Cricket

ಜೋ ರೂಟ್ ಶತಕ

ಆ್ಯ‍ಷಸ್‌ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ದಿನವೇ ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ ಆಕರ್ಷಕ ಶತಕ ಸಿಡಿಸಿದ್ದಾರೆ

Image credits: Getty

145 ಎಸೆತಗಳಲ್ಲಿ ಶತಕ:

32 ವರ್ಷದ ಜೋ ರೂಟ್, ಆಸ್ಟ್ರೇಲಿಯಾ ಎದುರು 145 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಮೂರಂಕಿ ಮೊತ್ತ ದಾಖಲಿಸಲು ಸಫಲರಾದರು

Image credits: Getty

ದಾಖಲೆ ಬ್ರೇಕ್

ಈ ಶತಕದೊಂದಿಗೆ ಕ್ರಿಕೆಟ್ ದಿಗ್ಗಜ ಸರ್ ಡಾನ್ ಬ್ರಾಡ್ಮನ್ ಹಾಗೂ ಡೇವಿಡ್ ವಾರ್ನರ್ ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕುವಲ್ಲಿ ಯಶಸ್ವಿಯಾದರು.

Image credits: Getty

ಬ್ರಾಡ್ಮನ್ ದಾಖಲೆ ಬ್ರೇಕ್

ಆಸ್ಟ್ರೇಲಿಯಾದ ಬ್ರಾಡ್ಮನ್‌, ಟೆಸ್ಟ್‌ ಕ್ರಿಕೆಟ್‌ನಲ್ಲಿ 29 ಶತಕ ಬಾರಿಸಿದ್ದರು. ಇದೀಗ ರೂಟ್, ಟೆಸ್ಟ್‌ ಕ್ರಿಕೆಟ್‌ನಲ್ಲಿ 30ನೇ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.

Image credits: Getty

46ನೇ ಅಂತರಾಷ್ಟ್ರೀಯ ಶತಕ:

2015ರ ಬಳಿಕ ಆಸ್ಟ್ರೇಲಿಯಾ ಎದುರು ಮೊದಲ ಬಾರಿಗೆ ಶತಕ ಬಾರಿಸುವಲ್ಲಿ ರೂಟ್ ಯಶಸ್ವಿಯಾದರು. ಈ ಮೂಲಕ ರೂಟ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 46ನೇ ಶತಕ ಪೂರೈಸಿದರು.
 

Image credits: Getty

ವಾರ್ನರ್ ದಾಖಲೆ ಬ್ರೇಕ್:

ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 45 ಶತಕ ಸಿಡಿಸಿದ್ದಾರೆ. ಆ ದಾಖಲೆಯನ್ನು ಹಿಂದಿಕ್ಕುವಲ್ಲಿ ಇದೀಗ ಜೋ ರೂಟ್ ಯಶಸ್ವಿಯಾಗಿದ್ದಾರೆ.

Image credits: Getty

ಜೋ ರೂಟ್ ಅಜೇಯ ಶತಕ:

ಜೋ ರೂಟ್ 118 ರನ್ ಬಾರಿಸಿ ಅಜೇಯರಾಗಿದ್ದಾಗಲೇ ಇಂಗ್ಲೆಂಡ್ ತಂಡವು 8 ವಿಕೆಟ್ ನಷ್ಟಕ್ಕೆ 393 ರನ್ ಗಳಿಸಿದ್ದಾಗ ನಾಯಕ ಬೆನ್ ಸ್ಟೋಕ್ಸ್ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.

Image credits: Getty

ಅಚ್ಚರಿಯ ಡಿಕ್ಲೇರ್:

ಮೊದಲ ದಿನವೇ ಇಂಗ್ಲೆಂಡ್ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದು, ಅಚ್ಚರಿಗೊಳಗಾಗುವಂತೆ ಮಾಡಿತು. ಇನ್ನು ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೇ 14 ರನ್ ಗಳಿಸಿದ್ದು, 379 ರನ್ ಹಿನ್ನಡೆಯಲ್ಲಿದೆ.

Image credits: Getty
Find Next One