Cricket
ಆ್ಯಷಸ್ ಟೆಸ್ಟ್ ಸರಣಿಯ ಮೊದಲ ಪಂದ್ಯ ಗೆಲ್ಲಲು ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾಗೆ 281 ರನ್‌ಗಳ ಗುರಿ ನೀಡಿದೆ.
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಪರ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ 57 ಎಸೆತಗಳಲ್ಲಿ 36 ರನ್ ಬಾರಿಸಿ ಓಲಿ ರಾಬಿನ್‌ಸನ್‌ಗೆ ವಿಕೆಟ್ ಒಪ್ಪಿಸಿದರು.
ಡೇವಿಡ್ ವಾರ್ನರ್ ಇದೀಗ ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ವಿರೇಂದ್ರ ಸೆಹ್ವಾಗ್ (8,207 ರನ್) ಅವರ ರನ್ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಡೇವಿಡ್ ವಾರ್ನರ್ ಇದೀಗ 8,208 ರನ್ ಬಾರಿಸುವ ಮೂಲಕ, ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಓಪನ್ನರ್ ಸಾಲಿನಲ್ಲಿ 5ನೇ ಸ್ಥಾನಕ್ಕೇರಿದ್ದಾರೆ.
ಡೇವಿಡ್ ವಾರ್ನರ್, ಅಸ್ಟ್ರೇಲಿಯಾದ ಯಶಸ್ವಿ ಆರಂಭಿಕರಲ್ಲಿ ಒಬ್ಬರಾಗಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ 45.60 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.
ಆಲಿಸ್ಟರ್ ಕುಕ್(11,845), ಸುನಿಲ್ ಗವಾಸ್ಕರ್(9,607), ಗ್ರೇಮ್ ಸ್ಮಿತ್(9,030) ಹಾಗೂ ಮ್ಯಾಥ್ಯೂ ಹೇಡನ್(8,625) ಮೊದಲ 4 ಸ್ಥಾನದಲ್ಲಿದ್ದಾರೆ.
ವಾರ್ನರ್, 337 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 42.94ರ ಸರಾಸರಿಯಲ್ಲಿ 16,920 ರನ್ ಬಾರಿಸಿದ್ದು, ಇನ್ನು ಕೇವಲ 80 ರನ್ ಬಾರಿಸಿದರೆ, 17 ಸಾವಿರ ರನ್ ಗಡಿ ದಾಟಲಿದ್ದಾರೆ.
ನೇಥನ್ ಲಯನ್: ಅಪರೂಪದ ದಾಖಲೆ ಬರೆದ ಜಗತ್ತಿನ ಮೊದಲ ಬೌಲರ್..!
ಸರ್ ಡಾನ್ ಬ್ರಾಡ್ಮನ್, ವಾರ್ನರ್ ದಾಖಲೆ ಮುರಿದ ಜೋ ರೂಟ್..!
Asia Cup 2023: ನಿಮಗೆ ಗೊತ್ತಿರದ 10 ಇಂಟ್ರೆಸ್ಟಿಂಗ್ ಸಂಗತಿಗಳು..!
11 ಐಸಿಸಿ ಕ್ರಿಕೆಟ್ ವಿಶ್ವಕಪ್ ಗೆದ್ದ ಗಂಡ-ಹೆಂಡತಿ ಕಿಲಾಡಿ ಜೋಡಿ..!