ದಕ್ಷಿಣ ಭಾರತೀಯ ಚಲನಚಿತ್ರ ಪ್ರಿಯರಿಗೆ ಅಕ್ಟೋಬರ್ ತಿಂಗಳು ಬಂಪರ್ ಆಫರ್. ಯಾಕಂದ್ರೆ ರಜನಿಕಾಂತ್ ಸಿನಿಮಾದಿಂದ ಹಿಡಿದು ಶಿವಣ್ಣನ ಸಿನಿಮಾವರೆಗೂ ಹಲವು ಬಹು ನಿರೀಕ್ಷಿತ ಸಿನಿಮಾಗಳು ರಿಲೀಸ್ ಆಗಲಿವೆ.
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಮತ್ತು ರಜನಿಕಾಂತ್ ನಟಿಸಿರುವ, ತಮಿಳು ಆಕ್ಷನ್ ಡ್ರಾಮಾ ಜೈಲರ್ 2 ಈ ವರ್ಷದ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಇದು ಮಲ್ಟಿ ಸ್ಟಾರರ್ ಸಿನಿಮಾ ಕೂಡ ಹೌದು.
ವಿಜಯ್ ಸೇತುಪತಿ ಮತ್ತು ಲಿಜೋಮೋಲ್ ಜೋಸ್ ಪ್ರಮುಖ ಪಾತ್ರದಲ್ಲಿ ನಟಿಸಿದ ಬಾಲಾಜಿ ತರಣೀತರನ್ ನಿರ್ದೇಶನದ ಈ ತಮಿಳು ಆಕ್ಷನ್ ಸಿನಿಮಾ. ಇದು ರಿಯಲ್ ಕಥೆಯನ್ನು ಆಧರಿಸಿದ ಸಿನಿಮಾ.
ಬೇಲ್ ಕನ್ನಡದ ಆಕ್ಷನ್ ಡ್ರಾಮಾ ಚಿತ್ರ. ಪವನ್ ಒಡೆಯರ್ ನಿರ್ದೇಶಿಸಿದ್ದಾರೆ. ಶಿವ ರಾಜ್‌ಕುಮಾರ್, ಸಂಜನಾ ಆನಂದ್, ದೀಕ್ಷಿತ್ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ, ಸಾಯಿ ಕುಮಾರ್ ಮತ್ತು ಜಯರಾಮ್ ನಟಿಸಿದ್ದಾರೆ.
ಫಹಾದ್ ಫಾಸಿಲ್, ಸಾರಾ ಪಾಲೇಕರ್, ಸೌರಭ್ ಸಚ್‌ದೇವ ಅಭಿನಯದ ಡೋಂಟ್ ಟ್ರಬಲ್ ದಿ ಟ್ರಬಲ್ ಚಿತ್ರವನ್ನು. ಶಶಾಂಕ್ ಯೆಲೇಟಿ ನಿರ್ದೇಶನ ಮಾಡಿದ್ದು, ಇದು ಒಂದು ಫ್ಯಾಂಟಸಿ ಚಿತ್ರವಾಗಿದೆ.
ವೆಂಕಟೇಶ್ ದಗ್ಗುಬಾಟಿ, ಶ್ರೀನಿಧಿ ಶೆಟ್ಟಿ, ನಾರಾ ರೋಹಿತ್, ನಿವೇತಾ ಪೇತುರಾಜ್, ಯುವಿನಾ, ರಾಜ್ ಪ್ರಜ್ವಲ್, ಮತ್ತು ರಾವ್ ರಮೇಶ್ ನಟನೆಯ ಈ ಸಿನಿಮಾವನ್ನು, ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾದಿದ್ದಾರೆ.
ಜೇಸನ್ ಸಂಜಯ್ ನಿರ್ದೇಶನದ ಆಕ್ಷನ್ ಸಾಹಸಮಯ ಚಿತ್ರ ‘ಸಿಗ್ಮಾ’. ಈ ತಮಿಳು ಚಿತ್ರದಲ್ಲಿ ಸಂದೀಪ್ ಕಿಶನ್, ಫರಿಯಾ ಅಬ್ದುಲ್ಲಾ, ಸಂಪತ್ ರಾಜ್, ಶಿವ ಪಂಡಿತ್ ನಟಿಸಿದ್ದಾರೆ.
ಮಹೇಶ್ ಉಪ್ಪಳ ನಿರ್ದೇಶನದ ರೋಮ್ಯಾಂಟಿಕ್ ಆಕ್ಷನ್ ಡ್ರಾಮಾ ‘ಇಟ್ಲು ಅರ್ಜುನ’ ವರ್ಷದ ಬಹು ನಿರೀಕ್ಷಿತ ಚಿತ್ರ. ಇದರಲ್ಲಿ ಅನಸ್ವರ ರಾಜನ್, ಅನೀಶ್, ವೆನ್ನೆಲ ಕಿಶೋರ್ ನಟಿಸುತ್ತಿದ್ದಾರೆ.
'ಇರಂಡು ವಾನಂ' ವಿಷ್ಣು ವಿಶಾಲ್ ಮತ್ತು ಮಮಿತಾ ಬೈಜು ನಟಿಸಿರುವ ರಾಮ್ ಕುಮಾರ್ ನಿರ್ದೇಶನದ ಈ ತಮಿಳು ಫ್ಯಾಂಟಸಿ ರೊಮ್ಯಾಂಟಿಕ್ ಡ್ರಾಮಾ.
ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಮತ್ತು ಅರ್ನಾಲ್ಡ್ ವೋಸ್ಲೂ ನಟಿಸಿರುವ ಆಕ್ಷನ್ ಡ್ರಾಮಾ ವಿಜಯ್ ಮತ್ತು ರಶ್ಮಿಕಾ ಅವರ ಮದುವೆಯ ನಂತರ ಜೊತೆಯಾಗಿ ನಟಿಸಿದ ಮೊದಲ ಸಿನಿಮಾ.