Cricket
ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವೆ ಆ್ಯಷಸ್ ಟೆಸ್ಟ್ ಸರಣಿ ಆರಂಭವಾಗಿದ್ದು, ಬರ್ಮಿಂಗ್‌ಹ್ಯಾಮ್‌ನಲ್ಲಿ ಮೊದಲ ಟೆಸ್ಟ್ ರೋಚಕ ಘಟ್ಟ ತಲುಪಿದೆ
ಟೆಸ್ಟ್‌ನ 4ನೇ ದಿನ ಅಂದರೆ ಜೂನ್ 19ರಂದು ಅಸ್ಟ್ರೇಲಿಯಾದ ಸ್ಪಿನ್ನರ್ ನೇಥನ್ ಲಯನ್ ಅಪರೂಪದ ದಾಖಲೆ ನಿರ್ಮಿಸಿದ್ದಾರೆ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಲಯನ್ 150+ ವಿಕೆಟ್ ಕಬಳಿಸಿದ ಜಗತ್ತಿನ ಮೊದಲ ಬೌಲರ್ ಎನ್ನುವ ದಾಖಲೆ ನಿರ್ಮಿಸಿದ್ದಾರೆ
ನೇಥನ್ ಲಯನ್ 35 ಟೆಸ್ಟ್ ವಿಶ್ವಕಪ್ ಆವೃತ್ತಿಯಲ್ಲಿ ಸದ್ಯ 35 ಟೆಸ್ಟ್ ಪಂದ್ಯಗಳನ್ನಾಡಿ 152 ವಿಕೆಟ್ ಕಬಳಿಸಿದ್ದಾರೆ.
ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್(141*), ಹಾಗೂ ಟೀಂ ಇಂಡಿಯಾ ಸ್ಪಿನ್ನರ್ ಆರ್ ಅಶ್ವಿನ್(132) ಕ್ರಮವಾಗಿ ಎರಡು & ಮೂರನೇ ಸ್ಥಾನದಲ್ಲಿದ್ದಾರೆ.
35 ವರ್ಷದ ಲಯನ್, ಆ್ಯಷಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದ ಎರಡು ಇನಿಂಗ್ಸ್‌ನಲ್ಲೂ ತಲಾ 4 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
ಇದೀಗ ಆತಿಥೇಯ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾಗೆ ಗೆಲ್ಲಲು 281 ರನ್‌ಗಳ ಸವಾಲಿನ ಗುರಿ ನೀಡಿದೆ.
ಗುರಿ ಬೆನ್ನತ್ತಿರುವ ಆಸ್ಟ್ರೇಲಿಯಾ, 4ನೇ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 107 ರನ್ ಗಳಿಸಿದೆ.
ಆಸೀಸ್ ಮೊದಲ ಟೆಸ್ಟ್ ಗೆಲ್ಲಲು 174 ರನ್ ಅಗತ್ಯವಿದ್ದರೇ, ಇಂಗ್ಲೆಂಡ್‌ಗೆ ಈ ಟೆಸ್ಟ್ ಗೆಲ್ಲಲು 7 ವಿಕೆಟ್ ಕಬಳಿಸಬೇಕಿದೆ.