Cricket
ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್ ಜೋ ರೂಟ್ ಶೀಘ್ರದಲ್ಲೇ ಮಾಸ್ಟರ್-ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಟೆಸ್ಟ್‌ನಲ್ಲಿ ಅತಿಹೆಚ್ಚು ರನ್‌ಗಳ ವಿಶ್ವ ದಾಖಲೆಯನ್ನು ಮುರಿಯಬಹುದು.
ಶ್ರೀಲಂಕಾ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸುವ ಮೂಲಕ ಅವರು ಇಂಗ್ಲೆಂಡ್ ಪರ ಅತಿಹೆಚ್ಚು ಟೆಸ್ಟ್ ಶತಕ ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
ರನ್ ಮೆಷಿನ್ ಜೋ ರೂಟ್ ಅವರ ದೃಷ್ಟಿ ಈಗ ಸಚಿನ್ ತೆಂಡೂಲ್ಕರ್ ಅವರ ದಾಖಲೆಯ ಮೇಲಿದೆ. ಟೆಸ್ಟ್‌ನಲ್ಲಿ ರನ್ ರೆಕಾರ್ಡ್ ಮುರಿಯಲು ಸಜ್ಜಾಗಿದ್ದಾರೆ
ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ತಮ್ಮ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಟ್ಟು 200 ಪಂದ್ಯಗಳ 329 ಇನ್ನಿಂಗ್ಸ್‌ಗಳಲ್ಲಿ 53.78 ಸರಾಸರಿಯಲ್ಲಿ 15,921 ರನ್ ಗಳಿಸಿದ್ದಾರೆ.
ಸದ್ಯ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ 12,377 ರನ್ ಗಳಿಸಿದ್ದಾರೆ. ಈ ರೀತಿಯಾಗಿ ಅವರು ಸಚಿನ್ ಅವರ ದಾಖಲೆಯನ್ನು ಮುರಿಯಲು ಕೇವಲ 3,574 ರನ್‌ಗಳ ಅಂತರದಲ್ಲಿದ್ದಾರೆ.
ಟೆಸ್ಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಜೋ ರೂಟ್ ಈಗಾಗಲೇ ಬ್ರಿಯಾನ್ ಲಾರಾ ಅವರನ್ನು ಹಿಂದಿಕ್ಕಿದ್ದಾರೆ, ಲಾರ ಟೆಸ್ಟ್ ಕ್ರಿಕೆಟ್‌ನಲ್ಲಿ 11,953 ರನ್ ಗಳಿಸಿದ್ದರು.
33 ವರ್ಷದ ಜೋ ರೂಟ್ ಅವರ ಟೆಸ್ಟ್ ದಾಖಲೆ ಅದ್ಭುತವಾಗಿದೆ. ಅವರು 145 ಟೆಸ್ಟ್ ಪಂದ್ಯಗಳ 265 ಇನ್ನಿಂಗ್ಸ್‌ಗಳಲ್ಲಿ 50.93 ಸರಾಸರಿಯಲ್ಲಿ 12,377 ರನ್ ಗಳಿಸಿದ್ದಾರೆ. ಇದರಲ್ಲಿ 34 ಶತಕ ಮತ್ತು 64 ಅರ್ಧಶತಕಗಳು ಸೇರಿವೆ.