Kannada

ದೇಶಭಕ್ತಿಯ ಚಲನಚಿತ್ರಗಳು

ಭಾರತವು ಆಗಸ್ಟ್ 15 ರಂದು ತನ್ನ 80 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲು ಸಜ್ಜಾಗಿದೆ. ಈ ಸಂದರ್ಭದಲ್ಲಿ OTT ಪ್ಲಾಟ್‌ಫಾರ್ಮ್‌ಗಳಲ್ಲಿ ನೋಡಿ ದೇಶಭಕ್ತಿಯನ್ನು ಹೆಚ್ಚಿಸುವ ಸೂಪರ್ ಹಿಟ್ ಸಿನಿಮಾಗಳು.

Kannada

ಧುರಂಧರ್ ಭಾಗ 1 ಮತ್ತು ಭಾಗ 2- ನೆಟ್‌ಫ್ಲಿಕ್ಸ್‌

ಆದಿತ್ಯ ಧರ್ ನಿರ್ದೇಶನದ ಧುರಂಧರ್, ಕರಾಚಿಯಲ್ಲಿರುವ ಭಯೋತ್ಪಾದಕ ಜಾಲವನ್ನು ನುಸುಳುವ ಭಾರತೀಯ ಗೂಢಚಾರನ ಆಕ್ಷನ್ ಥ್ರಿಲ್ಲರ್ ಚಿತ್ರ. ಈ ಚಿತ್ರದಲ್ಲಿ ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್ ನಟಿಸಿದ್ದಾರೆ.

Image credits: social media
Kannada

ಆಪರೇಷನ್ ಸಫೇದ್ ಸಾಗರ್

ನೆಟ್‌ಫ್ಲಿಕ್ಸ್‌ನ ಇತ್ತೀಚಿನ ಸೀರೀಸ್ "ಆಪರೇಷನ್ ಸಫೇದ್ ಸಾಗರ್" 1999 ರ ಕಾರ್ಗಿಲ್ ಯುದ್ಧದ ಚಿತ್ರವಾಗಿದೆ. ಭಾರತೀಯ ವಾಯುಪಡೆಯ ಕಥೆಯನ್ನು ಹೊಂದಿರುವ ಸಿನಿಮಾ ಇದಾಗಿದೆ.

Image credits: social media
Kannada

ಸ್ಯಾಮ್ ಬಹದ್ದೂರ್ - ಝೀ 5

ಈ ವಾರ್ ಡ್ರಾಮಾ ಭಾರತದ ಮೊದಲ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೆಕ್ಷಾ ಅವರ ಜೀವನವನ್ನು ಆಧರಿಸಿದೆ. ಮೇಘನಾ ಗುಲ್ಜಾರ್ ನಿರ್ದೇಶನದ ಈ ಚಿತ್ರದಲ್ಲಿ ವಿಕ್ಕಿ ಕೌಶಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Image credits: social media
Kannada

ಭುಜ್: ದಿ ಪ್ರೈಡ್ ಆಫ್ ಇಂಡಿಯಾ -ಡಿಸ್ನಿ+ ಹಾಟ್‌ಸ್ಟಾರ್‌

ಈ ಚಿತ್ರದಲ್ಲಿ ಅಜಯ್ ದೇವಗನ್, ಸೋನಾಕ್ಷಿ ಸಿನ್ಹಾ, ಸಂಜಯ್ ದತ್ ನಟಿಸಿದ್ದಾರೆ. ಈ ಚಿತ್ರವು 1971 ರ ಇಂಡೋ-ಪಾಕಿಸ್ತಾನಿ ಯುದ್ಧದ ಸಮಯದಲ್ಲಿ ಭಾರತೀಯ ವಾಯುಪಡೆಯ ಶೌರ್ಯವನ್ನು ಪ್ರದರ್ಶಿಸುತ್ತದೆ.

