Cricket

1984ರಲ್ಲಿ ಏಷ್ಯಾಕಪ್ ಆರಂಭ

ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು 1984ರಲ್ಲಿ ಆರಂಭವಾಯಿತು. ಮೊದಲ ಬಾರಿಗೆ ಟೂರ್ನಿಯು ಯುಎಇನಲ್ಲಿ ಆಯೋಜನೆಯಾಗಿತ್ತು. 

Image credits: Social Media

ಟೀಂ ಇಂಡಿಯಾ ಚೊಚ್ಚಲ ಚಾಂಪಿಯನ್

ಮೂರು ದೇಶಗಳ ಪಾಲ್ಗೊಂಡಿದ್ದ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಚೊಚ್ಚಲ ಟೂರ್ನಿಯಲ್ಲೇ ಚಾಂಪಿಯನ್ ಆಗಿತ್ತು.

Image credits: Social Media

ಮೊದಲ ಬಾರಿ 3 ತಂಡಗಳು ಭಾಗಿ

1984ರ ಚೊಚ್ಚಲ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಮಾತ್ರ ಪಾಲ್ಗೊಂಡಿದ್ದವು

Image credits: Social Media

2016ರಲ್ಲಿ ಟಿ20 ಮಾದರಿ

2016ಕ್ಕೂ ಮೊದಲು ಏಷ್ಯಾಕಪ್ ಟೂರ್ನಿಯು ಏಕದಿನ ಮಾದರಿಯಲ್ಲಿತ್ತು. 2016 ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು, ಆ ವರ್ಷ ಬಾಂಗ್ಲಾದೇಶದಲ್ಲಿ ಏಷ್ಯಾಕಪ್ ಟೂರ್ನಿ ಟಿ20 ಮಾದರಿಯಲ್ಲಿ ಆಯೋಜನೆ

Image credits: Social Media

1990ರಲ್ಲಿ ಆಡಿರಲಿಲ್ಲ ಪಾಕ್‌

ಭಾರತ-ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಪಾಕಿಸ್ತಾನ ತಂಡವು ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಂಡಿರಲಿಲ್ಲ. ಯಾಕೆಂದರೆ ಭಾರತ ಟೂರ್ನಿಗೆ ಆತಿಥ್ಯ ವಹಿಸಿತ್ತು.

Image credits: Social Media

ಬಾಂಗ್ಲಾದೇಶ ಸೇರ್ಪಡೆ

1986ರಲ್ಲಿ ಮೊದಲ ಬಾರಿಗೆ ಬಾಂಗ್ಲಾದೇಶ ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಂಡಿತು. ಇನ್ನು 1988ರಲ್ಲಿ ಬಾಂಗ್ಲಾದೇಶ ಮೊದಲ ಬಾರಿಗೆ ಏಷ್ಯಾಕಪ್ ಟೂರ್ನಿಗೆ ಆತಿಥ್ಯ ವಹಿಸಿತು.

Image credits: Social Media

7 ಬಾರಿ ಚಾಂಪಿಯನ್ ಆಗಿದೆ ಭಾರತ:

ಟೀಂ ಇಂಡಿಯಾ ಇಲ್ಲಿಯವರೆಗೂ 7 ಬಾರಿ ಏಷ್ಯಾಕಪ್ ಚಾಂಪಿಯನ್ ಆಗಿದೆ. ಇನ್ನು ಶ್ರೀಲಂಕಾ 6 ಬಾರಿ ಹಾಗೂ ಪಾಕಿಸ್ತಾನ 2 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

Image credits: Social Media

ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್

ಶ್ರೀಲಂಕಾವೂ ಎಲ್ಲಾ 15 ಆವೃತ್ತಿಯಲ್ಲೂ ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದೆ. ಲಂಕಾದ ಆರಂಭಿಕ ಬ್ಯಾಟರ್ ಸನತ್ ಜಯಸೂರ್ಯ, ಏಷ್ಯಾಕಪ್‌ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ್ದಾರೆ.

Image credits: Social Media

2014ರಲ್ಲಿ ಆಫ್ಘಾನಿಸ್ತಾನ ಎಂಟ್ರಿ

ಏಷ್ಯಾಕಪ್ ಟೂರ್ನಿಯಲ್ಲಿ ಆಫ್ಘಾನ್ ತಂಡವು 2014ರಲ್ಲಿ ಮೊದಲ ಬಾರಿಗೆ ಪಾಲ್ಗೊಂಡಿತು. ಇದುವರೆಗೂ ಆಫ್ಘಾನ್ ಕಪ್ ಗೆದ್ದಿಲ್ಲವಾದರೂ, ಲಂಕಾ, ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಿದೆ
 

Image credits: Social Media

ಪಾಕ್‌ಗಿದೆ ಈ ಬಾರಿ ಕಪ್ ಗೆಲ್ಲುವ ಅವಕಾಶ:

ಪಾಕಿಸ್ತಾನ ಇದುವರೆಗೂ ಎರಡು ಬಾರಿ ಏಷ್ಯಾಕಪ್ ಚಾಂಪಿಯನ್ ಆಗಿದೆ. ಇದೀಗ ಟೂರ್ನಿಗೆ ಆತಿಥ್ಯದ ಹಕ್ಕು ಪಡೆದಿರುವ ಪಾಕ್, ಮೂರನೇ ಬಾರಿಗೆ ಚಾಂಪಿಯನ್ ಆಗಲು ಹವಣಿಸುತ್ತಿದೆ.
 

Image credits: Social Media
Find Next One