Cine World
ನಟಿ ಅದಾ ಶರ್ಮಾ ಸದ್ಯ ದಿ ಕೇರಳ ಸ್ಟೋರಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.
ಈಗಾಗಲೇ ಭಾರಿ ವಿವಾದ ಸೃಷ್ಟಿಸಿರುವ ದಿ ಕೇರಳ ಸ್ಟೋರಿ ಇದೇ ತಿಂಗಳು ಮೇ 5ರಂದು ರಿಲೀಸ್ ಆಗುತ್ತಿದೆ.
ಬಾಲಿವುಡ್ ನಟಿ ಅದಾ ಶರ್ಮಾ ಕನ್ನಡದ ರಣ ವಿಕ್ರಮ ಸಿನಿಮಾದಲ್ಲಿ ನಟಿಸಿದ್ದರು. ಪವರ್ ಸ್ಟಾರ್ ಜೊತೆ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದರು.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂದರೆ ಅದಾ ಶರ್ಮಾಗೆ ತುಂಬಾ ಇಷ್ಟ. ರಣ ವಿಕ್ರಮ ಸಿನಿಮಾದಲ್ಲಿ ನಟಿಸಿದ ನಂತರ ನೆಚ್ಚಿನ ನಟ ಯಾರೆಂದು ಕೇಳಿದ್ರು ಅಪ್ಪು ಅಂತಾರೆ.
ಪುನೀತ್ ರಾಜ್ ಕುಮಾರ್ ಅಭಿಮಾನಿಗಳನ್ನು ತುಂಬಾ ಪ್ರೀತಿಸುತ್ತಿದ್ದರು ಎಂದು ಅದಾ ಶರ್ಮಾ ಹೇಳಿದ್ದಾರೆ.
ದಿ ಕೇರಳ ಸ್ಟೋರಿ ಸಿನಿಮಾ ಸದ್ಯ ಭಾರಿ ವಿರೋಧ ವ್ಯಕ್ತವಾಗಿದೆ. ಈ ಸಿನಿಮಾ ರಿಲೀಸ್ ಮಾಡಬಾರದು ಎಂದು ಕೇರಳದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಎಲ್ಲರೂ 2 ಗಂಟೆ ಸಮಯ ಮಾಡಿಕೊಂಡು ನಮ್ಮ ಸಿನಿಮಾ ನೋಡಲಿ. ಕೇರಳವನ್ನು ನಾವು ಕೆಟ್ಟದಾಗಿ ತೋರಿಸಿಲ್ಲ ಎಂದು ಅದಾ ಶರ್ಮಾ ಹೇಳಿದ್ದಾರೆ
ಕೆಲಸ ಹುಡುಕಿ ಹೋಗುವ ಕೇರಳದ ಅನೇಕ ಯುವತಿಯರನ್ನು ಭಯೋತ್ಪಾದಕ ಸಂಘಟನೆಗಳಿಗೆ ಸೇರುವಂತೆ ಬ್ರೈನ್‌ವಾಶ್ ಮಾಡಲಾಗುತ್ತಿದೆ ಎನ್ನುವ ಆರೋಪವಿದೆ.
ಡಿಂಗ್ ಡಾಂಗ್ ಲುಕ್ಕಲ್ಲಿ ರಾಖಿ ಸಾವಂತ್!
ಹೊಸ ಫೋಟೋಶೂಟ್‌ನಲ್ಲಿ ಮೋಡಿ ಮಾಡಿದ ಪಟಾಕ ಸುಂದರಿ ನಭಾ ನಟೇಶ್
ಅನುಷ್ಕಾ ಶರ್ಮಾಗೆ ಹುಟ್ಟುಹಬ್ಬದ ಸಂಭ್ರಮ; ಇಲ್ಲಿವೆ ಸುಂದರ ಫೋಟೋಗಳು
ಸಮಂತಾ 36ನೇ ಹುಟ್ಟುಹಬ್ಬ; ಯಾರಿಗೂ ತಿಳಿಯದ ಸೀಕ್ರೆಟ್ಸ್