Image credits: social media
Kannada

ರಂಗ್ ದೇ ಬಸಂತಿ - ಡಿಸ್ನಿ+ ಹಾಟ್‌ಸ್ಟಾರ್‌

ರಂಗ್ ದೇ ಬಸಂತಿ ಕಾಲೇಜು ಸ್ನೇಹಿತರ ಕಥೆ. ಸ್ವಾತಂತ್ರ್ಯ ಹೋರಾಟಗಾರರ ಸಾಕ್ಷ್ಯಚಿತ್ರ ನೋಡಿ, ತಮ್ಮ ದೇಶಕ್ಕಾಗಿ ಸೇವೆ ಮಾಡಲು ಸ್ಫೂರ್ತಿ ಪಡೆದು, ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ.

Image credits: social media
Kannada

ಘಾಜಿ ಅಟ್ಯಾಕ್ - ಪ್ರೈಮ್ ವಿಡೀಯೋ

'ದಿ ಘಾಜಿ ಅಟ್ಯಾಕ್' 1971 ರ ಇಂಡೋ-ಪಾಕಿಸ್ತಾನ ಯುದ್ಧದ ನೈಜ ಘಟನೆ ಆಧರಿಸಿದ ಚಿತ್ರ. ಈ ಚಿತ್ರವು ಭಾರತೀಯ ಜಲಾಂತರ್ಗಾಮಿ S21 ಮತ್ತು ಪಾಕ್ ಜಲಾಂತರ್ಗಾಮಿ PNS ಘಾಜಿ ನಡುವಿನ ನೌಕಾ ಯುದ್ಧದ ಮೇಲೆ ಕೇಂದ್ರೀಕರಿಸುತ್ತದೆ.

Image credits: social media
Kannada

ಉರಿ: ದಿ ಸರ್ಜಿಕಲ್ ಸ್ಟ್ರೈಕ್ -ಝೀ 5

ಈ ವಾರ್ ಆಕ್ಷನ್ ಚಿತ್ರವು 2016 ರ ಉರಿ ದಾಳಿಯ ನೈಜ ಕಥೆಯನ್ನು ಆಧರಿಸಿದೆ. ವಿಕ್ಕಿ ಕೌಶಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ, ಈ ಸಿನಿಮಾ ಪ್ಯಾರಾ (ವಿಶೇಷ ಪಡೆ) ಮೇಜರ್ ವಿಹಾನ್ ಶೆರ್ಗಿಲ್ ಅವರ ಕಥೆಯನ್ನು ಹೇಳುತ್ತದೆ.

Image credits: social media
Kannada

ರಾಝಿ

ರಾಝಿ ಚಿತ್ರ ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ. ಪಾಕಿಸ್ತಾನಿ ಅಧಿಕಾರಿಯ ಮನೆಗೆ ಮದುವೆಯಾಗಿ ಹೋಗಿ ಗೂಢಾಚಾರಿಯಾಗಿ ಕೆಲಸ ಮಾಡುವ ಭಾರತೀಯಳ ಕಥೆ.

Image credits: social media

ನೋಡಲು ಫಿಟ್ ಆಗಿರುವ ಈ ಸುಂದರ ನಟಿಯರಿಗಿದೆ ಬಲು ಅಪರೂಪದ ಕಾಯಿಲೆ

OTTಯಲ್ಲಿ ನೋಡಬೇಕಾದ 7 ಡಾರ್ಕ್ ಸೈಕಲಾಜಿಕಲ್ ಥ್ರಿಲ್ಲರ್‌ ಸಿನಿಮಾಗಳು

ಈ ವಾರ OTTಗೆ ಎಂಟ್ರಿ ಕೊಟ್ಟ ಸಿನಿಮಾಗಳಿವು… ಭರ್ಜರಿ ಮನರಂಜನೆ ನಿಮ್ಮದು

ಮಹಿಳಾ ನಿರ್ದೇಶಕಿಯರೇ ನಿರ್ದೇಶಿಸಿದ ಮಹಿಳಾ ಕೇಂದ್ರಿದ ಸಿನಿಮಾಗಳು Don't Miss It