Cricket

ಜೂನ್‌ 20:

ಜೂನ್‌ 20 ಭಾರತೀಯ ಕ್ರಿಕೆಟ್‌ ಪಾಲಿಗೆ ಅತ್ಯಂತ ಸ್ಮರಣೀಯ ದಿನ. ಈ ದಿನ ಮೂವರು ದಿಗ್ಗಜರು ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.
 

Image credits: Social Media

ಮೂವರು ದಿಗ್ಗಜರ ಪಾದಾರ್ಪಣೆ

ಜೂನ್ 20ರಂದು ಭಾರತದ ದಿಗ್ಗಜ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಹಾಗೂ ರನ್‌ ಮಷೀನ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ.

Image credits: Social Media

1996ರ ಜೂನ್ 20

1996ರ ಜೂನ್ 20ರಂದು ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗೂಲಿ ಒಂದೇ ದಿನ ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು

Image credits: Social Media

ಲಾರ್ಡ್ಸ್‌ ಮೈದಾನದಲ್ಲಿ ಪಾದಾರ್ಪಣೆ

ಇಬ್ಬರು ದಿಗ್ಗಜ ಕ್ರಿಕೆಟಿಗರು ಐತಿಹಾಸಿಕ ಲಾರ್ಡ್ಸ್‌ ಮೈದಾನದಲ್ಲಿ ಇಂಗ್ಲೆಂಡ್ ಎದುರು ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.

Image credits: Social Media

ಶತಕ ಚಚ್ಚಿದ್ದ ದಾದಾ

ಸೌರವ್ ಗಂಗೂಲಿ ತಾವಾಡಿದ ಪಾದಾರ್ಪಣೆ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ ಎದುರು ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ 131 ರನ್ ಬಾರಿಸಿ ಟೆಸ್ಟ್‌ ಡೆಬ್ಯೂ ಸ್ಮರಣೀಯವಾಗಿಸಿಕೊಂಡರು.

Image credits: Social Media

ಶತಕ ವಂಚಿತ ದ್ರಾವಿಡ್

ಇನ್ನು ರಾಹುಲ್ ದ್ರಾವಿಡ್‌ ಕೇವಲ 5 ರನ್ ಅಂತರದಲ್ಲಿ ಶತಕ ಬಾರಿಸುವ ಅವಕಾಶ ವಂಚಿತರಾದರು. ದ್ರಾವಿಡ್ 95 ರನ್ ಬಾರಿಸಿ ಕ್ರಿಸ್ ಲೆವಿಸ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿನ್ ಸೇರಿದ್ದರು.

Image credits: Social Media

2011ರ ಜೂನ್ 20

ವಿರಾಟ್ ಕೊಹ್ಲಿ 2011ರ ಜೂನ್ 20ರಂದು ವೆಸ್ಟ್ ಇಂಡೀಸ್ ವಿರುದ್ದ ಜಮೈಕಾದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.

Image credits: Getty

ಮೊದಲ ಪಂದ್ಯದಲ್ಲಿ ಕೊಹ್ಲಿ ಫೇಲ್

ವಿರಾಟ್ ಕೊಹ್ಲಿ ತಮ್ಮ ಪಾದಾರ್ಪಣೆ ಪಂದ್ಯದಲ್ಲಿ ಕಮಾಲ್ ಮಾಡಲು ಸಾಧ್ಯವಾಗಿರಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ಕೊಹ್ಲಿ 4 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 15 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು.
 

Image credits: Getty

ಸೆಹ್ವಾಗ್‌ ಟೆಸ್ಟ್‌ ದಾಖಲೆ ನುಚ್ಚುನೂರು ಮಾಡಿದ ಡೇವಿಡ್‌ ವಾರ್ನರ್‌..!

ನೇಥನ್ ಲಯನ್: ಅಪರೂಪದ ದಾಖಲೆ ಬರೆದ ಜಗತ್ತಿನ ಮೊದಲ ಬೌಲರ್..!

ಸರ್ ಡಾನ್ ಬ್ರಾಡ್ಮನ್, ವಾರ್ನರ್ ದಾಖಲೆ ಮುರಿದ ಜೋ ರೂಟ್..!

Asia Cup 2023: ನಿಮಗೆ ಗೊತ್ತಿರದ 10 ಇಂಟ್ರೆಸ್ಟಿಂಗ್ ಸಂಗತಿಗಳು..!