Cine World

ಜನ್ಮದಿನದ ಸಂಭ್ರಮದಲ್ಲಿ ಅನುಷ್ಕಾ ಶರ್ಮಾ

ಬಾಲಿವುಡ್ ಸ್ಟಾರ್ ನಟಿ ಅನುಷ್ಕಾ ಶರ್ಮಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅನುಷ್ಕಾ ಅವರಿಗೆ ಅಭಿಮಾನಿಗಳಿಂದ, ಗಣ್ಯರಿಂದ ಶುಭಾಶಯಗಳ ಸುರಿಮಳೆಯೇ ಬರುತ್ತಿದೆ. 

ರಬ್ ನೆ ಬನಾ ದಿ ಜೋಡಿ ಮೊದಲ ಸಿನಿಮಾ

ಅನುಷ್ಕಾ ಶರ್ಮಾ ರಬ್ ನೆ ಬನಾ ದಿ ಜೋಡಿ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟರು. ಮೊದಲ ಸಿನಿಮಾದಲ್ಲೇ ಶಾರುಖ್ ಖಾನ್ ಜೊತೆ ನಟಿಸಿ ಸೈ ಎನಿಸಿಕೊಂಡರು. 

ಅನೇಕ ಜಾಹೀರಾತಿಗಳಲ್ಲಿ ಮಿಂಚಿಂಗ್

ಅನುಷ್ಕಾ ಶರ್ಮಾ ಸಿನಿಮಾ ಜೊತೆಗೆ ಅನೇಕ ಜಾಹೀರಾತುಗಳಲ್ಲಿ ಮಿಂಚಿದ್ದಾರೆ. ಈಗಲೂ ಅನುಷ್ಕಾ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ವಿರಾಟ್ ಕೊಹ್ಲಿ ಜೊತೆ ಮೊದಲ ಶಾಂಪು ಜಾಹೀರಾತು

2013ರಲ್ಲಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೊದಲ ಬಾರಿಗೆ ಶಾಂಪು ಜಾಹೀರಾತಿನಲ್ಲಿ ಕಾಣಿಸಿಕೊಂಡರು. ಅಲ್ಲಿಂದ ಇಬ್ಬರ ಡೇಟಿಂಗ್ ಪ್ರಾರಂಭ.

2017ರಲ್ಲಿ ವಿರಾಟ್ ಕೊಹ್ಲಿ ಜೊತೆ ಮದುವೆ

ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಅನೇಕ ವರ್ಷಗಳ ಪ್ರೀತಿಯ ಬಳಿಕ 2017ರಲ್ಲಿ ಮದುವೆಯಾದರು. ಈ ಜೋಡಿಗೆ ವಮಿಕಾ ಮಗಳಿದ್ದಾರೆ. 

ಅನುಷ್ಕಾ ಬಳಿ ಇರುವ ಸಿನಿಮಾಗಳು

ಅನುಷ್ಕಾ ಮದುವೆ ಮತ್ತು ಮಗುವಿಗೆ ಜನ್ಮ ನೀಡಿದ ಬಳಿಕ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡರು. ಝೀರೋ ಸಿನಿಮಾ ಬಳಿಕ ಮತ್ತೆ ಸಿನಿಮಾ ಮಾಡಿಲ್ಲ. 

'ಚಕ್ದ ಎಕ್ಸ್‌ಪ್ರೆಸ್‌'ನಲ್ಲಿ ಅನುಷ್ಕಾ ನಟನೆ

ಚಕ್ದ ಎಕ್ಸ್‌ಪ್ರೆಸ್ ಸಿನಿಮಾದಲ್ಲಿ ಅನುಷ್ಕಾ ಶರ್ಮಾ ನಟಿಸುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿದ್ದು ರಿಲೀಸ್‌ಗೆ ರೆಡಿಯಾಗಿದೆ.  
 

ಸಮಂತಾ 36ನೇ ಹುಟ್ಟುಹಬ್ಬ; ಯಾರಿಗೂ ತಿಳಿಯದ ಸೀಕ್ರೆಟ್ಸ್‌