೆಗಳ ಸಾಮರ್ಥ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.

ಶಿಖರ್ ಧವನ್ ಆಧ್ಯಾತ್ಮಿಕ ವ್ಯಕ್ತಿ

ಶಿಖರ್ ಧವನ್ ಅವರು ಟೆನಿಸ್ ಆಡುವುದು, ಈಜು ಮತ್ತು ಸಂಗೀತ ಕೇಳುವುದನ್ನು ಆನಂದಿಸುತ್ತಾರೆ. ಅವರು ಆಧ್ಯಾತ್ಮಿಕತೆ ಮತ್ತು ಧ್ಯಾನದಲ್ಲಿ ಆಳವಾದ ಆಸಕ್ತಿಯನ್ನು ಹೊಂದಿದ್ದಾರೆ.

ಶಿಖರ್ ಧವನ್ 'ಗಬ್ಬರ್' ಶೈಲಿಯಲ್ಲಿ ಮಾತ್ರವಲ್ಲ

ಧವನ್ ತಂಡದ ಸದಸ್ಯರನ್ನು ಪ್ರೋತ್ಸಾಹಿಸಲು ಗಬ್ಬರ್ ಸಿಂಗ್ ಅವರ ಪ್ರಸಿದ್ಧ ಸಂಭಾಷಣೆ "ಹೇ ಓ ಸಾಂಬಾ!". ಎನ್ನುತ್ತಿದ್ದರು. ಇದರಿಂದಾಗಿ, ತಂಡದ ಸದಸ್ಯರು ಅವರನ್ನು ಗಬ್ಬರ್ ಎಂದು ಕರೆಯಲು ಪ್ರಾರಂಭಿಸಿದರು.

ಶ್ರೀರಾಮ ಭಕ್ತ ಸೌಥ್ ಆಫ್ರಿಕಾ ಕ್ರಿಕೆಟರ್ ಕೇಶವ್ ಮಹಾರಾಜ್ ಒಟ್ಟು ಸಂಪತ್ತು ಎಷ್ಟು?

ವೆಂಕಟೇಶ್ ಅಯ್ಯರ್ ನೆಟ್ ವರ್ತ್ ಎಷ್ಟು..?

ಯುಜುವೇಂದ್ರ ಚಹಲ್ ನಿವ್ವಳ ಮೌಲ್ಯ: ಭಾರತೀಯ ಕ್ರಿಕೆಟಿಗನ ಸಂಬಳ, ಗಳಿಕೆ ಎಷ್ಟು?

ಹಾರ್ದಿಕ್ ಪಾಂಡ್ಯ ಹೊಸ ಪ್ರೇಯಸಿ ಜಾಸ್ಮಿನ್ ವಲಿಯಾ ಯಾರು?