ಥ್ರಿಲ್ಲಿಂಗ್ ಅನುಭವ ನೀಡುವ ಸರ್ವೈವಲ್ ಸಿನಿಮಾಗಳನ್ನು ನೀವು ಇಷ್ಟಪಟ್ಟರೆ, ಈ ಸಿನಿಮಾಗಳು ನಿಮಗಾಗಿ. ಮಿಸ್ ಮಾಡದೆ ನೋಡಿ.
cine-world Apr 09 2026
Author: Pavna Das Image Credits:social media
Kannada
ದಿ ಗೋಟ್ ಲೈಫ್
ಪೃಥ್ವಿರಾಜ್ ಸುಕುಮಾರನ್ ನಟಿಸಿರುವ ಈ ಸಿನಿಮಾ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ನೀವು ನೋಡಬಹುದು. ಸೌದಿ ಅರೇಬಿಯಾದ ಮರುಭೂಮಿಯಲ್ಲಿ ಏಕಾಂಗಿಯಾಗಿ ಜೀವಿಸುವ ವ್ಯಕ್ತಿಯ ಕಥೆ.
Image credits: social media
Kannada
ಮಂಜುಮ್ಮಲ್ ಬಾಯ್ಸ್
ಈ ಸಿನಿಮಾವನ್ನು ಜಿಯೋ ಹಾಟ್ ಸ್ಟಾರ್ ನಲ್ಲಿ ನೀವು ನೋಡಬಹುದು. ಕೊಡೈಕೆನಲ್ ನ ಗುಣ ಕೇವ್ ಗೆ ತೆರಳುವ ಫ್ರೆಂಡ್ಸ್ ಗ್ಯಾಂಗ್ ಮುಂದೆ ಎದುರಾಗುವ ದುರ್ಘಟನೆಯ ಕಥೆ.
Image credits: social media
Kannada
ಟ್ರಾಪ್ಡ್
ಜೀ 5 ಮತ್ತು ಅಮೇಜಾನ್ ಪ್ರೈಂ ನಲ್ಲಿ ಈ ಸಿನಿಮಾ ಕಾಣಬಹುದು. ನಿರ್ಮಾಣ ಹಂತದ ಕಟ್ಟದದಲ್ಲಿ ಬಂಧಿಯಾಗಿ ಹೊರಬರಲು ಸಾಹಸ ಪಡುವ ಯುವಕನ ಕಥೆ ಇದು. ಸಖತ್ ಥ್ರಿಲ್ಲಿಂಗ್ ಆಗಿದೆ.
Image credits: social media
Kannada
2018
ಕೇರಳದಲ್ಲಿ ಉಂಟಾದ ಪ್ರವಾಹದ ಕುರಿತಾದ ಕಥೆ ಇದೆ. ಯಾವ ರೀತಿ ಊರಿನ ಜನ ತಮ್ಮನ್ನು ತಾವು ಉಳಿಸಲು ಸಾಹಸ ಮಾಡುತ್ತಾರೆ ಎನ್ನುವ ಕಥೆ. ಇದನ್ನು ಸೋನಿ ಲೈವ್ ನಲ್ಲಿ ಕಾಣಬಹುದು.
Image credits: social media
Kannada
NH 10
ಅನುಷ್ಕಾ ಶರ್ಮಾ ನಟಿಸಿರುವ ಸಿನಿಮಾ. ರೋಡ್ ಟ್ರಿಪ್ ಗೆ ತೆರಳುವ ಪತಿ-ಪತ್ನಿ ಮರ್ಯಾದೆ ಹತ್ಯೆಯನ್ನು ಕಣ್ಣ ಮುಂದೆ ನೋಡುತ್ತಾರೆ. ನಂತರ ಇವರ ಜೀವನದಲ್ಲಿ ನಡೆಯುತ್ತದೆ ದೊಡ್ಡ ಟ್ರಾಜಿಡಿ.
Image credits: social media
Kannada
ಹೆಲೆನ್
ಈ ಸಿನಿಮಾವನ್ನು ಅಮೇಜಾನ್ ಪ್ರೈಂ ನಲ್ಲಿ ಕಾಣಬಹುದು. ತಾನು ಕೆಲಸ ಮಾಡುವ ಕೆಫೆಯ ಫ್ರೀಜರ್ ರೂಮಲ್ಲಿ ಅಚಾನಕ್ ಆಗಿ ಬಂಧಿಯಾಗುವ ಹೆಲೆನ್, ಯಾವ ರೀತಿ ತನ್ನ ಉಳಿವಿಗಾಗಿ ಶ್ರಮಿಸುತ್ತಾಳೆ ಎನ್ನುವ ಕಥೆ ಇದೆ.
Image credits: social media
Kannada
ಮಲಯಾಂಕುಂಜು
ಇದನ್ನು ಅಮೇಜಾನ್ ಪ್ರೈಂ ನಲ್ಲಿ ಕಾಣಬಹುದು. ಈ ಸಿನಿಮಾದಲಿ ಭೂಕಂಪದಲ್ಲಿ ಸಿಲುಕಿಕೊಮ್ಡ ವ್ಯಕ್ತಿ ಹೇಗೆ ಅದರಿಂದ ಹೊರ ಬರುತ್ತಾನೆ ಎನ್ನುವ ಕಥೆಯನ್ನು ಹೊಂದಿದೆ.